ಇಂಗ್ಲಿಷ್ ಕಲಿಕೆ ಇಂದಿನ ಅಗತ್ಯ: ಶಾಸಕ ಲಾಲಾಜಿ ಮೆಂಡನ್

ಹಿರಿಯಡಕ: ಅಂತರರಾಷ್ಟ್ರೀಯ ಸಂವಹನಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯುವುದು ಇಂದಿನ ಅನಿವಾರ್ಯ. ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆ ಜತೆಗೆ ಆಂಗ್ಲ ಮಾಧ್ಯಮಕ್ಕೂ ಒತ್ತು ನೀಡುವ ಅಗತ್ಯವಿದೆ. ಹಾಗಾಗಿ ಕಾಜಾರಗುತ್ತು ಶಾಲೆಯಲ್ಲಿ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ಅವರು ಇಂದು ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ […]

ಶಿರ್ವಾ: ನೀರು ಕೇಳುವ ನೆಪ ಮಾಡಿಕೊಂಡು ಬಂದ ಖದೀಮ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದ್ದು ಪರಾರಿ

ಶಿರ್ವಾ: ಕುಡಿಯಲು ನೀರು ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದ ಸುಲಿಗೆಕೋರನೊಬ್ಬ ವೃದ್ಧೆಯ ಕುತ್ತಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು‌ ಕದ್ದು ಪರಾರಿ ಆದ ಘಟನೆ ಕಾಪು ತಾಲ್ಲೂಕಿನ ಶಿರ್ವಾ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮೀಪ ನಡೆದಿದೆ. ಬಂಟಕಲ್ಲು ನಿವಾಸಿ ವಸಂತಿ (72) ಚಿನ್ನದ ಸರ ಕಳೆದುಕೊಂಡ ವೃದ್ಧೆ. ಇವರ ಮನೆಗೆ ಶನಿವಾರ ಸಂಜೆ 6.20ರ ವೇಳೆಗೆ ಬೈಕ್ ನಲ್ಲಿ ಬಂದ ಅಪರಿಚಿತನೊಬ್ಬ ಕುಡಿಯಲು ನೀರು ಕೇಳಿದ್ದಾನೆ. ನೀರು ಕುಡಿದ ಬಳಿಕ ವಸಂತಿ ಅವರ […]

ಕೋಟ: ಕಸಕ್ಕೆ ಬೆಂಕಿ ಹಾಕಲು ಹೋದ ವೃದ್ಧೆ ಬೆಂಕಿಗಾಹುತಿ

ಕೋಟ: ಕಸಕ್ಕೆ ಬೆಂಕಿ ಹಾಕುವ ಸಂದರ್ಭದಲ್ಲಿ ವೃದ್ಧೆಯೊಬ್ಬರು ಬೆಂಕಿಗೆ ಆಹುತಿ ಆದ ಘಟನೆ ಮಣೂರು ಜಟ್ಟಿಗೇಶ್ವರ ಎಂಬಲ್ಲಿ ಸಂಭವಿಸಿದೆ. ಮಣೂರು ಜಟ್ಟಿಗೇಶ್ವರದ ನಿವಾಸಿ ಬಾಗಿ (68) ಮೃತ ದುರ್ದೈವಿ. ಇವರು ಬೆಳಿಗ್ಗೆ ತನ್ನ ಮನೆಯ ವಠಾರದಲ್ಲಿದ್ದ ಕಸಗಟ್ಟಿಗಳನ್ನು ಒಗ್ಗೂಡಿಸಿ ಬೆಂಕಿ ಹಾಕುವ ವೇಳೆ ಸೀರೆಗೆ ಬೆಂಕಿ ತಾಗಿ ಇಡೀ ದೇಹಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಆಘಾತಕ್ಕೊಳಗಾದ ಬಾಗಿ ಅವರು, ಅಸ್ವಸ್ಥಗೊಂಡು ಬೆಂಕಿಯ ರಾಶಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯಿಂದ ತೀವ್ರ ಸ್ವರೂಪದ ಸುಟ್ಟಗಾಯವಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ […]

ಅಲೆವೂರು: ಉದ್ಯಮಿ ಹರೀಶ್ ಜಿ. ಶೆಟ್ಟಿ ನಿಧನ

ಅಲೆವೂರು: ಉದ್ಯಮಿ, ಸಮಾಜ ಸೇವಕ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆಅಂಗಡಿ ಅಲೆವೂರು ಇದರ ಸ್ಥಾಪಕ ಸದಸ್ಯ ಹರೀಶ್ ಜಿ. ಶೆಟ್ಟಿ (52) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರು ಪತ್ನಿ ಅಲೆವೂರು ಗ್ರಾಮ ಪಂಚಾಯಿತಿ ಸದಸ್ಯೆ ಯಶೋಧ ಎಚ್. ಶೆಟ್ಟಿ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ಬೇಕಾದ್ರೂ ಸಿದ್ಧ ಆದ್ರೆ, ಬಿಜೆಪಿಗೆ ಸೇರಲ್ಲ: ಸೌಗತ ರಾಯ್

ಕೋಲ್ಕತ್ತಾ: ನಾನು ರಾಜಕೀಯ ತೊರೆದು ಸಾಯಲು ಸಿದ್ಧ. ಆದರೆ ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಎಂದು ಟಿಎಂಸಿ ಸಂಸದ ಸೌಗತ ರಾಯ್ ಬಿಜೆಪಿ ನಾಯಕರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಅನುಭವಿ ಸಂಸದ ಸೌಗತ ರಾಯ್ ಸೇರಿದಂತೆ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸೌಗತ ರಾಯ್, ಇದೊಂದು ಬಿಜೆಪಿ ಪ್ರಚಾರದ […]