ಉಡುಪಿ: ಜಿಲ್ಲಾಡಳಿತದಿಂದ ಸರಳವಾಗಿ 65ನೇ ಕನ್ನಡ ರಾಜ್ಯೋತ್ಸವ ಆಚರಣೆ
ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಭಾನುವಾರ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 […]
ಮಣಿಪಾಲ: ಟೆಸ್ಟ್ ಡ್ರೈವ್ ಗೆ ಹೋಗಿ ಬರುತ್ತೇನೆಂದು ಬೈಕ್ ಜತೆ ಪರಾರಿಯಾದ ಅಪರಿಚಿತ
ಮಣಿಪಾಲ: ಬೈಕ್ ಖರೀದಿಸುವ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಟೆಸ್ಟ್ ಡ್ರೈವ್ ಗೆ ಹೋಗಿ ಬರುತ್ತೇನೆಂದು ಬೈಕ್ ವೊಂದನ್ನು ಕದ್ದುಕೊಂಡು ಹೋದ ಘಟನೆ ಮಣಿಪಾಲ ಲಕ್ಷ್ಮೀಂದ್ರನಗರದ ನ್ಯೂ ಮಣಿಪಾಲ್ ಬಜಾರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಅಪರಿಚಿತ ವ್ಯಕ್ತಿ 2017 ಮಾಡೆಲ್ ನ ಟಿವಿಎಸ್ ವಿಕ್ಟರ್ (ಕೆಎ 19 ಇಯು 6827) ನೋಂದಣಿ ಸಂಖ್ಯೆಯ ಬೈಕ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ. ಮಧ್ಯಾಹ್ನ 2.45ರ ಸುಮಾರಿಗೆ ಬಜಾರ್ ಗೆ ಬಂದ ಅಪರಿಚಿತ ವ್ಯಕ್ತಿಯು ಬೈಕ್ ಖರೀದಿಸುವಂತೆ ನಟಿಸಿದ್ದಾನೆ. ಅಲ್ಲದೆ ಬಜಾರ್ […]