ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ: ದೇಶಾದ್ಯಂತ ವ್ಯಾಪಕ ಖಂಡನೆ

ನವದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಬಂಧನಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಕಾಶ್ ಜಾವಡೇಕರ್‌, ಸ್ಮೃತಿ ಇರಾನಿ, ರವಿಶಂಕರ ಪ್ರಸಾದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವಡೇಕರ್, ಇದು ಮಹಾರಾಷ್ಟ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ […]

ಬಾಲಿವುಡ್ ನಟ ಫರಾಜ್ ಖಾನ್ ವಿಧಿವಶ

ಮುಂಬೈ: 90ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ್ದ ನಟ ಫರಾಜ್ ಖಾನ್ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು. ಸರ್ಪಸುತ್ತು ಕಾಯಿಲೆಯಿಂದ ಬಳಲುತ್ತಿದ್ದ ಫರಾಜ್‌ಖಾನ್‌, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಕಾಯಿಲೆ ಹೃದಯದಿಂದ ಮೆದುಳಿನವರೆಗೆ ಪಸರಿಸಿತ್ತು. ಇದರಿಂದ ಚಿಕಿತ್ಸೆ ಫಲಕಾರಿಯಾಗದೆ ಫರಾಜ್ ಮೃತಪಟ್ಟಿದ್ದಾರೆ. ಈ ಕುರಿತು ನಟಿ ಪೂಜಾ ಭಟ್ ಟ್ವೀಟ್ ಮಾಡಿದ್ದು, ಫರಾಜ್ ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದು ತಿಳಿಸಿದ್ದಾರೆ. 90ರ ದಶಕದ ಮೆಹೆಂದಿ, ಫರೇಬ್‌ನಂತಹ ಹಲವು ಚಿತ್ರಗಳಲ್ಲಿ ನಾಯಕನಾಗಿ ಫರಾಜ್ […]

ಅರ್ನಬ್‌ ಗೋಸ್ವಾಮಿ ಬಂಧನ: ಗೃಹ ಸಚಿವ ಅಮಿತ್‌ ಶಾ ಆಕ್ರೋಶ

ನವದೆಹಲಿ: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಮಹಾರಾಷ್ಟ್ರ ಪೊಲೀಸರ ಕ್ರಮದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭದ ಮೇಲೆ ನಡೆದ ದಾಳಿಯಾಗಿದೆ ಎಂದು ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಮಂಚಿ: ಜನರಲ್ಲಿ ಭೀತಿ ಹುಟ್ಟಿಸಿದ್ದ ಹೆಬ್ಬಾವು ಕೊನೆಗೂ ಸೆರೆ

ಮಣಿಪಾಲ: ಕಳೆದ ಮೂರ್ನಾಲ್ಕು ದಿನಗಳಿಂದ 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರ ನಿವಾಸಿಗಳಲ್ಲಿ ಭೀತಿ‌ ಹುಟ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವೊಂದು ಕಡೆಗೂ ಸೆರೆಯಾಗಿದೆ. ನಿನ್ನೆ ರಾತ್ರಿ ರಾಜೀವನಗರದ ಗಣೇಶ್ ಆಚಾರ್ಯ ಎಂಬುವವರ ಮನೆಯ ಸಮೀಪ ಈ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ದೂರದ ಕಾಡಿಗೆ ಬಿಡಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಗಣೇಶ್ ಅವರ ಮನೆಯ ಬೇಲಿಯ ಬದಿಯಲ್ಲಿ ಈ ಹೆಬ್ಬಾವು ಪ್ರತ್ಯೇಕ್ಷಗೊಂಡಿತ್ತು. ಕೂಡಲೇ ಮನೆಯವರು ಉರಗ ತಜ್ಞ ಸುಧೀರ್ ರಾಜೀವನಗರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. […]

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ: ಡೆಮಾಕ್ರಟಿಕ್ ಪಕ್ಷದ ಜೋ‌ ಬೈಡನ್ ಗೆ ಭಾರಿ ಮುನ್ನಡೆ

ಅಮೆರಿಕಾ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಸದ್ಯದ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ‌ ಬೈಡನ್ ಗೆ 209 ಎಲೆಕ್ಟೋರಲ್ ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೈಡನ್ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆ 118 ಮತಗಳನ್ನು ಪಡೆದಿದ್ದಾರೆ. ಇನ್ನು ಕೊನೆಯ ಎರಡು ಹಂತಗಳ ಮತ ಎಣಿಕೆ ಬಾಕಿ ಇದೆ. ಅಮೆರಿಕಾದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದಾರೆ. ಅಧ್ಯಕ್ಷರಾಗಲು 270 ಜನಪ್ರತಿನಿಧಿಗಳ ಬೆಂಬಲ ಅಗತ್ಯವಿದೆ. ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯುತ್ತಾರೆ.