ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಅವರಿಂದ ನಿರ್ಗತಿಕರಿಗೆ ಬೆಡ್ ಶೀಟ್ ವಿತರಣೆ
ಉಡುಪಿ: ಉಡುಪಿ ಯೂತ್ ಕಾಂಗ್ರೆಸ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು. ಯುತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಅವರ ನೇತೃತ್ವದಲ್ಲಿ ನಗರದ ಅಂಗಡಿ ಮುಂಗಟ್ಟು, ಬಸ್ ಸ್ಟ್ಯಾಂಡ್ ಗಳಲ್ಲಿ ರಾತ್ರಿ ಮಲಗುತ್ತಿದ್ದ ನಿರ್ಗತಿಕರಿಗೆ ಬೆಡ್ ಶೀಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರದೀಪ್, ಹಮದ್, ಝಮೀರ್ ಸಾಥ್ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
ನವದೆಹಲಿ: ಕಳೆದ ಮೂರ್ನಾಲ್ಕು ದಿನಗಳಿಂದ ಮೈ-ಕೈ ನೋವು, ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಧ್ಯಾಹ್ನ ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಮಿತ್ ಶಾ ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಏಮ್ಸ್ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಡುಕ್ಕಿ ಭೂಕುಸಿತ: ಮೃತರ ಸಂಖ್ಯೆ 61 ಏರಿಕೆ
ಕೇರಳ (ಇಡುಕ್ಕಿ): ಇಲ್ಲಿನ ಪೆಟ್ಟಿಮುಡಿ ಎಂಬಲ್ಲಿ ಆ.7ರಂದು ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಮೂರು ಶವಗಳು ಪತ್ತೆಯಾಗಿದ್ದು, ಇನ್ನೂ 9 ಜನರು ನಾಪತ್ತೆಯಾಗಿದ್ದಾರೆ. ಆರು ವರ್ಷದ ಬಾಲಕನ ಶವ ಹಾಗೂ 57 ವರ್ಷದ ವ್ಯಕ್ತಿಯೊಬ್ಬರ ಶವವನ್ನು ಗುರುತಿಸಲಾಗಿದ್ದು, ಮತ್ತೊಂದು ಶವದ ಗುರುತು ಇನ್ನಷ್ಟೇ ಸಿಗಬೇಕಿದೆ. ಭೂಕುಸಿತದಲ್ಲಿ 20 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದವು. ಘಟನೆಯಲ್ಲಿ 12 ಜನರನ್ನು ರಕ್ಷಿಸಲಾಗಿದೆ. ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ […]
ಸ್ವಯಂ ಉದ್ಯೋಗ ಮತ್ತು ಜಿಮ್ ಸ್ಥಾಪನೆಗೆ ಅರ್ಜಿ ಆಹ್ವಾನ
ಉಡುಪಿ, ಆಗಸ್ಟ್18: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸ್ತಕ ಸಾಲಿನ ವಿಶೇ಼ಷ ಘಟಕ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ 2019 ನೇ ಸಾಲಿಗೆ ಅಂತರಾಷ್ಟೀಯ, ರಾಷ್ಟೀಯ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರೀಡಾ ಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಮತ್ತು ಜಿಮ್ ಸ್ಥಾಪನೆಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ https://karunadu.karnataka.gov.in/dyes ಅಥವಾ […]
ಮೀನುಗಾರಿಕೆ ಸಚಿವ ಕೋಟರಿಂದ ನವದೆಹಲಿ ಭೇಟಿ: ಮೀನುಗಾರಿಕೆ, ಬಂದರು ಯೋಜನೆಗಳ ಕುರಿತು ಕೇಂದ್ರ ಕೃಷಿ ಸಚಿವರ ಜತೆ ಚರ್ಚೆ
ನವದೆಹಲಿ: ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿಯಾಗಿ ಕರ್ನಾಟಕ ರಾಜ್ಯದ ವಿವಿಧ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಕುರಿತಂತೆ ಚರ್ಚೆ ನಡೆಸಿದರು. ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ, ಕಾರವಾರದ ಮಾವಾಳಿ ಹಾಗೂ ಮಂಗಳೂರಿನ ಬೈಕಂಪಾಡಿಯಲ್ಲಿ ಸಂಯೋಜಿತ ಸೀ ಫುಡ್ ಪಾರ್ಕ್ ಯೋಜನೆಗಳು. ರಾಜ್ಯ ಕರಾವಳಿಯ 8 ಮೀನುಗಾರಿಕಾ ಹಾರ್ಬರ್ ಗಳ ಆಧುನೀಕರಣ ಹಾಗೂ 16 ಕಡೆಗಳಲ್ಲಿ ಮೀನುಗಾರಿಕಾ ಇಳಿದುದಾಣಗಳ ಉನ್ನತೀಕರಣ […]