ಕನಸು ಕ್ರಿಯೇಷನ್ ನ ‘ಪ್ರಾರಬ್ಧ’ ಕನ್ನಡ ಕಿರುಚಿತ್ರ ಬಿಡುಗಡೆ

ಉಡುಪಿ: ಕನಸು ಕ್ರಿಯೇಷನ್ ನಡಿ ನಿರ್ಮಾಣಗೊಂಡ ‘ಪ್ರಾರಬ್ಧ’ ಕನ್ನಡ ಕಿರುಚಿತ್ರದ ಬಿಡುಗಡೆ ಸಮಾರಂಭ ಇಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ನಡೆಯಿತು. ತುಳು ಚಿತ್ರರಂಗದ ನವರಸ ನಾಯಕ ಭೋಜರಾಜ್ ವಾಮಂಜೂರ್ ಅವರು ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು. ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ತುಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಸೂರಜ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹರೀಶ್ ಕಾರ್ಕಳ, ಪ್ರಶಾಂತ್ ಹರಿಕಂಡಿಗೆ, ಶರತ್ ಕುಮಾರ್ ಭಂಡಾರಿ ಹಾಗೂ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು. ಈ […]

ಮಾಜಿ ಸಚಿವ ರೋಷನ್ ಬೇಗ್ ಬಂಧನ

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪ್ರಕರಣ ಸಂಬಂಧ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ನಿರಂತರ ವಿಚಾರಣೆ ಬಳಿಕ ರೋಷನ್‍ರನ್ನು ವಶಕ್ಕೆ ಪಡೆದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಂಗ ಬಂಧನದ ಆದೇಶದ ಬಳಿಕ ರೋಷನ್‍ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಯಿತು.

ರಾಗದ ಮೂಲಕ ಭಾವ ಮೂಡಿದಾಗಲೇ ಸಂಗೀತದ ವಿಕಸನ: ಅರವಿಂದ ಚೊಕ್ಕಾಡಿ

ಕಾರ್ಕಳ: ರಾಗದ ಮೂಲಕ ಭಾವ ಮೂಡಿದಾಗಲೇ ಸಂಗೀತದ ವಿಕಸನ ಎಂದು ಸಾಹಿತಿ ಅರವಿಂದ ಚೊಕ್ಕಾಡಿ‌ ಹೇಳಿದರು. ಅವರು ಕವಿ ಶ್ರೀನಿವಾಸ ಸಾಯಕ್ ಬರೆದ ನನ್ನದಲ್ಲದ ಕವಿತೆ ಕವನ ಸಂಕಲನವನ್ನು ಹಿರ್ಗಾನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಕಾವ್ಯದ ಸೃಷ್ಟಿಯೇ ಪ್ರೀತಿ, ಕಾವ್ಯವನ್ನು ಅಭಿವೃದ್ಧಿಪಡಿಸುವುದು ಶಬ್ದಗಳು, ಕಾವ್ಯಾಭಾವದ ಅಭಿವ್ಯಕ್ತಿ ಸೂಕ್ಷ್ಮತೆಗಳು ಅವಕಾಶಗಳು ತೆರೆದಂತೆ. ಶಬ್ದಗಳು ಭಾವಗಳನ್ನು ಕಲಾತ್ಮಕವಾಗಿ ವ್ಯಕ್ತಪಡಿಸುವಂತಿರುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಸಾಹಿತಿ ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಮಾತನಾಡಿದರು. ಕವಿ ಶ್ರೀನಿವಾಸ ನಾಯಕ್ ಉಪಸ್ಥಿತರಿದ್ದರು. ರವೀಂದ್ರ ಸಣ್ಣಕ್ಕಿಬೆಟ್ಟು ನಿರೂಪಿಸಿದರು. […]

ಸೂಡಾ ಕೊರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಾರ್ಕಳ: ಬೆಳ್ಮಣ್ ಗ್ರಾ.ಪಂ.ವ್ಯಾಪ್ತಿಯ ಸೂಡಾ ಗ್ರಾಮದ ಸೂಡಾ ಕೊರಾಜೆಯಲ್ಲಿ 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಕಾರ್ಯದರ್ಶಿ ನಾಗೇಶ್ ಉದ್ಯಾವರ ಇವರು ನ.  ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಶಿರ್ವ ಜಿ.ಪಂ. ಸದಸ್ಯರಾದ ವಿಲ್ಸನ್ ರೇಡ್ರಿಗಸ್, ತಾ.ಪಂ ಮಾಜಿ ಸದಸ್ಯರಾದ  ಕ್ಸೇವಿಯರ್ ಡಿಮೆಲ್ಲೊ,ಮಾಜಿ ಗ್ರಾ.ಪಂ ಸದಸ್ಯರಾದ ಶಂಕರ್ ಕುಂದರ್,ಜೀರಿ ಎಲ್ ಡಿಸೋಜ, ವಾರಿಜಾ ಪೂಜಾರಿ,ಗಣೇಶ್ ಶೆಟ್ಟಿ, ಸತೀಶ ಪೂಜಾರಿ, ಸ್ಥಳೀಯರಾದ ಮೆಲ್ವಿನ್ ಕಾಸ್ತೆಲಿನೊ, ಅನಿತಾ ಕಾಸ್ತೆಲಿನೊ, ಜಗನ್ನಾಥ ಮೂಲ್ಯ ಮೊದಲಾದವರು […]

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಪೇಜಾವರ ಶ್ರೀಪಾದರು

ತಿರುಪತಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಟಿಟಿಡಿ ವತಿಯಿಂದ ಶ್ರೀಗಳನ್ನು ಆದರ ಪೂರ್ವಕ ಸ್ವಾಗತಿಸಲಾಯಿತು. ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ಸದಸ್ಯ ಡಿ.ಪಿ. ಅನಂತ್ ಹಾಗೂ ಅರ್ಚಕವರ್ಗದವರು ಉಪಸ್ಥಿತರಿದ್ದರು. ಇದೇ ವೇಳೆ ಶ್ರೀಗಳು ಭೂವರಾಹಸ್ವಾಮಿಯ ದರ್ಶನ ಕೂಡ ಪಡೆದರು. ಲೋಕಕ್ಕೆ ಒದಗಿದ ಕೊರೊನಾ ವಿಪತ್ತು ದೂರವಾಗಿ ಒಳ್ಳೆಯ ಆರೋಗ್ಯ ಶಾಂತಿ ನೆಮ್ಮದಿ ಎಲ್ಲರಿಗೂ ಲಭಿಸಲಿ. ಅಯೋಧ್ಯೆ ರಾಮಮಂದಿರ ಕಾರ್ಯ ಸುಸೂತ್ರವಾಗಿ ನಡೆಯಲೆಂದು ವೆಂಕಟೇಶ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.