ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಟಿ. ರವಿ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಎರಡು ಹುದ್ದೆಗಳಲ್ಲಿ ಮುಂದುವರೆಯಲು ಅವಕಾಶ ಇಲ್ಲದ ಕಾರಣದಿಂದ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶನಿವಾರ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೇ 5ರಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆ […]

ಕಾಂಗ್ರೆಸ್ ಸೇರಿದ ಕುಸುಮಾ ರವಿ: ಆರ್ ಆರ್ ನಗರ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ

ಬೆಂಗಳೂರು: ಜೆಡಿಎಸ್‌ ಮುಖಂಡ ಹನುಮಂತರಾಯಪ್ಪ ಅವರ ಮಗಳು ( ದಿ. ಐಎಎಸ್‌ ಅಧಿಕಾರಿ ಡಿ.ಕೆ. ರವಿ ಪತ್ನಿ) ಕುಸುಮಾ ರವಿ ಭಾನುವಾರ ಕಾಂಗ್ರೆಸ್‌ ಸೇರಿದ್ದು, ಅವರು ಆರ್‌.ಆರ್‌. ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗುವುದು ಬಹುತೇಕ ಖಚಿತಗೊಂಡಿದೆ ಎಂದು ತಿಳಿದುಬಂದಿದೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಹನುಮಂತರಾಯಪ್ಪ ಅವರು ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್ ಸೇರಿದ್ದರು. ಅವರು ಮಗಳನ್ನು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಉಪ ಚುನಾವಣೆಗೆ ಈಗಾಗಲೇ […]

ಕುಂದಾಪುರದ ಯುವ ಪತ್ರಕರ್ತ ಹರೀಶ್ ನಿಧನ

ಕುಂದಾಪುರ: ಕುಂದಾಪುರದ ಸ್ಥಳೀಯ ಚಾಲುಕ್ಯ ಪತ್ರಿಕೆಯ ಪತ್ರಕರ್ತನಾಗಿದ್ದ ಹೊಸಾಡು ಕೆಳ ಕುಂಬ್ರಿ ನಿವಾಸಿ ಹರೀಶ್(27) ಅನಾರೋಗ್ಯದಿಂದ ನಿಧನ ಹೊಂದಿದರು. ಹರೀಶ್ ಚಾಲುಕ್ಯದಲ್ಲಿ ಸುದ್ದಿ ಸಂಗ್ರಹ, ಪ್ರಸರಣ ಹಾಗೂ ಜಾಹಿರಾತು ವಿಭಾಗದಲ್ಲಿ ಕಳೆದ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಕೂಡ ಆಗಿದ್ದರು. ಕಳೆದ ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎರಡು ದಿನದ ಹಿಂದೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಿಸದೆ […]

ಯುವ ಬರಹಗಾರ ಪ್ರಸಾದ್ ಶೆಣೈ ಅವರ “ಒಂದು ಕಾಡಿನ ಪುಷ್ಪಕ ವಿಮಾನ” ಕೃತಿ ಬಿಡುಗಡೆ

ಕಾರ್ಕಳ: ಮನೆಯಲ್ಲಿ ತಾಯಿ ನೆಮ್ಮದಿಯಾಗಿದ್ದರೆ ಇಡೀ ಮನೆ, ಮನೆಯ ವಾತಾವರಣ ಸುಖ ಶಾಂತಿಯಿಂದಿರುತ್ತದೆ. ಆದರೆ ತಾಯಿಯೇ ನೆಮ್ಮದಿಯಾಗಿಲ್ಲದಿದ್ದರೆ ಆ ಮನೆಯಲ್ಲೂ ನೆಮ್ಮದಿ ಸಾಧ್ಯವಿಲ್ಲ. ಸದ್ಯ ಪ್ರಕೃತಿ ಅನ್ನೋ ತಾಯಿ ಕಷ್ಟದಲ್ಲಿದ್ದಾಳೆ. ಮನೆ ಹೊತ್ತಿ ಉರಿದರೂ ನಮಗೂ ಆ ಮನೆಯೂ ಸಂಬಂಧವಿಲ್ಲ ಎನ್ನುವ ಪರಿಸ್ಥತಿ ಇದೆ. ಪ್ರಕೃತಿ ತಾಯಿ ಸುಖದಿಂದಿರದಿದ್ದರೆ ಲೋಕಕ್ಕೂ ಸುಖವಿಲ್ಲ ಎಂದು ಪರಿಸರ ತಜ್ಙ, ಲೇಖಕ ಪರಿಸರ ಹೋರಾಟಗಾರರಾದ ದಿನೇಶ್ ಹೊಳ್ಳ ಹೇಳಿದ್ದಾರೆ. ಅವರು ಮಾಳ ಕಾಡಿನ ಪರಿಸರದ ರಮ್ಯ ಮಡಿಲಿನಲ್ಲಿ ಸಾಂಪ್ರದಾಯಿಕ ಜಾರಿಗೆ ಮನೆಯ […]

ಹಿರಿಯಡಕ: ಭಾರೀ ಗಾತ್ರದ ಹೆಬ್ಬಾವು, ನಾಗರಹಾವು ಪತ್ತೆ

ಹಿರಿಯಡಕ: ಹಿರಿಯಡಕ-ಉಡುಪಿ ರಸ್ತೆಯ, ಜಿಮ್ ಬಿಲ್ಡಿಂಗ್ ಬಳಿಯಲ್ಲಿ ಇರುವ ಪಾಳುಬಿದ್ದ ಮನೆಯೊಂದರಲ್ಲಿ ಭಾರೀ ಗಾತ್ರದ ಹೆಬ್ಬಾವು ಹಾಗೂ ನಾಗರಹಾವೊಂದು ಪತ್ತೆಯಾಗಿದೆ. ಶನಿವಾರ ರಾತ್ರಿ ಪಾಳುಬಿದ್ದ ಮನೆಯಲ್ಲಿ ಹಾವುಗಳು ಬುಸುಗುಡುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಮನೆಯೊಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಅಲ್ಲಿ ಹೆಬ್ಬಾವು ಹಾಗೂ ನಾಗರಹಾವು ಇರುವುದು ಕಾಣಿಸಿಕೊಂಡಿದೆ. ಸ್ಥಳೀಯರಾದ ತ್ಯಾಗರಾಜ್ ಮಾಣೈ ಹಾಗೂ ಇತರ ಸ್ಥಳೀಯ ಯುವಕರು ಸೇರಿಕೊಂಡು ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಡಿದ ಹಾವುಗಳನ್ನು ಗೋಣಿಚೀಲವೊಂದರಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.