ಮದ್ದಳೆ ವಾದಕ ಹಿರಿಯಡಕ ಗೋಪಾಲ್ ರಾವ್ ಅವರ ಅಂತಿಮ ದರ್ಶನ ಪಡೆದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಶನಿವಾರ ನಿಧನರಾದ ಮದ್ದಳೆ ಮಾಂತ್ರಿಕ ಶತಾಯುಷಿ ಹಿರಿಯಡಕ ಗೋಪಾಲ್ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದ ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗೋಪಾಲರಾವ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಯಕ್ಷಗಾನದ ಅತ್ಯಂತ ಹಿರಿಯ ಕಲಾವಿದ್ದರಾಗಿದ್ದ ಹಿರಿಯಡಕ ಗೋಪಾಲ್ ರಾವ್ ಅವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಠವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು. […]

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು.?

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದೇ ಆದರೆ, ರಾಷ್ಟ್ರಪತಿ ಆಡಳಿತ ಹೇರಿ ಎಂಬ ಬೇಡಿಕೆ ಇಡುವುದಕ್ಕೆ ಬಿಜೆಪಿಗೆ ಎಲ್ಲಾ ಅಧಿಕಾರ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ. ಶನಿವಾರ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ಬದಲಾವಣೆಯಾಗಲಿದ್ದು, ನಾವು ರಚನೆ ಮಾಡಲಿದ್ದೇವೆ ಎಂಬ ವಿಶ್ವಾಸವ್ಯಕ್ತಪಡಿಸಿದರು.  

ಪತ್ರಕರ್ತ ಪವನ್ ಹೆತ್ತೂರು ಕೊರೊನಾ ಸೋಂಕಿಗೆ ಬಲಿ

ಮೈಸೂರು: ಪ್ರಜಾವಾಣಿ ಪತ್ರಿಕೆಯ ಮೈಸೂರು ಬ್ಯೂರೋದಲ್ಲಿ ವರದಿಗಾರನಾಗಿದ್ದ ಪವನ್ ಹೆತ್ತೂರು (35) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದರು. ಪವನ್‌ ಹೆತ್ತೂರು ಪ್ರಜಾವಾಣಿ ಸೇರಿದಂತೆ ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದರು. ಅವರು ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ.