ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಪೇಜಾವರ ಶ್ರೀ
ಉಡುಪಿ: ಸಾಲು ಹಬ್ಬಗಳ ಹಿನ್ನಲೆಯಲ್ಲಿ ಕೋವಿಡ್ 19 ನಿರ್ಬಂಧಗಳನ್ನು ಒಂದಷ್ಟು ಸಡಿಲಿಸಿ ಸರಕಾರ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಮೈಮರೆಯಬಾರದು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದರ ಜತೆಗೆ ಸರ್ಕಾರ ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ. ಕೊರೊನಾ ಮಹಾಮಾರಿಯಿಂದ ದೇಶವನ್ನು ಮುಕ್ತಗೊಳಿಸಲು ಕೆಲವು ಸ್ವಯಂ ನಿರ್ಬಂಧಗಳನ್ನು ಅನುಸರಿಸಿಕೊಂಡು ಕ್ಷೇತ್ರದರ್ಶನ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕು. ಕೊರೊನಾ ಮುಕ್ತಿಗಾಗಿ, […]
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ
ಮುಂಬೈ: ಸ್ಯಾಂಡಲ್ ವುಡ್ ಡ್ರಗ್ ನಂಟಿನ ಆರೋಪಕ್ಕೆ ಸಂಬಂಧಿಸಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಳಿ ನಡೆಸಿದೆ. ಆದಿತ್ಯ ಆಳ್ವ ಡ್ರಗ್ಸ್ ಪ್ರಕರಣ ಆರೋಪಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದಾನೆ. ಈತ ವಿವೇಕ್ ಅವರ ಸಂಬಂಧಿಯೂ ಆಗಿದ್ದಾನೆ. ಹೀಗಾಗಿ ಆತನನ್ನು ಹುಡುಕಿಕೊಂಡು ಪೊಲೀಸರು ಇಂದು ನ್ಯಾಯಾಲಯದ ವಾರೆಂಟ್ ನೊಂದಿಗೆ ವಿವೇಕ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ವಿವೇಕ್ ಒಬೆರಾಯ್ ಅವರ […]
ಮಣಿಪಾಲ: ವಿದ್ಯಾರ್ಥಿಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಯುವಕನ ಬಂಧನ
ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಎಂಡಿಎಂಎ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸಿದ ಓರ್ವ ಯುವಕನನ್ನು ಬುಧವಾರ ರಾತ್ರಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ನಿವಾಸಿ ಮಹಮ್ಮದ್ ಫಜಲ್ ಬಂಧಿತ ಆರೋಪಿ. ಈತನು ಮಣಿಪಾಲದ ಆರ್.ಟಿ.ಒ ಕಚೇರಿ ರಸ್ತೆಯ ಎಂಡ್ ಪಾಯಿಂಟ್ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನಿಂದ 4,63,600 ಮೌಲ್ಯದ 54 ನಿಷೇಧಿತ ಎಂಡಿಎಂಎ ಎಕ್‌ಸ್ಟೇಸಿ ಮಾತ್ರೆ ಮತ್ತು 30 ಗ್ರಾಂ ಬ್ರೌನ್ ಶುಗರ್ ಹಾಗೂ ಚುನಾವಣಾ ಗುರುತು ಚೀಟಿ, 2 ಡೆಬಿಟ್ ಕಾರ್ಡ್ […]
ಟಿವಿ ಚಾನೆಲ್ ಗಳ ಟಿಆರ್ ಪಿ ರೇಟಿಂಗ್ ತಾತ್ಕಾಲಿಕವಾಗಿ ಸ್ಥಗಿತ: ಬಿಎಆರ್ ಸಿ ಘೋಷಣೆ
ಮುಂಬೈ: ಟಿವಿ ರೇಟಿಂಗ್ ಪಾಯಿಂಟ್ಸ್ (ಟಿಆರ್ ಪಿ) ಹಗರಣ ಹಿನ್ನೆಲೆಯಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್ ಸಿ) ದೇಶಾದ್ಯಂತ ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸುದ್ದಿವಾಹಿನಿಗಳ ರೇಟಿಂಗ್ ಗಳ ಸಂಖ್ಯಾಶಾಸ್ತ್ರೀಯ ದೃಢತೆ, ಪಾರದರ್ಶಕತೆಯನ್ನು ಸುಧಾರಿಸಲು ಪ್ರಸ್ತುತ ಅಳತೆಯ ಮಾನದಂಡಗಳನ್ನು ಪರಿಶೀಲಿಸಲು ಇನ್ನು 12 ವಾರಗಳವರೆಗೆ ಅಂದರೆ ಮೂರು ತಿಂಗಳ ಕಾಲ ಸಾಪ್ತಾಹಿಕ ರೇಟಿಂಗ್ ಅನ್ನು ಸ್ಥಗಿತಗೊಳಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ: ಅ. 17ರಂದು ಬೃಹತ್ ರಕ್ತದಾನ ಶಿಬಿರ
ಉಡುಪಿ: ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಇದರ ವತಿಯಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ‘ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ’ವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಅಕ್ಟೋಬರ್ 17ರಂದು ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ಆಯೋಜಿಸಲಾಗಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬೆಳಿಗ್ಗೆ 11ಗಂಟೆಗೆ ರಕ್ತದಾನ ಶಿಬಿರವನ್ನು ಉದ್ಘಾಟಿಸುವರು ಎಂದು ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.