ಡ್ರಗ್ಸ್ ದಂಧೆ: ನಟಿ ರಿಯಾ ಚಕ್ರವರ್ತಿಗೆ ಎನ್ ಸಿಬಿಯಿಂದ ನೋಟಿಸ್ ಜಾರಿ

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ನಟಿ ರಿಯಾ ಚಕ್ರವರ್ತಿಗೆ ದಿನದಿಂದ ದಿನಕ್ಕೆ ಬೀಗಿಗೊಳ್ಳುತ್ತಿದ್ದು, ರಿಯಾಳ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇದೀಗ ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ರಿಯಾ ಚಕ್ರವರ್ತಿಗೆ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಎನ್ ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಎನ್‌ಸಿಬಿ ಕಸ್ಟಡಿಯಲ್ಲಿ ಇರುವ ರಿಯಾ ಚಕ್ರವರ್ತಿ ಸಹೋದರ ಶೋವಿಕ್, ಸ್ಯಾಮುಯೆಲ್ ಮಿರಾಂಡ ಹಾಗೂ ದೀಪೇಶ್ ಸಾವಂತ್ ವಿಚಾರಣೆ […]
ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ವಿಧಿವಶ

ಕಾಸರಗೋಡು: ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ (76) ಶನಿವಾರ ಮಧ್ಯರಾತ್ರಿ ಇಹಲೋಕ ತ್ಯಜಿಸಿದರು. ಎಡನೀರು ಸ್ವಾಮೀಜಿ ಕಲಾವಿದರ ಬಗ್ಗೆ ವಿಶೇಷ ಗೌರವ ಪ್ರೀತಿ ಹೊಂದಿದ್ದರು. ಸ್ವತಃ ಸಂಗೀತ ಮತ್ತು ಭಾಗವತಿಕೆಯ ಕಲಾವಿದರಾಗಿ, ಯಕ್ಷಗಾನ ಮೇಳವನ್ನು ನಡೆಸಿದ್ದರು. ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ, ಯಕ್ಷಗಾನ, ಭರತನಾಟ್ಯ , ಸಂಗೀತಾದಿ ಕಾರ್ಯಕ್ರಮಗಳನ್ನು ಮಾಡಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಶ್ರೀಗಳು ಹರಿಕಥೆಯನ್ನೂ ಮಾಡುತ್ತಿದ್ದರು. ಕರಾವಳಿಯ ಪ್ರಸಿದ್ದ ಯಕ್ಷಗಾನದ ಮೇಲೆ ವಿಶೇಷ ಒಲವಿದ್ದ […]