ಪ್ರಸಿದ್ಧ ಬಾಣಸಿಗ ಮುರಳೀಧರ ಭಟ್ ವಿಧಿವಶ

ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸಕ್ರಿಯ ಸದಸ್ಯ ಮುರಳೀಧರ ಭಟ್ (76) ಅಲ್ಪಕಾಲದ ಅಸೌಖ್ಯದಿಂದ ಉಡುಪಿ ಕಡಿಯಾಳಿಯಲ್ಲಿ ಇರುವ ಪುತ್ರಿಯ ಮನೆಯಲ್ಲಿ ಭಾನುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ .
ಡ್ರಗ್ಸ್ ನಂಟಿನ ಆರೋಪ: ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ, ಶೋಧಕಾರ್ಯ

ಬೆಂಗಳೂರು: ಡ್ರಗ್ಸ್ ಜಾಲದ ನಂಟಿನ ಆರೋಪದಡಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮನೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ಇರುವ ಫ್ಲ್ಯಾಟ್ ಗೆ ಇಂದು ಬೆಳಿಗ್ಗೆ 6.30ಕ್ಕೆ ಪೊಲೀಸರು ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ಸಂಜನಾಗೆ ಸೇರಿದ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಹಾಗೆ ಸಂಜನಾಳಿಗೆ ಸೇರಿದ ಮೂರು ಮೊಬೈಲ್ ಗಳನ್ನು ಹಾಗೂ ಮನೆಯಲ್ಲಿ ಸಿಕ್ಕಿರುವ ವಸ್ತುಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ. ಇದೀಗ ಸಂಜನಾ ಪೊಲೀಸರ ವಿಚಾರಣೆಗೆ […]