ಕಾರ್ಕಳ: ಮಹಿಳೆ ಆತ್ಮಹತ್ಯೆಗೆ ಶರಣು

ಕಾರ್ಕಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳದ ನಾಗರಬಾವಿ ರಸ್ತೆಯ ನಿವಾಸಿ ಅನಂತಪದ್ಮನಾಭ ಜೋಯಿಷ್‌‌‌ ಎಂಬುವವರ ಪತ್ನಿ ಲಲಿತಾ (56) ಆತ್ಮಹತ್ಯೆಗೆ ಶರಣಾದ ಮಹಿಳೆ. ಲಲಿತಾ ಅವರು ಕಳೆದ ಮೂರು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಔಷಧ ಮಾಡಿದರೂ ಗುಣಮುಖರಾಗದಿದ್ದಾಗ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕೋಣೆಯಲ್ಲಿ ಪ್ಯಾನ್‌‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿ ಓರ್ವ ಮೀನುಗಾರ ಸಾವು

ಪಡುಬಿದ್ರಿ: ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಹೆಜಮಾಡಿ ಕೋಡಿಯ ಅಳಿವೆ ಬಾಗಿಲ ಬಳಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿಬಿದ್ದಿದ್ದು, ಇದರಿಂದ ಮೀನುಗಾರನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತಪಟ್ಟ ಮೀನುಗಾರನನ್ನು ಹೆಜಮಾಡಿಯ ನಿವಾಸಿ ಸುಕೇಶ್ ಪುತ್ರನ್ (24) ಎಂದು ಗುರುತಿಸಲಾಗಿದೆ. ಅ. 11ರಂದು ಬೆಳಿಗ್ಗೆ 6 ಗಂಟೆಗೆ ಸ್ನೇಹ-1 ಎಂಬ ಹೆಸರಿನ ನಾಡದೋಣಿಯಲ್ಲಿ ರಾಜೇಶ್ ಪುತ್ರನ್, ನೀರಜ್ ಕರ್ಕೆರ, ಪಾಡುರಂಗ ಕೋಟ್ಯಾನ್, ನಾಗೇಶ್ ಸಾಲ್ಯಾನ್, ಸುಕೇಶ್ ಪುತ್ರನ್ ಅವರು ಮೀನುಗಾರಿಕೆ ತೆರಳಿದ್ದರು. ಅಂದು ಸಂಜೆ 6.45 ಸುಮಾರಿಗೆ ಮೀನು ಹಿಡಿದು […]