ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಆಶ್ರಯದಲ್ಲಿ ಸಾಧಕರಿಗೆ ಸನ್ಮಾನ
ಉಡುಪಿ: ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಇವರ ಜಂಟಿ ಸಹಭಾಗಿತ್ವದಲ್ಲಿ ಈ ಬಾರಿ 10ನೇ ತರಗತಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ಸ್ಥಾನಿ ಹರ್ಷಿತ್ ರಾಜು (ಶೇ. 98.24), ದ್ವಿತೀಯ ಸ್ಥಾನಿ ಅನನ್ಯ ಕೆ. (ಶೇ. 98.08) ಹಾಗೂ ತೃತೀಯ ಸ್ಥಾನಿ ಐಶ್ವರ್ಯ ಎ.ಜಿ. (ಶೇ. 97.60) ಇವರನ್ನು ಸನ್ಮಾನಿಸಲಾಯಿತು. ಏಂಜಲ್ಸ್ ಫೌಂಡೇಶನ್ ನ ಸ್ಥಾಪಕ ಹಾಗೂ ಅಧ್ಯಕ್ಷ ರೋಬರ್ಟ್ ಡಿಸೋಜ ಇವರು ಫೌಂಡೇಶನ್ ನ […]
ದ.ಕ- ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85 ಅಂಕ ಗಳಿಸಿದ ‘ಸಿ’ ವರ್ಗದ ಸದಸ್ಯರ ಮಕ್ಕಳು, ದ್ವಿತೀಯ ಪಿಯುಸಿ/ ತತ್ಸಮಾನ ತಾಂತ್ರಿಕ ಪರೀಕ್ಷೆಯಲ್ಲಿ ಶೇ. 80 ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿದ ಸಾಮಾನ್ಯ ವರ್ಗದವರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ನೀಡಲು […]
ಮಲೆಕುಡಿಯ ಸಂಘ ಹೆಬ್ರಿ: ತಾಲೂಕು ಸಮಿತಿ ಅಧ್ಯಕ್ಷರಾಗಿ ಸತೀಶ ಗೌಡ ಪಾರಿಕಲ್ಲು ಆಯ್ಕೆ
ಉಡುಪಿ: ಜಿಲ್ಲಾ ಮಲೆಕುಡಿಯ ಸಂಘ ಹೆಬ್ರಿ ಇದರ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಸತೀಶ ಗೌಡ ಪಾರಿಕಲ್ಲು ಹಾಗೂ ಪ್ರಧಾನ ಕಾರ್ಯದರ್ಶಿ ಹರೀಶ್ ಅಂಡಾರು ಅವರು ಆಯ್ಕೆಯಾಗಿದ್ದಾರೆ. ಹಿರಿಯಡಕದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಮಂಜಪ್ಪ ಗೌಡ ಅವರ ಉಪಸ್ಥಿತಿಯಲ್ಲಿ ಹೊಸ ಸಮಿತಿಯನ್ನು ರಚನೆ ಮಾಡಲಾಯಿತು. ಇತರ ಪದಾಧಿಕಾರಿಗಳು: ಸಮಿತಿಯ ಉಪಾಧ್ಯಕ್ಷ- ಶೇಖರ ನಾಡ್ಪಾಲು, ಜಂಟಿ ಕಾರ್ಯದರ್ಶಿ- ಹೃದಯ ಬಲ್ಲಾಡಿ ಕೋಶಾಧಿಕಾರಿ- ಗೀತಾ ಮತ್ತಾವು, ಸಂಘಟನಾ ಕಾರ್ಯದರ್ಶಿ- ಅಶೋಕ […]
ಕಾರ್ಕಳ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ವತಿಯಿಂದ ಅರ್ಹ ಜನರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ
ಕಾರ್ಕಳ: ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ೭೪ನೇ ಸ್ವಾತಂತ್ರೋತ್ಸವದ ಅಂಗವಾಗಿ 74ಕ್ಕೂ ಜಾಸ್ತಿ ಅರ್ಹ ಜನರಿಗೆ ಮತಬೇಧವಿಲ್ಲದೇ ಉಚಿತ ಬಟ್ಟೆ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ಪುರಸಭಾ ಸದಸ್ಯ, ಮುಸ್ಲಿಂ ಜಮಾತ್ ಅಧ್ಯಕ್ಷರಾದ ಜನಾಬ್ ಅಶ್ಪಕ್ ಅಹ್ಮದ್ ಮಾತನಾಡಿ, ಪೂರ್ಣಿಮಾ ಸಮೂಹ ಸಂಸ್ಥೆಗಳ ಸ್ಥಾಪಕ ಪಾಂಡುರಂಗ ಪ್ರಭುಗಳ ಸೇವೆಯನ್ನು ಮುಂದುವರಿಸುತ್ತಿರುವ ಪೂರ್ಣಿಮಾ ಸಿಲ್ಕ್ಸ್‌ನ ರವಿಪ್ರಕಾಶ್ ಪ್ರಭು ದಂಪತಿಗಳ ಕಾರ್ಯವನ್ನು ಅಭಿನಂದಿಸಿದರು. ಇನ್ನೋರ್ವ ಮುಖ್ಯ ಅತಿಥಿ ಕಾರ್ಕಳ ಗ್ರಾಮಾಂತರ ಅರಕ್ಷಕ ಠಾಣಾ ನಿರೀಕ್ಷಕರಾದ ನಾಸೀರ್ ಹುಸೇನ್ […]
ನಾವುಂದ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು
ನಾವುಂದ: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರು ಸಂಭವಿಸಿದೆ. ಮೃತನನ್ನು ಮರವಂತೆ ನಿವಾಸಿ ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಿಶನ್ ಖಾರ್ವಿ (17) ಎಂದು ಗುರುತಿಸಲಾಗಿದೆ. ಕಾಲೇಜು ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಿಶನ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಿಶನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಗಂಗೊಳ್ಳಿ ಆಪತ್ಭಾಂದವ […]