ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ ಅದಲು ಬದಲು: ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿಯ ಎಡವಟ್ಟು ಬಹಿರಂಗ
ಉಡುಪಿ: ಇಲ್ಲಿನ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಅದಲು ಬದಲು ಆದ ಘಟನೆ ನಡೆದಿದೆ. ಕೋಟೇಶ್ವರದ ಮೂಲದ ಗಂಗಾಧರ್ ಎಂಬ ವ್ಯಕ್ತಿ ನ್ಯೂಮೋನಿಯದಿಂದ ಮೃತಪಟ್ಟಿದ್ದರು. ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಗಂಗಾಧರ್ ಅವರ ಶವ ನೀಡುವ ಬದಲು ಕಾರ್ಕಳ ಮೂಲದ ವ್ಯಕ್ತಿಯ ಶವ ನೀಡಿ ಎಡವಟ್ಟು ಮಾಡಿದ್ದಾರೆ. ಕುಂದಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವ ವೇಳೆ ಶವ ಬದಲಾಗಿರುವ ವಿಚಾರ ಕುಟುಂಬಸ್ಥರಿಗೆ ತಿಳಿದಿದ್ದು, ಇದರಿಂದ ಕುಟುಂಬಸ್ಥರು ಗೊಂದಲಕ್ಕೀಡಾಗಿದ್ದಾರೆ.
ನೀಲಾವರ ಗೋಶಾಲೆಯಲ್ಲಿ ಬೈಹುಲ್ಲಿನ ಗಣಪ: ಪೇಜಾವರ ಶ್ರೀಗಳಿಂದ ವಿಶೇಷ ರೀತಿಯಲ್ಲಿ ಗಜಮುಖನ ಆರಾಧನೆ
ಬ್ರಹ್ಮಾವರ: ನೀಲಾವರ ಗೋಶಾಲೆಯಲ್ಲಿರುವ ಪೇಜಾವರ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಿದರು. ತಮ್ಮ ವಿದ್ಯಾರ್ಥಿಗಳು ಬೈಹುಲ್ಲನ್ನು ( ಭತ್ತದ ಒಣಹುಲ್ಲು) ಬಳಸಿಕೊಂಡು ರಚಿಸಿದ ಗಣಪತಿ ಹಾಗೂ ರಾಜ್ಯ ಪರಿಸರ ಇಲಾಖೆ ಸೂಚಿಸಿದಂತೆ ಅರಶಿನ ಹುಡಿಯಲ್ಲಿ ಚಿಕ್ಕ ಗಣಪತಿ ವಿಗ್ರಹ ಸಿದ್ಧಪಡಿಸಿ ಅದಕ್ಕೆ ಸುಂದರ ಅಲಂಕಾರಗಳನ್ನು ಮಾಡಿ ಗಜಮುಖನ ಆರಾಧಿಸಿದರು. ಗಣಯಾಗವೂ ವೈದಿಕರಿಂದ ನಡೆಯಿತು. ಮಹಾಪೂಜೆಯನ್ನು ಶ್ರೀಗಳು ನೆರವೇರಿಸಿ, ಕೊರೊನಾ ಮಾರಕ ರೋಗದಿಂದ ಮುಕ್ತಿ ದೊರೆತು ಲೋಕಕ್ಷೇಮವಾಗಲಿ. […]