ಬೈಂದೂರು: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬೈಂದೂರು: ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಡ್ತರೆ ಗ್ರಾಮದ ಬಿಲ್ಲುಕೇರಿ ಆಲಂದೂರು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಯಡ್ತರೆ ಗ್ರಾಮದ ಬಿಲ್ಲುಕೇರಿ ಆಲಂದೂರು ನಿವಾಸಿ ಜ್ಯೋತಿ ಹಣಬರ (37) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜ್ಯೋತಿ ಕಳೆದ ಮೂರು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಗಂಡನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಹೋದರ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ […]
ಕಾರ್ಕಳ: ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ವೃದ್ಧೆ ಆತ್ಮಹತ್ಯೆ; ಮಗಳಿಂದ ಶಂಕೆ
ಕಾರ್ಕಳ: ಮೈಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕಾರ್ಕಳದ ಸುಲೋಚನ ನಾಯ್ಕ್ (78) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಇವರು ಇಂದು ಬೆಳಿಗ್ಗೆ 6.30ರಿಂದ 7ಗಂಟೆಯ ಅವಧಿಯಲ್ಲಿ ಮನೆಯ ಹಿಂಬದಿಯ ತೋಟದಲ್ಲಿ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಮಹಿಳೆಯ ಮಗಳು ಹೇಮಲತಾ ನಾಯ್ಕ್ ಅವರು ತಾಯಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಅವರು ನೀಡಿದ ದೂರಿನಂತೆ […]
ಉಪಚುನಾವಣೆ: ಸರ್ಕಾರದ ಆಂತರಿಕ ಮೌಲ್ಯಮಾಪನ; ಆರ್ ಆರ್ ನಗರದಲ್ಲಿ ಬಿಜೆಪಿಗೆ ಗೆಲುವು, ಶಿರಾದಲ್ಲಿ 50/50
ಬೆಂಗಳೂರು: ಕರ್ನಾಟಕದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪಕ್ಷಗಳಿಂದ ಗೆಲುವಿನ ಲೆಕ್ಕಚಾರವೂ ನಡೆಯುತ್ತಿದೆ. ಈ ನಡುವೆ ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆರ್ ಆರ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಾಗೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬಹುದು ಅಥವಾ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಹುದು ಎಂದು ಸರ್ಕಾರದ ಆಂತರಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ. ರಾಜರಾಜೇಶ್ವರಿ ನಗರದಲ್ಲಿ ಕಳೆದ […]
ಸೂಡಾ ಕೊರಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ
ಬೆಳ್ಮಣ್: ಸೂಡಾ ಕೊರಾಜೆ ರಸ್ತೆಗೆ 2017-18 ಸಾಲಿನಲ್ಲಿ ಮಾನ್ಯ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರು,ಬೆಳ್ಮಣ್ಣು ಮಾಜಿ ತಾ.ಪಂ. ಸದಸ್ಯರಾದ ಕ್ಷೇವಿಯರ್ ಡಿಮೆಲ್ಲೊ ಇವರ ಶಿಫಾರಸ್ಸಿನ ಮೇರೆಗೆ 10 ಲಕ್ಷ ರೂ ಸಂಸದರ ನಿಧಿಯಿಂದ ಮಂಜೂರು ಮಾಡಿರುತ್ತಾರೆ. ಈ ಕೆಲಸವನ್ನು ಕಾಂಕ್ರೀಟಿಕರಣಗೊಳಿಸುವ ಪ್ರಕ್ರಿಯೆಗೆ ಮಾಜಿ ತಾ.ಪಂ.ಸದಸ್ಯರಾದ ಕ್ಷೇವಿಯರ್ ಡಿಮೆಲ್ಲೋ ಚಾಲನೆ ನೀಡಿದರು. ಮಾಜಿ ಪಂಚಾಯತ್ ಸದಸ್ಯರಾದ ಶಂಕರ್ ಕುಂದರ್,ಜೀರಿಮ್ ಡಿಸೋಜ,ಅನಿತಾ ಡಿಸೋಜ ಮೊದಲಾದವರು ಹಾಜರಿದ್ದರು.
ಉಡುಪಿ: 50ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ
ಉಡುಪಿ: ಇಲ್ಲಿನ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 64 ನೇ ಧಮ್ಮ ಚಕ್ರ ಪ್ರವರ್ತನಾ ದಿನಾಚರಣೆಯಲ್ಲಿ ಜಿಲ್ಲೆಯ 50ಕ್ಕೂ ಅಧಿಕ ದಲಿತರು ಬೌದ್ಧಧರ್ಮಕ್ಕೆ ಸೇರ್ಪಡೆಗೊಂಡರು. ಉಡುಪಿ ಜಿಲ್ಲಾ ಬೌದ್ಧ ಮಹಾ ಸಭಾ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಕೊಳ್ಳೆಗಾಲದ ಜೀವನ ಬುದ್ಧ ವಿಹಾರದಿಂದ ಆಗಮಿಸಿದ್ದ ಸುಗತಪಾಲ ಭಂತೇಜಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕಗಳಿಸಿದ 30ಕ್ಕೂ […]