ಸಚಿವ ಖಾತೆ ಬದಲಾವಣೆ: ಸಿಎಂ ವಿರುದ್ಧ ಸಿಡಿದೆದ್ದ ಶ್ರೀರಾಮುಲು
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮುಖ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದು, ಬಿ. ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಖಾತೆಯನ್ನು ಡಾ.ಕೆ. ಸುಧಾಕರ್ ಅವರಿಗೆ ಹಂಚಿಕೆ ಮಾಡಿದ್ದಾರೆ. ಇದರಿಂದ ಶ್ರೀರಾಮುಲು ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಅವರ ಬಳಿ ಇದ್ದ ಸಮಾಜ ಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಕಾರಜೋಳ ಅವರ ಬಳಿ ಲೋಕೋಪಯೋಗಿ ಖಾತೆ ಉಳಿದಿದೆ. ರಾಮುಲು ಬಳಿ ಇದ್ದ ಹಿಂದುಳಿದ ವರ್ಗಗಳ ಖಾತೆ ಮುಖ್ಯಮಂತ್ರಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ […]
ಉಡುಪಿ: ಬಾರ್ ನಲ್ಲಿ ಊಟ ಮುಗಿಸಿಕೊಂಡು ಹೊರಬರುತ್ತಿದ್ದ ಯುವಕನೊಬ್ಬ ದಿಢೀರ್ ಕುಸಿದುಬಿದ್ದು ಸಾವು
ಉಡುಪಿ: ಬಾರ್ ವೊಂದರಲ್ಲಿ ಊಟ ಮುಗಿಸಿಕೊಂಡು ಹೊರಬಂದ ಯುವಕನೊಬ್ಬ ದಿಢೀರ್ ಆಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಉದ್ಯಾವರ ಪಂದುಬೆಟ್ಟು ವಿಲೇಜ್ ಇನ್ ಬಾರ್‌ನಲ್ಲಿ ಮುಂಭಾಗ ಸಂಭವಿಸಿದೆ. ಉದ್ಯಾವರ ಸಂಪಿಗೆನಗರ ನಿವಾಸಿ ಸಚಿನ್ (23) ಮೃತಪಟ್ಟ ಯುವಕ. ಈತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಊಟ ಮಾಡಿ ಹೊರಬರುತ್ತಿದ್ದ. ಈ ವೇಳೆ ಸಚಿನ್ ಏಕಾಏಕಿಯಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಎತ್ತಿಕೊಂಡ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಸಚಿನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. […]
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್: ಅಧ್ಯಕ್ಷರಾಗಿ ರೋಬರ್ಟ್ ಮಿನೇಜಸ್, ಕಾರ್ಯದರ್ಶಿಯಾಗಿ ಸಂತೋಷ್ ಕರ್ನೆಲಿಯೋ ನೇಮಕ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಪ್ರಭಾವಿ ಸಂಘಟನೆಯಾದ ಕೆಥೊಲಿಕ್ ಸಭಾ ಇದರ 2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಕಳ ವಲಯದ ಕಣಜಾರು ಧರ್ಮಕೇಂದ್ರದ ರೊಬರ್ಟ್ ಮಿನೇಜಸ್ ಹಾಗೂ ಕಾರ್ಯದರ್ಶಿಯಾಗಿ ಸಂತೋಷ್ ಕರ್ನೆಲಿಯೋ ಮೌಂಟ್ ರೋಸರಿ ಕಲ್ಯಾಣಪುರ ಆಯ್ಕೆಯಾಗಿದ್ದಾರೆ. ಉಡುಪಿಯ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ರೋಬರ್ಟ್ ಮಿನೇಜಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು: ನಿಕಟಪೂರ್ವ ಅಧ್ಯಕ್ಷ : ಆಲ್ವಿನ್ ಕ್ವಾಡ್ರಸ್ ಕೋಟ, ನಿಯೋಜಿತ ಅಧ್ಯಕ್ಷ- ಮೇರಿ ಡಿಸೋಜಾ ಉದ್ಯಾವರ, ಉಪಾಧ್ಯಕ್ಷ- […]
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ರಾಜನ್ ಅವರು ಮೂಲತಃ ಮೈಸೂರಿನವರು. ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರು ತಮ್ಮ ಸಹೋದರ ನಾಗೇಂದ್ರ ಅವರ ಜೊತೆ ಸೇರಿ ಹಲವು ಸಿನಿಮಾಗಳಲ್ಲಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಇವರಿಬ್ಬರನ್ನು ಚಿತ್ರರಂಗ ರಾಜನ್ -ನಾಗೇಂದ್ರ ಜೋಡಿ ಎಂದು ಗುರುತಿಸುತ್ತದೆ. 1950ರಿಂದ 1990ರ ವರೆಗೆ ಕನ್ನಡದಲ್ಲಿ ಹಲವಾರು ನಿಸಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ತುಳು ಸಹಿತ ವಿವಿಧ ಭಾಷೆಗಳಲ್ಲಿ […]
ಕಾಂಗ್ರೆಸ್ ತೊರೆದ ನಟಿ ಖುಷ್ಬೂ: ಬಿಜೆಪಿ ಸೇರ್ಪಡೆ ಸಾಧ್ಯತೆ
ನವದೆಹಲಿ: ಕಾಂಗ್ರೆಸ್ ವಕ್ತಾರೆ ಆಗಿದ್ದ ನಟಿ ಖುಷ್ಬೂ ಸುಂದರ್ ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಎಐಸಿಸಿ ವಕ್ತಾರ ಸ್ಥಾನದಿಂದ ಕೈಬಿಡಲಾಗಿದೆ. ಆದೇಶವು ತಕ್ಷಣದಿಂದಲೇ ಅನ್ವಯವಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ. ಖುಷ್ಬೂ ಸೋಮವಾರ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದರಿಂದ ಕಾಂಗ್ರೆಸ್ ತೊರೆದಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಖುಷ್ಬೂ ತಮಿಳುನಾಡಿನಿಂದ ದೆಹಲಿ ತಲುಪಿದ್ದಾರೆ. 2010ರಲ್ಲಿ ಖುಷ್ಬೂ ಡಿಎಂಕೆ ಸೇರ್ಪಡೆಯಾಗಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಬಳಿಕ 2014ರಲ್ಲಿ ಡಿಎಂಕೆ ತೊರೆದ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2019ರ […]