ಸೆಲ್ಫಿ ವಿಡಿಯೋ ಮಾಡಿ ಮಕ್ಕಳ ಎದುರೇ ತಾಯಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಮಕ್ಕಳ ಎದುರೇ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನ ಅರುಂಧತಿ ನಗರದಲ್ಲಿ ನಡೆದಿದೆ. 30 ವರ್ಷದ ಫಾತಿಮಾ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಈಕೆ ತಮ್ಮ ಇಬ್ಬರು ಮಕ್ಕಳ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಫಾತಿಮಾ ಅವರು ಕೆಲ ವರ್ಷದಿಂದ ಗಲ್ಫ್ ದುಬೈ, ಕುವೈತ್ನಲ್ಲಿ ಮನೆಗೆಲಸ ಮಾಡಿದ್ದು, ಅಲ್ಲಿ ಗಳಿಸಿದ ಸುಮಾರು ₹ 9 ಲಕ್ಷ ಹಣವನ್ನು ಅವರ ಕುಟುಂಬಸ್ಥರಿಗೆ ಕಳಿಸುತ್ತಿದ್ದರು. ಆದರೆ ಈಗ ತಾನು ಕಳುಹಿಸಿದ್ದ […]
ಖ್ಯಾತ ಹಿಂದಿ ಕಿರುತೆರೆ ನಟಿ ಲೀನಾ ಆಚಾರ್ಯ ಇನ್ನಿಲ್ಲ
ಮುಂಬೈ: ಖ್ಯಾತ ಹಿಂದಿ ಕಿರುತೆರೆ ನಟಿ ಲೀನಾ ಆಚಾರ್ಯ ಕಿಡ್ನಿ ವೈಫಲ್ಯದಿಂದ ನಿಧನ ಹೊಂದಿದ್ದಾರೆ. ಲೀನಾ ಕಳೆದ ಒಂದೂವರೆ ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ತಾಯಿ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಆದರೂ ಆಕೆ ಬದುಕಲಿಲ್ಲ ಎಂದು ಸಹನಟ ವರ್ಷಿಪ್ ಖನ್ನಾ ತಿಳಿಸಿದ್ದಾರೆ. ಅವರು ಶೇಠ್ ಜೀ, ಆಪ್ ಕೇ ಆ ಜಾನೇ ಸೇ, ಮೇರಿ ಹಾನಿಕಾಕರ್ ಬೀವೀ ಹಾಗೂ ಕ್ಲಾಸ್ ಆಫ್ 2020 ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೆ, ಬಾಲಿವುಡ್‌ನ ಹಿಚ್ಕಿ ಸಿನಿಮಾದಲ್ಲೂ […]
ಕೇಂದ್ರ, ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿವೆ: ಸೊರಕೆ
ಉಡುಪಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಕೂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಮಾರಕವಾಗುವ ಮಸೂದೆಗಳನ್ನು ಜಾರಿಗೊಳಿಸಿ, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನರ ಜೀವನ ದುಸ್ತರವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು. ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದರು. ಸರ್ಕಾರವು ಕೊರೊನಾ ಹೆಸರಿನಲ್ಲಿ ಜನರ ಹಣ ಲೂಟಿ ಹೊಡೆಯುತ್ತಿದೆ. ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿ ಜನರನ್ನು ಸಂಕಷ್ಟದ […]