ನಟ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ನಕಲಿ ಪತ್ರಕರ್ತ ಪ್ರತೀಕ್ ಕೋಟ್ಯಾನ್ ಬಂಧನ

ಮಂಗಳೂರು: ನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿಯ ನಕಲಿ ಪತ್ರಕರ್ತ ಪ್ರತೀಕ್ ಕೋಟ್ಯಾನ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರ ಬಂಟ್ವಾಳನ ಹತ್ಯೆಯ ಮಾಹಿತಿ ಆರೋಪಿ ಪ್ರತೀಕ್ ಕೋಟ್ಯಾನ್ ಗೆ ಮೊದಲೇ ತಿಳಿದಿತ್ತು ಎನ್ನಲಾಗಿದೆ. ಅಲ್ಲದೆ, ಆತ ವಾಟ್ಸಾಪ್ ಸ್ಟೇಟಸ್ ನಲ್ಲಿ ‘ರೌಡಿಶೀಟರ್ ಕೊಲೆ ಸಾಧ್ಯತೆ ಇದೆ’ ಎಂಬ ಪೋಸ್ಟ್ ಹಾಕಿದ್ದನು. ಹಾಗೆ ಕೊಲೆ ಪ್ರಕರಣದ ಆರೋಪಿಗಳಾದ ಸತೀಶ್ ಹಾಗೂ ಗಿರೀಶ್ ಎಂಬುವವರನ್ನು ತನ್ನ […]

ಉಡುಪಿ: ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗೆ ಡಾ. ಎಸ್.ಆರ್. ಅರುಣ್ ಕುಮಾರ್ ಮತ್ತು ಲೋಕು ಪೂಜಾರಿ ಆಯ್ಕೆ

ಉಡುಪಿ: ಯುವವಾಹಿನಿ ಉಡುಪಿ ಘಟಕದ ಪ್ರಾಯೋಜಕತ್ವದಲ್ಲಿ ಕೊಡಲ್ಪಡುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ. ಎಸ್.ಆರ್. ಅರುಣ್ ಕುಮಾರ್ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ಬೈದೇರುಗಳ ದರ್ಶನ ಪಾತ್ರಿ ಮೂಜೂರು ಹಾಡಿ ಗರೋಡಿಯ ಲೋಕು ಪೂಜಾರಿ ಅವರು ಆಯ್ಕೆಯಾಗಿದ್ದಾರೆ. ಮಂಗಳೂರು ವಿವಿಯ ನಾರಾಯಣಗುರು ಪೀಠದ ನಿರ್ದೇಶಕರು ಆಗಿರುವ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಇಬ್ಬರನ್ನು ಪ್ರಶಸ್ತಿಗೆ ನೇಮಕ ಮಾಡಲಾಗಿದೆ‌. ನವೆಂಬರ್ 8ರಂದು ಬೆಳಿಗ್ಗೆ […]

ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಸಹಿತ 40 ಮಂದಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ, ಸಸ್ಯಶಾಸ್ತ್ರಜ್ಞ ಡಾ.ಕೆ. ಗೋಪಾಲಕೃಷ್ಣ ಭಟ್, ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಸಹಿತ 36 ಮಂದಿ ಸಾಧಕರು ಹಾಗೂ ನಾಲ್ಕು ಸಂಘ ಸಂಸ್ಥೆಗಳು ಸೇರಿ ಒಟ್ಟು 40 ಮಂದಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗೆ ಆಯ್ಕೆಯಾದವರ ವಿವರ ಈ ಕೆಳಕಂಡಂತಿದೆ: ದೈವಾರಾಧನೆ: ಶ್ರೀರಂಗ ಪಾಣ, ಮೋಂಟು ಪಾಣರ, ಮಂಜುನಾಥ ಶೇರಿಗಾರ. ಸಾಹಿತ್ಯ: ನವೀನ್ ಸುವರ್ಣ ಪಡ್ರೆ. ಯಕ್ಷಗಾನ: ಸುದರ್ಶನ ಉರಾಳ, ಶಶಿಕಲಾ ಪ್ರಭು, ನಾಗೇಶ್ ಗಾಣಿಗ. ಪತ್ರಿಕೋದ್ಯಮ: ಉದಯ […]

ಮಣಿಪಾಲದ ಈ ಯುವ ಕಲಾವಿದೆಯ ಕೈಯಲ್ಲಿ ಕಸವೂ ರಸವಾಗುತ್ತೆ: ಇವರಿಗೆ ಪಾಟ್ ಪೈಂಟಿಂಗ್,ಬಾಟಲ್ ಪೈಂಟಿಂಗ್ ಮಾಡೋದಂದ್ರೆ ನೀರು ಕುಡಿದಷ್ಟೇ “ಸುಲಭ”

ಪಾಟ್ ಪೈಂಟಿಂಗ್, ಬಾಟಲ್ ಆರ್ಟ್ ಮಾಡೋದು ಅಂದ್ರೆ ಮಣಿಪಾಲದ ಈ ಯುವ ಕಲಾವಿದೆಗೆ ನೀರು ಕುಡಿದಷ್ಟೇ ಸುಲಭ, ಇವರ ಹೆಸರೂ ಕೂಡ ಸುಲಭ. ಹೌದು ಇವರು ಸುಲಭ ಭಟ್. ಮಣ್ಣಿನ ಪಾಟ್ ಗಳು, ವೇಸ್ಟ್ ಬಾಟಲ್‌ಗಳನ್ನು ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಮನೆಯಲ್ಲಿಟ್ಟರೆ ಅದರ ಚಂದಾನೇ ಬೇರೆ. ಇಂತಹ ಮಣ್ಣಿನ ಪಾಟ್‌ಗಳಿಗೆ ರಂಗು ಬಳಿದು ಅದನ್ನು ಅಂದಗಾಣಿಸುವುದು ಇವರ ನೆಚ್ಚಿನ ಹವ್ಯಾಸ. ಸಹಜ ಮತ್ತು ಸರಳವಾಗಿ ಕಾಣುವ ಇವರ ಕಲಾಕೃತಿಗಳು ಸುಂದರ ಮನೆಗೆ ಇನ್ನಷ್ಟು ಆಪ್ತವಾಗಿಸುತ್ತದೆ.  “ಲಾಕ್‌ಡೌನ್ ಟೈಮ್‌ನಲ್ಲಿ […]

ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದವರ ಬಣ್ಣ ಬಯಲಾಗಿದೆ: ಪ್ರಧಾನಿ ಮೋದಿ

ಗುಜರಾತ್‌: ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದವರ ಬಣ್ಣ ಬಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏಕತಾ ದಿನದ ಅಂಗವಾಗಿ ಗುಜರಾತಿನ ಕೆವಾಡಿಯಾದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಈ ದಾಳಿಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದು, ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಇಂತಹ ಸಮಯದಲ್ಲೇ ಕೆಲ ವ್ಯಕ್ತಿಗಳು ಕೊಳಕು ರಾಜಕೀಯಕ್ಕೆ […]