ಬಂಟ್ವಾಳ: ಫಾರೂಕ್ ಹತ್ಯೆಯ ಆರೋಪಿಗಳ ಮೇಲೆ ಗುಂಡಿನ ದಾಳಿ; ಓರ್ವನ ಬಂಧನ

ಬಂಟ್ವಾಳ: ಇಲ್ಲಿನ ಮೆಲ್ಕರ್ ನಲ್ಲಿ ನಿನ್ನೆ ಸಂಜೆ ನಡೆದ ಫಾರೂಕ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ, ಒಬ್ಬನನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಖಲೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಖಲೀಲ್ ಮತ್ತು ಅವರ ಇಬ್ಬರು ಸಹಚರರು ಬೆಂಗಳೂರಿನತ್ತ ಸಾಗುತ್ತಿದ್ದರು. ಈ ವಿಷಯ ತಿಳಿದ ಪೊಲೀಸರು ಅವರನ್ನು ಬಂಟ್ವಾಳದಿಂದ ಬೆನ್ನಟ್ಟಿದರು. ಈ ವೇಳೆ ಖಲೀಲ್ ಏಕಾಏಕಿ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಬಂಟ್ವಾಳ ಟೌನ್ ಸ್ಟೇಷನ್ ಪೊಲೀಸ್ […]