ಶಿರ್ವಾ: ಪಾದೆಕಲ್ಲು ಸಾಗಿಸುತ್ತಿದ್ದ ಮಿನಿ ಲಾರಿ ಪಲ್ಟಿ; ಚಾಲಕ ಗಂಭೀರ

ಶಿರ್ವಾ: ಪಾದೆಕಲ್ಲು ಸಾಗಿಸುವ ಮಿನಿ (407) ಲಾರಿಯೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಶಿರ್ವಾ ಸೈಂಟ್ ಮೇರಿಸ್ ಶಾಲೆ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ. ಲಾರಿಯು ಪಾದೆಕಲ್ಲು ಲೋಡ್ ಮಾಡಿಕೊಂಡು ಶಿರ್ವಾದಿಂದ ಕಟಪಾಡಿ ಕಡೆಗೆ ಬರುತ್ತಿದ್ದು, ಈ ವೇಳೆ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಏಕಾಏಕಿಯಾಗಿ ಪಲ್ಟಿಯಾಗಿ ರಸ್ತೆಗೆ ಅಪ್ಪಳಿಸಿದೆ. ಇದರಿಂದ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಮಗುಚಿ ಬಿದ್ದ ರಭಸಕ್ಕೆ ಪಾದೆಕಲ್ಲು ರಸ್ತೆಗೆ ಚೆಲ್ಲಿದೆ. ಲಾರಿ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. […]
ಕಾರ್ಕಳ: ಮಾಳದ ಈ ಮನೆಗೆ ಬಂತು ಭಾರೀ ಗಾತ್ರದ ಹೆಬ್ಬಾವು

ಕಾರ್ಕಳ:ಮಾಳ ಗ್ರಾಮದ ಮಂಜಲ್ತಾರಿನ ಎಂ. ಸುಂದರ್ ಅವರ ಮನೆಯಲ್ಲಿ ಶುಕ್ರವಾರ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಸ್ಥಳೀಯರಾದ ಸಂಜೀವ್, ಪ್ರಮೋದ್ ಮೊದಲಾದವರು ಸೇರಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.