ಹರಿದ್ವಾರದಲ್ಲಿ ವಿಶ್ವೇಶತೀರ್ಥ ಶ್ರೀಗಳ ಹೆಸರಲ್ಲಿ ಸ್ನಾನ ಘಾಟ್: ಉತ್ತರಾಖಂಡ್ ಸರಕಾರದ ಭರವಸೆ

ಹರಿದ್ವಾರ: ಹರಿದ್ವಾರ ಪೇಜಾವರ ಮಠದ ಶಾಖಾ ಮಠ ಮಧ್ವಾಶ್ರಮದಲ್ಲಿ ಹರಿದ್ವಾರ ಪಟ್ಟಣ ಅಭಿವೃದ್ಧಿ ಮಂತ್ರಿ ಮದನ್ ಕೌಶಿಕ್ ಅವರು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಪೇಜಾವರ ಶಾಖಾ ಮಠದ ಕೃಷ್ಣಮಂದಿರದ ಹಿಂದೆ ಗಂಗಾ ನದಿಗೆ ಘಾಟ್ ನಿರ್ಮಾಣಕ್ಕೆ ಸಹಕರಿಸುತ್ತೇವೆ. ಹಾಗೆ ವಿಶ್ವೇಶತೀರ್ಥ ಶ್ರೀಪಾದರ ಹೆಸರನ್ನು ಗುರುಗಳ ಗೌರವಾರ್ಥ ಒಂದು ಮಾರ್ಗಕ್ಕೆ ನಾಮಕರಣ ಮಾಡುವುದಾಗಿ ಭರವಸೆ ನೀಡಿದರು.
ಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿಬಿದ್ದ ಪಿಕಪ್ ವಾಹನ

ಮಣಿಪಾಲ: ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಉರುಳುಬಿದ್ದ ಘಟನೆ ಪರ್ಕಳ ದೇವಿನಗರ ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿ ಸಂಭವಿಸಿದೆ. ಈ ಮಹೀಂದ್ರ ಪಿಕಪ್ ವಾಹನವೂ ಆಗುಂಬೆಯಿಂದ ಮಣಿಪಾಲದ ಸಂಚುರಿ ಫಾರ್ಮಿಗೆ ಕೋಳಿ ಮರಿಗಳನ್ನು ಸಾಗಾಟ ಮಾಡುತ್ತಿತ್ತು ಎನ್ನಲಾಗಿದೆ. ಇಂದು ಮುಂಜಾನೆ ಅತೀ ವೇಗವಾಗಿ ಬಂದ ವಾಹನವು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಮರಿಗೆ ಬಿದ್ದಿದೆ. ಈ ವೇಳೆ ಹೆದ್ದಾರಿ ಪಕ್ಕದಲ್ಲಿ ಅವಳಡಿಸಿದ್ದ ಸೂಚನಾಫಲಕವನ್ನು ವಾಹನ ಎಳೆದುಕೊಂಡು […]