ಕಾರ್ಕಳ: ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ನಲ್ಲಿ ರೂಪದರ್ಶಿಗಳಿಂದ ನೂತನ ಮಾದರಿಯ ಕಾಂಜಿವರಂ ಸೀರೆಗಳ ಬಿಡುಗಡೆ

ಕಾರ್ಕಳ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ರೂಪದರ್ಶಿಗಳಿಂದ ನೂತನ ಮಾದರಿಯ ಕಾಂಜಿವರಂ ಸೀರೆಗಳ ಬಿಡುಗಡೆ ಕಾರ್ಯಕ್ರಮವು ಭಾನುವಾರ ಮುಕ್ತವಾಹಿನಿಯ ಸಹಯೋಗದೊಂದಿಗೆ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ ನಲ್ಲಿ ನಡೆಯಿತು. ಪೂರ್ಣಿಮಾ ಸಮೂಹ ಸಂಸ್ಥೆಯ ಹಿರಿಯರಾದ ಉಮಾನಾಥ ಪ್ರಭು, ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿದ್ಯಾಲಯದ ರಿಜಿಸ್ಟ್ರಾರ್ ಯೋಗಿಶ್ ಹೆಗ್ಡೆ ಮಾತನಾಡುತ್ತಾ, ಪೂರ್ಣಿಮಾ ಪಾಂಡುರಂಗ ಪ್ರಭುರವರ ಯೋಜನೆ ಹಾಗೂ ಯೋಚನೆಯನ್ನು ಇಂದು ರವಿಪ್ರಕಾಶ್ ಪ್ರಭುರವರು ನೆರವೇರಿಸಿ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ನಲ್ಲಿ ಜನಮನ್ನಣೆ ಗಳಿಸಿದ್ದಾರೆ ಎಂದು ತಿಳಿಸಿದರು. ಪೂರ್ಣಿಮಾ ಸಿಲ್ಕ್ಸ್ನ […]

ಮಣಿಪಾಲ: ರೈಸ್ ಮಿಲ್ ಮಿಷನ್ ತಾಗಿ ವ್ಯಕ್ತಿ ಮೃತ್ಯು

ಮಣಿಪಾಲ: ರೈಸ್ ಮಿಲ್ ಮಿಷನ್ ತಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬಾಳ್ಕಟ್ಟದ ರೈಸ್ ಮಿಲ್ ನಲ್ಲಿ ಸಂಭವಿಸಿದೆ. ಮೃತರನ್ನು ಕೃಷ್ಣ ನಾಯ್ಕ್ (60) ಎಂದು ಗುರುತಿಸಲಾಗಿದೆ. ಇವರು ಬಾಳ್ಕಟ್ಟದ ಅನಿತಾ ನಾಯಕ್ ಮಾಲೀಕತ್ವದ ರೈಸ್ ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು‌. ಇಂದು ಮಧ್ಯಾಹ್ನ 12.15 ಸುಮಾರಿಗೆ ಆಕಸ್ಮಿಕವಾಗಿ ಮಿಷನ್ ತಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ […]

ಹರಿದ್ವಾರದ ಪತಂಜಲಿ ಯೋಗಪೀಠಕ್ಕೆ ಪೇಜಾವರ ಶ್ರೀಗಳಿಂದ ಭೇಟಿ

ಹರಿದ್ವಾರ: ಯೋಗಗುರು ಬಾಬಾ ರಾಮ್ ದೇವ್ ಸಾರಥ್ಯದ ಹರಿದ್ವಾರದ ಜಗತ್ಪಸಿದ್ಧ ಪತಂಜಲಿ ಯೋಗ ಪೀಠಕ್ಕೆ ಸೋಮವಾರ ಪೇಜಾವರ ಶ್ರೀಗಳು ಭೇಟಿ ನೀಡಿದರು. ಪತಂಜಲಿ ಆಯುರ್ವೇದ ಆಸ್ಪತ್ರೆ , ಆಯುರ್ವೇದ ವನ , ಪತಂಜಲಿ ಪೀಠದ ಉತ್ಮನ್ನ ಗಳ ಮಳಿಗೆ ಮೊದಲಾದ ಎಲ್ಲ ವಿಭಾಗಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಅತೀವ ಸಂತಸ ವ್ಯಕ್ತಪಡಿಸಿದರು. ಬಳಿಕ ರಾಮ್ ದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣರು ಶ್ರೀಗಳನ್ನು ಗೌರವಿಸಿದರು. ಶ್ರೀಗಳನ್ನು ರಾಮ್ ದೇವ್ ಅವರು ಗೌರವಿಸಿದರು. ಶ್ರೀವಿಶ್ವೇಶತೀರ್ಥ ಶ್ರೀಪಾದರನ್ನು ರಾಮ್ ದೇವ್ […]

ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ದೀಪಾವಳಿಗೆ ಭರ್ಜರಿ ಆಫರ್: ಪ್ರತಿ ಖರೀದಿಗೆ ಗಿಫ್ಟ್ ಕೂಪನ್, ಉಡುಗೊರೆ

ಉಡುಪಿ: ದೀಪಾವಳಿಗೆ ಹೊಸ ಮೊಬೈಲ್ ಖರೀದಿಸಬೇಕೆಂದು ಯೋಚಿಸಿದ್ದೀರಾ. ಹಾಗಾದರೆ ನೀವು, ತಡಮಾಡಬೇಡಿ ಬಲ್ಲಾಳ್ ಮೊಬೈಲ್ಸ್ ಶೋರೂಮ್ ಗೆ ಹೋಗಿ, ನಿಮ್ಮ ಕನಸಿನ ಮೊಬೈಲ್ ಖರೀದಿಯ ಜತೆಗೆ ಉಚಿತ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ. ಹೌದು, ಉಡುಪಿ ಕಲ್ಪನ ಚಿತ್ರಮಂದಿರದ ಎದುರಿನ ಓರಿಯನ್ ಬಿಲ್ಡಿಂಗ್ ನಲ್ಲಿರುವ *ಬಲ್ಲಾಳ್ ಮೊಬೈಲ್ಸ್* ಈ ದೀಪಾವಳಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಪ್ರತಿ ಖರೀದಿಗೆ ಗಿಫ್ಟ್ ಕೂಪನ್ ಹಾಗೂ ಉಚಿತ ಉಡುಗೊರೆಗಳನ್ನು ನೀಡುತ್ತಿದೆ. ಹಾಗೆ ಅದೃಷ್ಟಶಾಲಿಗಳು ಕಾರು, ಬುಲೆಟ್ ಹಾಗೂ ಸ್ಕೂಟಿ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದು. […]

ಕೋವಿಡ್ 19ನಿಂದ ಆಶಾ ಕಾರ್ಯಕರ್ತೆಯರ ಮೌಲ್ಯ ಜಗತ್ತಿಗೆ ಅನಾವರಣ: ರಾಘವೇಂದ್ರ ಕಿಣಿ

ಉಡುಪಿ: ಕೋವಿಡ್ 19 ಮಾರಕ ಸೋಂಕು ಅವರಿಸುತ್ತಿದ್ದಂತೆ ಮನುಷ್ಯನ ಜೀವನ ಶೈಲಿಯ ಮೇಲೆ ಗಮನಾರ್ಹ ಬದಲಾವಣೆಗಳನ್ನು ತಂದಿದಲ್ಲದೆ, ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಾಮಾನ್ಯ ಜನರನ್ನು ಜಾಗೃತಗೊಳಿಸುವ ಆಶಾ ಕಾರ್ಯಕರ್ತೆಯರ ಕಾರ್ಯವೂ ಜಗತ್ತಿಗೆ ಅನಾವರಣಗೊಂಡಿತು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಹೇಳಿದರು. ಅವರು ಭಾನುವಾರ ಉಡುಪಿ ಇಂದ್ರಾಳಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂದ್ರಾಳಿ, ಸಗ್ರಿ, […]