ಆರ್ ಆರ್ ನಗರ ಉಪಚುನಾವಣೆ: ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ ಡಿಕೆಶಿ
ಬೆಂಗಳೂರು: ಆರ್ ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಎರಡು ದಿನ ಬಾಕಿ ಉಳಿದಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಗೆಲುವಿಗೆ ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ಮಧ್ಯೆ ಇಂದು ಚುನಾವಣಾ ಪ್ರಚಾರದ ವೇಳೆ ಡಿಕೆಶಿ ಶ್ರೀರಾಮನ ಜಪ ಮಾಡಿ ಗಮನಸೆಳೆದರು. ಹಿಂದೂ ಜಾಗೃತ ಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್ ಅವರು, ‘ಜೈ ಶ್ರೀರಾಮ್’ ಎಂಬ ಘೋಷಣೆ ಮೊಳಗಿಸಿದರು. ಅವರು ಜೈ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಂತೆ, ಇದಕ್ಕೆ […]
ರಾಮಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ, ಟಾಟಾ ಸಂಸ್ಥೆಗೆ ನೀಡಲಾಗಿದೆ: ಪೇಜಾವರ ಶ್ರೀ
ಉಡುಪಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಿಸಲ್ಪಡುವ ಶ್ರೀರಾಮಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆ್ಯಂಡ್ ಟಿ ಮತ್ತು ಟಾಟಾ ಸಂಸ್ಥೆಗೆ ನೀಡಲಾಗಿದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್ ನ ವಿಶ್ವಸ್ಥರು ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಉತ್ತರಭಾರತ ತೀರ್ಥಕ್ಷೇತ್ರದ ಪ್ರವಾಸ ಕೈಗೊಂಡಿರುವ ಶ್ರೀಗಳು ಅಯೋಧ್ಯೆ ಭೇಟಿ ನೀಡಿದ್ದಾರೆ. ಇಂದು ರಾಮಮಂದಿರ ನಿರ್ಮಾಣದ ಕುರಿತ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಮಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ. ಕಾಮಗಾರಿಯ ಮೇಲುಸ್ತುವಾರಿಯನ್ನು […]
ಮಣಿಪಾಲ: ಇಬ್ಬರು ವೈದ್ಯ ವಿದ್ಯಾರ್ಥಿಗಳ ಬಂಧನ; ₹3.89 ಲಕ್ಷ ಮೌಲ್ಯದ ಮಾದಕವಸ್ತು ವಶ
ಉಡುಪಿ: ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ₹ 3.89 ಲಕ್ಷ ಮೌಲ್ಯದ 32 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ, 9 ಗ್ರಾಂ ಬ್ರೌನ್ ಶುಗರ್ ಹಾಗೂ 25 ಎಂಡಿಎಂಎ (MDMA) ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ವೈದ್ಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಮಣಿಪಾಲದ ಅದಿತಿ ಸೌರಭ ಅಪಾರ್ಟ್ ಮೆಂಟ್ ನ ರೂಮ್ ನಂಬರ್ 204 ರಲ್ಲಿ ವಾಸವಾಗಿದ್ದ ಕೆಎಂಸಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿ ಆದಿತ್ಯ ಪ್ರಭಾಕರ್ (28) ಬಂಧಿತ ಆರೋಪಿ. ಖಚಿತ […]
ಅಥ್ಲಿಟಿಕ್ ಕಾರ್ಕಳದ ಅಭಿನಯ ಶೆಟ್ಟಿ ಸಹಿತ ಎಂಟು ಮಂದಿಗೆ 2019ನೇ ಸಾಲಿನ ಏಕಲವ್ಯ ಪ್ರಶಸ್ತಿ
ಚಿಕ್ಕಮಗಳೂರು: ಕಾರ್ಕಳ ಕುಕ್ಕುಜೆಯ ಅಭಿನಯ ಶೆಟ್ಟಿ (ಅಥ್ಲಿಟಿಕ್) ಸೇರಿದಂತೆ ಒಟ್ಟು ಎಂಟು ಮಂದಿ 2019ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಖುಷಿ ದಿನೇಶ್ (ಈಜು), ಮಯಾಂಕ್ ಅಗರ್‌ಗವಾಲ್ (ಕ್ರಿಕೆಟ್), ಪುನೀತ್ ನಂದಕುಮಾರ್ (ಪ್ಯಾರಾ ಈಜು), ಚಿಕ್ಕಮಗಳೂರು ಜಿಲ್ಲೆಯ ವೇದಾ ಕೃಷ್ಣಮೂರ್ತಿ(ಕ್ರಿಕೆಟ್), ಉಡುಪಿ ಜಿಲ್ಲೆಯ ಅಭಿನಯ ಶೆಟ್ಟಿ (ಅಥ್ಲಿಟಿಕ್), ದಕ್ಷಿಣ ಕನ್ನಡ ಜಿಲ್ಲೆಯ ಅಭಿಷೇಕ ಎನ್.ಶೆಟ್ಟಿ (ಅಥ್ಲಿಟಿಕ್ಸ್), ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಕೆಂಗಲಗುತ್ತಿ (ಸೈಕ್ಲಿಂಗ್), ಕೊಡಗು ಜಿಲ್ಲೆಯ ಪುಲಿಂದ ಲೋಕೇಶ್ ತಿಮ್ಮಣ್ಣ (ಹಾಕಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಂಬಳ ಓಟಗಾರ ಮಿಜಾರು ಶ್ರೀನಿವಾಸ ಗೌಡರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
ಚಿಕ್ಕಮಗಳೂರು: ಕಂಬಳದ ಮಿಜಾರು ಶ್ರೀನಿವಾಸ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಗೋಪಾಲಕೃಷ್ಣ ಪ್ರಭು ಸೇರಿದಂತೆ ಒಟ್ಟು ಹತ್ತು ಮಂದಿ ಸಾಧಕರು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಿಜಾರು ಶ್ರೀನಿವಾಸಗೌಡ (ಕಂಬಳ), ದಕ್ಷಿಣ ಕನ್ನಡ ಜಿಲ್ಲೆಯ ಗೋಪಾಲಕೃಷ್ಣ ಪ್ರಭು (ಕಂಬಳ), ಬೆಂಗಳೂರಿನ ಎಂ. ರಂಜಿತ್ (ಥ್ರೋಬಾಲ್), ಮಣಿಕಂದನ್ (ಪ್ಯಾರಾ ಕ್ಲೈಬಿಂಗ್),ಮೈಸೂರು ಜಿಲ್ಲೆಯ ಕುರುಬೂರಿನ ವೀಣಾ (ಕೊಕ್ಕೊ), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಎಸ್.ಕೌಸಲ್ಯಾ (ಕಬಡ್ಡಿ), ದಕ್ಷಿಣ ಕನ್ನಡ ಜಿಲ್ಲೆ ಗಾಣದ ಕೊಟ್ಯಾಮನೆಯ ಜಿ. ಜಯಲಕ್ಷ್ಮಿ (ಬಾಲ್ ಬ್ಯಾಡ್ಮಿಂಟನ್). ಚಿಕ್ಕಮಗಳೂರು […]