ರಸ್ತೆಬದಿಯ ಹುಲ್ಲು ನೀಲಾವರ ಗೋಶಾಲೆಗೆ ಹಸ್ತಾಂತರ: ಉಡುಪಿ ಶಾಸಕರ ಕಾರ್ಯಕ್ಕೆ ಪೇಜಾವರ ಶ್ರೀ ಶ್ಲಾಘನೆ

ಉಡುಪಿ: ಶಾಸಕ ಕೆ. ರಘುಪತಿ ಭಟ್ಟರ ವಿಶೇಷ ಮುತುವರ್ಜಿ ಮತ್ತು ಸೂಚನೆಯನ್ವಯ ಉಡುಪಿ ನಗರಸಭೆಯು ನಗರದ ವಿವಿಧೆಡೆ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನ್ನು ಕತ್ತರಿಸಿ ನೀಲಾವರ ಗೋಶಾಲೆಗೆ ಹಸ್ತಾಂತರಿಸಿದೆ. ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ಪ್ರಯತ್ನದಿಂದ ಕಳೆದ ಮೂರು ದಿನಗಳಿಂದ 5 ದೊಡ್ಡ ಟಿಪ್ಪರ್, 3 ಮಿನಿ ಟಿಪ್ಪರ್ ಮತ್ತು ಒಂದು ಸಣ್ಣ ರಿಕ್ಷಾ ಟೆಂಪೋದಲ್ಲಿ ಹುಲ್ಲನ್ನು ಗೋಶಾಲೆಗೆ ನೀಡಲಾಗಿದೆ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಪೇಜಾವರ ಮಠದ […]

ಸಾಣೂರು ಯುವಕ ಮಂಡಲ ವಾಲಿಬಾಲ್ ಪಂದ್ಯಾಟ: ಅಶ್ವಿನಿ ಆರೇಂಜರ್ಸ್ಸ್ ತಂಡಕ್ಕೆ ಸಮಗ್ರ ಪ್ರಶಸ್ತಿ, ಶ್ರೀದೇವಿ ಕಜೆ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ

ಕಾರ್ಕಳ: ಸಾಣೂರು ಯುವಕ ಮಂಡಲದ ಆಶ್ರಯದಲ್ಲಿ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ 12 ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದಲ್ಲಿ ಅಶ್ವಿನಿ ಆರೇಂಜರ್ಸ್ಸ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ಶ್ರೀದೇವಿ ಕಜೆ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಮಧುಸೂಧನ್ ರೈ, ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದಾಗ ಯಶಸ್ಸು ಸಾಧ್ಯ ಎಂದರು. ಮಂಡಲ ಮಹಾ ಪೋಷಕ ಸದಸ್ಯ ಸತ್ಯಾರ್ಥಿ ರಾವ್ ಶುಭಹಾರೈಸಿದರು. ಮಂಡಲ […]

ಬೈಂದೂರು: ಸೇತುವೆಯ ಕಬ್ಬಿಣದ ಪೈಪ್‌ಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಬೈಂದೂರು: ಸೇತುವೆಯ ಕಬ್ಬಿಣದ ಪೈಪ್‌ಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ಸಂಕದಗುಂಡಿ ಸೇತುವೆ ಬಳಿ ನಡೆದಿದೆ. ಶಿರೂರು ಅಳ್ವೆಗದ್ದೆಯ ತಿಮ್ಮಪ್ಪ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೋಮವಾರ ರಾತ್ರಿ 10ರಿಂದ ಮಂಗಳವಾರ ಬೆಳಿಗ್ಗೆ 7.30ರ ಮಧ್ಯ ಅವಧಿಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ಶಿರೂರಿನಲ್ಲಿ ರೂಮ್ ಮಾಡಿಕೊಂಡು ವಾಸ ಮಾಡಿಕೊಂಡಿದ್ದು, ವಿಪರೀತ ಮದ್ಯಸೇವನೆ ಚಟ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ಅನಾರೋಗ್ಯಕ್ಕೂ ತುತ್ತಾಗಿದ್ದು, ಇದರಿಂದಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೈಂದೂರು […]

ಉಡುಪಿ: ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದ ಆರೋಪ; ಕಿಶನ್ ಹೆಗ್ಡೆ ವಿರುದ್ಧ ದೂರು ದಾಖಲು

ಉಡುಪಿ: ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದೆ, ಬೇನಾಮಿ ಹೆಸರಿನಲ್ಲಿ ಸಾಲ ಪಡೆದ ಆರೋಪಿಗಳಿಬ್ಬರು ಉಡುಪಿಯ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ 20 ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದರಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಕಿಶನ್ ಹೆಗ್ಡೆ ಅವರು ಸರಿಯಾದ ದಾಖಲೆಗಳನ್ನು ಸಲ್ಲಿಸದೆ ಕೃಷಿಕನ ಹೆಸರಿನಲ್ಲಿ ಸಾಲ ಪಡೆದುಕೊಂಡಿದ್ದು, ಅದರ ಸಬ್ಸಿಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕ್ ಗೆ ಮೋಸ ಮಾಡಿದ್ದಾರೆ. […]

ಬೈ ಎಲೆಕ್ಷನ್ ಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್

ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ಆರ್ ಆರ್ ನಗರ ಹಾಗೂ ಶಿರಾ ವಿಧಾನಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಕೊನೆಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆರ್ ಆರ್ ನಗರ ಕ್ಷೇತ್ರಕ್ಕೆ ಮುನಿರತ್ನ ಹಾಗೂ ಶಿರಾ ಕ್ಷೇತ್ರಕ್ಕೆ ಡಾ. ರಾಜೇಶ್ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.