ಮಧ್ಯಪ್ರದೇಶ: ಬಿಜೆಪಿ ಮಹಿಳಾ ಅಭ್ಯರ್ಥಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ವಿವಾದ ಸೃಷ್ಟಿಸಿದ ಮಾಜಿ ಸಿಎಂ ಕಮಲನಾಥ್

ಮಧ್ಯಪ್ರದೇಶ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ, ಪ್ರಸ್ತುತ ದಬ್ರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಇಮಾರತಿ ದೇವಿ ಎಂಬುವವರ ವಿರುದ್ಧ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ‘ಐಟಂ’ ಎಂಬ ಪದ ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ದಬ್ರಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಪರ ಕಮಲ್‌ ನಾಥ್‌ ಭಾನುವಾರ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಇಮಾರತಿ ದೇವಿ ಅವರ ವಿರುದ್ಧ ಮಾತನಾಡಿದ ಕಮಲನಾಥ್‌, ‘ನಮ್ಮ ಅಭ್ಯರ್ಥಿ ಅತ್ಯಂತ ಸರಳ ವ್ಯಕ್ತಿ. ಅವರಂತೆ (ಇಮಾರತಿ ದೇವಿ) ಐಟಂ’ ಅಲ್ಲ […]

ಲಡಾಖ್: ಅಕ್ರಮವಾಗಿ ಭಾರತದ ಗಡಿ ಪ್ರದೇಶದೊಳಗೆ ನುಸುಳಲು ಯತ್ನಿಸಿದ ಚೀನಾ ಯೋಧನ ಬಂಧನ

ಲಡಾಖ್: ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ ಚೀನಾದ ಯೋಧನೊರ್ವನನ್ನು ಭಾರತೀಯ ಸೇನಾಪಡೆ ಬಂಧಿಸಿದೆ. ವಶಕ್ಕೆ ಪಡೆದ ಚೀನಾದ ಯೋಧನನ್ನು ಭಾರತೀಯ ಸೇನೆ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನಿಂದ ಭೂಪಟಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ. ತನಿಖೆ ಮುಗಿದ ನಂತರ ಪ್ರೋಟೋಕಾಲ್ ಪ್ರಕಾರ ಆನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಲಡಾಖ್ ನಲ್ಲಿ  ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ ನಡೆದಿರುವ ಕಾರಣ ತನಿಖಾ ಸಂಸ್ಥೆಗಳು […]

ಶಿರ್ವಾ: ಪಿಕ್ಅಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ; ಪೊಲೀಸರಿಂದ ದಾಳಿ

ಶಿರ್ವಾ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಬೊಲೆರೋ ಪಿಕ್ ಅಪ್ ವಾಹನವೊಂದನ್ನು ಪೊಲೀಸರು ಹಿಡಿದು ಒಂದು ದನ ಹಾಗೂ ಎರಡು ಕರುಗಳನ್ನು ರಕ್ಷಣೆ ಮಾಡಿದ ಘಟನೆ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದ ಚಂದ್ರನಗರ ಮಸೀದಿ ಬಳಿ ಶನಿವಾರ ರಾತ್ರಿ ನಡೆದಿದೆ. ಕಳತ್ತೂರು ಗ್ರಾಮದ ಜನತಾ ಕಾಲನಿ ಎಂಬಲ್ಲಿ ದನಗಳನ್ನು ಕಳ್ಳತನ ಮಾಡಿ ಬೊಲೆರೋ ಪಿಕ್‌ಅಪ್‌ ವಾಹನದಲ್ಲಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿಯಂತೆ ಶಿರ್ವಾ ಪೊಲೀಸ್ ಠಾಣಾ ಉಪನಿರೀಕ್ಷಕ ಶ್ರೀಶೈಲ್ ಡಿ.ಎಂ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ, […]

ಕುಂದಾಪುರ: ವಕ್ವಾಡಿ ಗ್ರಾಮದ ಬೆಚ್ಚಾಡಿ ನಿವಾಸಿ ನಾಪತ್ತೆ

ಕುಂದಾಪುರ: ತಾಲ್ಲೂಕಿನ ವಕ್ವಾಡಿ ಗ್ರಾಮದ ಬೆಚ್ಚಾಡಿ ನಿವಾಸಿ ಶರತ್ (29) ಎಂಬುವವರು 2019ರ ಆಗಸ್ಟ್ 8ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶರತ್ 2019ರ ಆಗಸ್ಟ್ 8ರಂದು ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದ್ದರು. ಬಳಿಕ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಪತ್ನಿ ಅನುಪಮ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.