ಮರು ಮೌಲ್ಯಮಾಪನ: 11 ಅಂಕಗಳನ್ನು ಕಳೆದುಕೊಂಡ ವಿದ್ಯಾರ್ಥಿನಿ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮರು ಮೌಲ್ಯಮಾಪನಕ್ಕೆ ಹಾಕಿ 11 ಅಂಕಗಳನ್ನು ಕಳೆದುಕೊಂಡಿದ್ದಾಳೆ. ಶಿವಮೊಗ್ಗ ಜಿಲ್ಲೆ ಹೊಸನಗರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ಅಂಕ ಕಳೆದುಕೊಂಡಿದ್ದಾಳೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಗಳಿಸಿದ್ದಳು.‌ ಆದರೆ ಆಕೆಗೆ ನೂರಕ್ಕೆ ನೂರು ಅಂಕ ಗಳಿಸುವ ವಿಶ್ವಾಸವಿದ್ದ ಕಾರಣ ಮರು ಮೌಲ್ಯಮಾಪನಕ್ಕೆ ಹಾಕಿದ್ದಳು. ಮರು ಮೌಲ್ಯಮಾಪನದಲ್ಲಿ 88 ಅಂಕ ಬಂದು ಬರೋಬ್ಬರಿ 11 ಅಂಕ ಕಡಿತಗೊಂಡಿದೆ. ಮರುಮೌಲ್ಯಮಾಪನದಲ್ಲಿ  ಕಡಿಮೆ ಅಂಕ ಬಂದಿದ್ದರಿಂದ ಪಾಲಕರೊಂದಿಗೆ ಪಿಯು ಮಂಡಳಿಯನ್ನು […]

ಉತ್ತರಪ್ರದೇಶ: ಮತ್ತೊಂದು ಯುವತಿ ಅತ್ಯಾಚಾರಕ್ಕೆ ಬಲಿ

ಬಲರಾಂಪುರ: ಹತ್ರಾಸ್ ಅತ್ಯಾಚಾರ ಪ್ರಕರಣದ ಬೆನ್ನಲೇ ಇದೀಗ ಉತ್ತರಪ್ರದೇಶದ ಬಲರಾಂಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದ್ದು, 22 ವರ್ಷದ ಯುವತಿ ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿ ಮಂಗಳವಾರ  ಮನೆಗೆ ಮರಳುವಾಗ ಇಬ್ಬರು ಪುರುಷರು ದಲಿತ ಜನಾಂಗಕ್ಕೆ ಸೇರಿದ ಯುವತಿಯ ಮೇಲೆ ಎರಗಿದ್ದು ಗಂಭೀರ ಸ್ಥಿತಿಯಲ್ಲಿ ಈಕೆ ಮನೆ ಸೇರಿದ್ದಳು ಎಂದು ಕುಟುಂಬದವರು ತಿಳಿಸಿರುವುದಾಗಿ ಪೊಲೀಸ್‌ ವರಿಷ್ಠಾಧಿಕಾರಿ ದೇವ್‌ ರಂಜನ್‌ ವರ್ಮ ಹೇಳಿದ್ದಾರೆ. ಸಮೀಪದ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಯುವತಿ […]

ಚಿತ್ರಾಪುರ ಮಠಾಧೀಶ ವಿದ್ಯೇಂದ್ರತೀರ್ಥ ಶ್ರೀಪಾದರಿಗೆ 21ನೇ ಜನ್ಮನಕ್ಷತ್ರದ ಸಂಭ್ರಮ

ಚಿತ್ತಾಪುರ: ದ.ಕ‌. ಜಿಲ್ಲೆಯ ಸುರತ್ಕಲ್ ಸಮೀಪ ಇರುವ ಶ್ರೀ ಕ್ಷೇತ್ರ ಚಿತ್ರಾಪುರ ಒಂದು ದಿವ್ಯ ಕ್ಷೇತ್ರ. ಜಗದ್ಗುರು ಶ್ರೀ ಮಧ್ವಾಚಾರ್ಯ ಪರಂಪರೆಯ ಶ್ರೀ ಪೇಜಾವರ ಅಧೋಕ್ಷಜ ಮಠದ ಕವಲು ಮಠವೂ ಇದಾಗಿದೆ. ಶ್ರೀ ಪೇಜಾವರ ಮಠದ ಯತಿ ಪರಂಪರೆಯ ಪ್ರಾತಃಸ್ಮರಣೀಯರಾದ ಕೀರ್ತಿಶೇಷ ಶ್ರೀ ವಿಜಯಧ್ವಜತೀರ್ಥರು ತಮಗೆ ಒಲಿದ ದುರ್ಗೆಯನ್ನು ಚಿತ್ರಾಪುರದಲ್ಲಿ ಪ್ರತಿಷ್ಠಾಪಿಸಿ ಸುಂದರ ದೇವಾಲಯ ನಿರ್ಮಿಸಿದರು. ಅದರ ನಿರ್ವಹಣೆಗಾಗಿ ಅಲ್ಲೇ ಸಮೀಪದಲ್ಲೇ ಒಂದು ಮಠವನ್ನು ಸ್ಥಾಪಿಸಿ ಓರ್ವ ಯತಿಗಳನ್ನು ನೇಮಿಸಿದರು. ಅದೇ ಪರಂಪರೆಯಾಯಿತು. ಆ ಯತಿ ಪರಂಪರೆಯ […]