ತಮಿಳು ನಟ ವಿಜಯ್ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ
ಚೆನ್ನೈ: ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ ‘800’ ಸಿನಿಮಾದಿಂದ ವಿಜಯ್ ಸೇತುಪತಿ ಹೊರಬಂದಿದ್ದಾರೆ. ಆದರೂ ಅವರನ್ನು ಗುರಿಯಾಗಿಸಿಕೊಂಡು ನೆಟ್ಟಿಗರು ನಡೆಸುತ್ತಿರುವ ದಾಳಿಗಳು ನಿಂತಿಲ್ಲ. ಇದೀಗ ದುಷ್ಕರ್ಮಿಯೊಬ್ಬ ಟ್ವೀಟರ್ ನಲ್ಲಿ ವಿಜಯ್ ಸೇತುಪತಿಯ ಮಗಳ ಮೇಲೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದಾನೆ. ತಮಿಳರಿಗೆ ಆದ ನೋವು ವಿಜಯ್ ಸೇತುಪತಿಗೆ ಮನದಟ್ಟಾಗಬೇಕಾದರೆ ಅವರ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಬೇಕು ಎಂದು ಟ್ವಿಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾನೆ. ಈತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಾಲಕಿಗೆ ಬೆದರಿಕೆ ಹಾಕಿದವನನ್ನು ಕೂಡಲೇ […]
ಡಿ.ಕೆ. ಶಿವಕುಮಾರ್ ಮೀರ್ ಸಾಧಿಕ್: ಡಿಸಿಎಂ ಅಶ್ವಥನಾರಾಯಣ
ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಕ್ಕೆ ‘ಮೀರ್ ಸಾಧಿಕ್’ನಂತೆ ಕೆಲಸ ಮಾಡಿದ್ದು ಡಿ.ಕೆ. ಶಿವಕುಮಾರ್. ಇವರ ಜತೆ ಸಿದ್ದರಾಮಯ್ಯ ಸೇರಿ ಎಚ್.ಡಿ.ಕುಮಾರಸ್ವಾಮಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಡಲು ಕಾರಣರು ಯಾರು ಎಂಬುದನ್ನು ತಿಳಿಸುವ ಧೈರ್ಯ ಈಗಲಾದರೂ ಶಿವಕುಮಾರ್ ಮಾಡಬೇಕು. ಈ ಷಡ್ಯಂತ್ರ ರೂಪಿಸಿದ್ದು ಯಾರು ಎಂಬುದನ್ನು ವಿವರಿಸಲಿ. ಆರ್.ಆರ್.ನಗರ ಚುನಾವಣೆಯಲ್ಲಿ ಸೋಲಿನ ಸುಳಿವು ಸಿಗುತ್ತಿದ್ದಂತೆ ಮುನಿರತ್ನ ಹಣ ತೆಗೆದುಕೊಂಡು ಬಿಜೆಪಿ ಸೇರಿದರು ಎಂಬುದಾಗಿ ಆರೋಪ […]
ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿಯವರಿಂದ ಭಾಷಣ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಇದು ಜನರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇಂದು ಸಂಜೆ 6 ಗಂಟೆಗೆ ದೇಶದ ನನ್ನ ಜನರೊಂದಿಗೆ ಒಂದು ಸಂದೇಶ ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ನವರಾತ್ರಿ, ದೀಪಾವಳಿ ಹಬ್ಬದ ಬಗ್ಗೆ ಪ್ರಯುಕ್ತ ಮಾತನಾಡಲಿದ್ದಾರಾ? ಅಥವಾ ದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ಲಸಿಕೆಯ ಕುರಿತು ಮಾತನಾಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ. ಪ್ರಧಾನಿ ತುರ್ತಾಗಿ […]
ಲಾಡ್ಜ್ ನಲ್ಲಿ ಯುವಕ-ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ
ಸುಳ್ಯ: ವಸತಿಗೃಹವೊಂದರಲ್ಲಿ ಯುವಕ ಮತ್ತು ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ನಗರದ ಸರ್ದನ್ ವಸತಿಗೃಹದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್(19) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ(19) ಎಂದು ಗುರುತಿಸಲಾಗಿದೆ. ಅ. 18 ರಂದು ರಾತ್ರಿ ಸುಳ್ಯದ ಸರ್ದನ್ ವಸತಿಗೃಹದಲ್ಲಿ ಇಬ್ಬರು ರೂಮ್ ಪಡೆದುಕೊಂಡಿದ್ದರು. ಆದರೆ ಮರುದಿನ ಅಂದರೆ ಅ. 19 ರಂದು ಮಧ್ಯಾಹ್ನ ಆದರೂ ಇಬ್ಬರು […]
ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ: ತುಮಕೂರಿನ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ನಗರದ ನ್ಯಾಯಾಧೀಶರಿಗೆ ಹಾಗೂ ಪೊಲೀಸ್ ಕಮಿಷನರ್ ಕಚೇರಿಗೆ ಬಾಂಬ್ ಬೆದರಿಕೆಯೊಡ್ಡಿ ಪತ್ರ ಬರೆದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ತುಮಕೂರಿನ ರಾಜಶೇಖರ್ ಹಾಗೂ ವೇದಾಂತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ್ದಾರೆ. ಆಗ ಇದೊಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಹಸನ ಎಂದು ಗೊತ್ತಾಗಿದೆ. ಅತ್ತೆಯ ಆಸ್ತಿ ಹಂಚಿಕೆ ಸಂಬಂಧಿಸಿ ಆರೋಪಿ ರಾಜಶೇಖರ್ ಗೆ ರಮೇಶ್ ವಿರುದ್ಧ ಮನಸ್ತಾಪವಿತ್ತು. ಅದೇ ಕಾರಣಕ್ಕೆ ರಾಜಶೇಖರ್ ಎಂಬಾತನು ವೇದಾಂತ್ ಜತೆ […]