ಮಣಿಪಾಲ ಆರೋಗ್ಯ ಕಾರ್ಡ್: ನವೆಂಬರ್ 30ರ ವರೆಗೆ ನೋಂದಣಿ ವಿಸ್ತರಣೆ
ಮಣಿಪಾಲ: ಸಾರ್ವಜನಿಕ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯಕಾರ್ಡ್ 2020ರ ನೋಂದಣಿಯನ್ನು ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. 20ನೇ ವರ್ಷದ ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯು, ಒಂದು ವರ್ಷ ಮತ್ತು ಎರಡು ವರ್ಷದ ಯೋಜನೆಯ ಜೊತೆಗೆ ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ₹ 250/-, ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ₹ 500/- […]
ಆರ್ಆರ್ಆರ್ ಸಿನಿಮಾ ವಿವಾದ: ನಿರ್ದೇಶಕ ರಾಜಮೌಳಿಗೆ ಬೆದರಿಕೆ
ಹೈದರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ತೆಲುಗಿನ ಬಹುನಿರೀಕ್ಷಿತ ಸಿನಿಮಾ ‘ಆರ್ಆರ್ಆರ್’ ಇದೀಗ ವಿವಾದಕ್ಕೆ ಗುರಿಯಾಗಿದೆ. ನಿರ್ದೇಶಕ ರಾಜಮೌಳಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಟೀಸರ್ ನಲ್ಲಿ ಜೂನಿಯರ್ ಎನ್ಟಿಆರ್ ಧರಿಸಿದ್ದ ‘ಸ್ಕಲ್ ಕ್ಯಾಪ್’ (ಮುಸ್ಲಿಮರು ಧರಿಸುವ ಸಾಂಪ್ರದಾಯಿಕ ಟೋಪಿ) ವಿವಾದಕ್ಕೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ನಾಯಕರೊಬ್ಬರಿಂದ ಬೆದರಿಕೆ ಕರೆ ಕೂಡ ಬಂದಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದ್ದು, ಈ ನಡುವೆ ಎನ್ಟಿಆರ್ ಪಾತ್ರದ ಪರಿಚಯಕ್ಕಾಗಿ ಬಿಡುಗಡೆ ಮಾಡಿದ್ದ ಟೀಸರ್ನಲ್ಲಿ ಕೋಮರಾಮ್ ಭೀಮ್ […]
ಅಯೋಧ್ಯೆ: ಶ್ರೀರಾಮ ಲಲ್ಲಾನ ದರ್ಶನ ಪಡೆದ ಪೇಜಾವರ ಶ್ರೀ
ಅಯೋಧ್ಯೆ: ಅಯೋದ್ಯೆ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರು ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು (ನ.2) ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಅಲ್ಲಿನ ಮೇಲ್ವಿಚಾರಕರಿಂದ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಅಯೋಧ್ಯೆ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಾಲಯಕ್ಕೂ ಶ್ರೀಗಳು ಭೇಟಿ ನೀಡಿದರು. ಶ್ರೀರಾಮಲಲ್ಲಾ ಮೂರ್ತಿಗೆ ಚಾಮರ ಸೇವೆಗೈದು ದರ್ಶನ ಪಡೆದರು.
ನಟಿ, ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ
ಬಾಗಲಕೋಟೆ: ನಟಿ, ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳರು ಕರಮತ್ತು ತೋರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀ ನಿವಾಸದಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದೆ. ಬೆಂಗಳೂರಿನ ಆರ್.ಆರ್.ನಗರ ಚುನಾವಣೆ ಹಿನ್ನೆಲೆಯಲ್ಲಿ ಉಮಾಶ್ರೀ, ಮನೆಗೆ ಬೀಗ ಹಾಕಿಕೊಂಡು ಪ್ರಚಾರದಲ್ಲಿ ತೊಡಗಿದ್ದರು. ಹೀಗಾಗಿ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ತಡರಾತ್ರಿ ಮನೆ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಮನೆಯೊಳಗಿನ ಟ್ರಿಜರಿ ಒಡೆದಿದ್ದಾರೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಪೀಠೋಪಕರಣ, ದಿನ ಬಳಕೆಯ ವಸ್ತುಗಳು ಬಿಟ್ಟರೆ ಬೆಲೆ […]
ಚೈನೀಸ್ ಮೊಬೈಲ್ ಗೆ ಗುದ್ದು ನೀಡಲು ನಾಳೆಯಿಂದ ಬರ್ತಿದೆ ಮೈಕ್ರೋಮ್ಯಕ್ಸ್ ಇನ್-1: ಇಲ್ಲಿದೆ ಫಸ್ಟ್ ಲುಕ್
ಚೀನಾ ಬ್ರ್ಯಾಂಡ್ ಗಳಿಗೆ ಗುದ್ದು ನೀಡೋ ಸೂಪರ್ ಫೋನ್ ಒಂದು ನಾಳೆ ರಿಲೀಸ್ ಆಗಲಿದೆ.ಬಹುನಿರೀಕ್ಷಿತ ಭಾರತದ ಪ್ರಖ್ಯಾತ ಬ್ರ್ಯಾಂಡ್ ಗಳಲ್ಲೊಂದಾದ ಮೈಕ್ರೋಮ್ಯಾಕ್ಸ್ ಮತ್ತೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು.ಒಂದು ಅದ್ಬುತ ಫೋನ್ ನೊಂದಿಗೆ ಗ್ರಾಹಕರನ್ನು ಸೇರಲಿದೆ. ಇದು ಭಾರತದಲ್ಲೇ ಉತ್ಪಾದನೆಯಾದ ಫೋನ್ ಆಗಿದ್ದು ಚೀನಾಕ್ಕೆ ಠಕ್ಕರ್ ನೀಡುವ ಉದ್ದೇಶವೂ ಮೈಕ್ರೋಮ್ಯಾಕ್ಸ್ ಗಿದೆ.ಭಾರತದಲ್ಲೇ ನಿರ್ಮಾಣವಾದ ಫೋನ್ ಆದ್ದರಿಂದ ಇದರ ಹೆಸರು ಇನ್-೧ ಎಂದು ನೀಡಲಾಗಿದೆ.ಮೈಕ್ರೋಮ್ಯಾಕ್ಸ್ ಫೋನ್ ನ ಅಫೀಸಿಯಲ್ ಲುಕ್ ಇಲ್ಲಿದೆ ನೋಡಿ https://youtu.be/_k0TcytgcKQ