ಕಾರ್ಕಳ: ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅಭಿಮಾನಿಗಳಿಂದ ತಂಗುದಾನ, ದಾಸ್ತಾನು ಕೊಠಡಿ ನಿರ್ಮಾಣ
ಕಾರ್ಕಳ: ಇರ್ವತ್ತೂರು ಸಾರ್ವಜನಿಕ ಹಿಂದೂ ರುದ್ರಭೂಮಿಗೆ ತಂಗುದಾನ ಮತ್ತು ದಾಸ್ತಾನು ಕೊಠಡಿಯನ್ನು ಮಾಜಿ ಶಾಸಕ ದಿ. ಎಚ್. ಗೋಪಾಲ ಭಂಡಾರಿಯವರ ಇರ್ವತ್ತೂರು ಅಭಿಮಾನಿಗಳು ನಿರ್ಮಿಸಿಕೊಟ್ಟಿದ್ದು, ಅದರ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು. ಅವಲಿನ್ ಲೂಯಿಸ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಅಧ್ಯಾಪಕ ರಮಾನಂದ ಶೆಣೈ ಕೊಠಡಿ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾರ್ಕಳದ ಉದ್ಯಮಿ ವಿವೇಕ್ ಶೆಣೈ, ಮುಖಂಡರಾದ ಶ್ರೀನಿವಾಸ್ ಭಟ್, ಉಮಾನಾಥ್ ಶೆಣೈ, ಇಬ್ರಾಹಿಂ, ಗೋಪಾಲ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯರು ಚಂದ್ರರಾಜ ಅಧಿಕಾರಿ, ಉದಯ […]
ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್: ನಗರಸಭೆ, ಪುರಸಭೆ, ಪ.ಪ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ರಾಜ್ಯ ಸರ್ಕಾರವು ಅಕ್ಟೋಬರ್ 8ರಂದು ಹೊರಡಿಸಿದ್ದ ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಕ್ಟೋಬರ್ 8ರಂದು ರಾಜ್ಯ ಸರ್ಕಾರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ, ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಆದೇಶವನ್ನು ಕೋರ್ಟ್ ಇಂದು ರದ್ದು ಮಾಡಿದೆ. ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಹತ್ತು ದಿನಗಳ ಅವಕಾಶ ನೀಡಿದೆ. ಈ ಆದೇಶದಿಂದ ಈ ಚುನಾವಣಾ ಫಲಿತಾಂಶಗಳು ಅಮಾನತು ಸ್ಥಿತಿಯಲ್ಲಿರುತ್ತದೆ.
ವಿದ್ಯಾರ್ಥಿಗಳಿಗೆ ಡಿ. 10ರ ವರೆಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶ
ಉಡುಪಿ: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ನವೆಂಬರ್ 17 ರಿಂದ ಆರಂಭಿಸಲಾಗಿದ್ದು, 2019-20ನೇ ಸಾಲಿನಲ್ಲಿ ವಿತರಣೆಯಾಗಿರುವ ಪದವಿ/ ಸ್ನಾತಕೋತ್ತರ / ಡಿಪ್ಲೋಮಾ / ತಾಂತ್ರಿಕ/ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸುಗಳನ್ನು ಡಿಸೆಂಬರ್ 10 ರ ವರೆಗೆ ನಿಗಮದ ಬಸ್ಸುಗಳಲ್ಲಿ ಮಾನ್ಯ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಕಾಲೇಜುಗಳಿಗೆ ದಾಖಲಾಗಿರುವ ಪ್ರಸಕ್ತ ವರ್ಷದ ಶುಲ್ಕ ಪಾವತಿ ರಶೀದಿಯೊಂದಿಗೆ, 2019-20 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ತೋರಿಸಿ ಸಂಬಂಧಪಟ್ಟ ಕರಾರಸಾ ನಿಗಮದ ನಗರ, ಹೊರವಲಯ, […]
ಈ ಚಳಿಗಾಲದಲ್ಲಿ ಒಂದೊಳ್ಳೆ ಪ್ರವಾಸ ಮಾಡಲು ಇಲ್ಲಿದೆ ಭರ್ಜರಿ ಚಾನ್ಸ್: ‘ಡ್ರೀಮ್ ಹಾಲಿಡೇಸ್’ ಜೊತೆ ನಿಮ್ಮ ಪ್ರವಾಸದ ಕನಸು ನನಸು ಮಾಡಿ
ಚಳಿಗಾಲ ಶುರುವಾಗಿದೆ. ಸುತ್ತಲಿನ ಪರಿಸರವೀಗ ಕೂಲ್ ಆಂಡ್ ಕ್ಯೂಟ್ ಆಗಿದೆ. ಈ ಟೈಮ್ ನಲ್ಲಿ ಎಲ್ಲಾದ್ರೂ ನೀವೊಂದು ಪ್ರವಾಸ ಮಾಡಿದರೆ, ಹೊಸಹೊಸ ಊರಿನ ಪ್ರೇಕ್ಷಣೀಯ ಸ್ಥಳಗಳನ್ನು, ನೇಚರ್ ಸ್ಪಾಟ್ ಗಳನ್ನೋ ಆಸ್ವಾದಿಸಿದರೆ ಅದರಲ್ಲಿ ಸಿಗುವ ಮಜಾನೇ ಬೇರೆ. ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್”.ಯಸ್ ನೂರಾರು ಜನರ ಪ್ರವಾಸದ ಕನಸುಗಳನ್ನು ಈಗಾಗಲೇ ನನಸು ಮಾಡಿದೆ. ನೀವು ಕಂಡ ಪ್ರವಾಸದ ಕನಸುಗಳನ್ನೂ […]
ಉಡುಪಿ: ಮಾನಸಿಕ ಅಸ್ವಸ್ಥನಿಗೆ ಆಶ್ರಯ ಒದಗಿಸಿದ ‘ಹೊಸಬೆಳಕು’
ಉಡುಪಿ: ಹಲವು ತಿಂಗಳಿನಿಂದ ಮಣಿಪಾಲ ಪರಿಸರದಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ, ಅಪರಿಚಿತ ಮಾನಸಿಕ ಅಸ್ವಸ್ಥನನ್ನು ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದಿಂದ ರಕ್ಷಿಸಿ, ದೊಡ್ಡಣಗುಡ್ಠೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮೆರೆದ ಘಟನೆಯು ಕಳೆದ ನ 9ರಂದು ನಡೆದಿತ್ತು. ಇದೀಗ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮಣಿಪಾಲ ಹೊಸಬೆಳಕು ಆಶ್ರಮದಲ್ಲಿ ನೆಲೆ ಕಲ್ಪಿಸಲಾಗಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ […]