ಪ್ರೀತಿಯ ಬಂಧನವೂ ಸ್ವಾತಂತ್ರ್ಯವೇ!: ಟಿ.ದೇವಿದಾಸ್ ಬರೆದ ವಿಶೇ‍ಷ ಲೇಖನ

       ಟಿ. ದೇವಿದಾಸ್ ಸ್ವಾತಂತ್ರ್ಯವೆಂಬುದು ದೇಹಕ್ಕೆ ಸಂಬಂಧಿಸಿದ್ದಾ? ಮನಸಿಗೆ ಸಂಬಂಧಿಸಿದ್ದಾ? ಬುದ್ಧಿಗೆ ಸಂಬಂಧಿಸಿದ್ದಾ? ಅರೆ, ಇದೆಂಥಾ ವಿಚಿತ್ರವಾದ ಪ್ರಶ್ನೆ. ಅಷ್ಟಕ್ಕೂ ಸ್ವಾತಂತ್ರ್ಯವೆಂಬುದು ದೇಹಕ್ಕೆ, ಮನಸಿಗೆ ಸಂಬಂಧಿಸಿದ್ದೇ? ಅಹುದು, ಸ್ವಾತಂತ್ರ್ಯವೆಂಬುದು ದೇಹ ಮತ್ತು ಮನಸು ಎರಡಕ್ಕೂ ಸಂಬಂಧಿಸಿದ್ದು. ದೇಹಕ್ಕೆ ನಾವೇ ಹಾಕಿಕೊಂಡ ಬಂಧನವೂ ಸ್ವಾತಂತ್ರ್ಯ ಎನಿಸಿಬಿಡುತ್ತದೆ. ಆಹಾರ-ವಿಹಾರ, ಉಡುಗೆ-ತೊಡುಗೆಗಳಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದರೂ ನಮಗೆ ನಾವೇ ಬೇಲಿಗಳನ್ನು ಹಾಕಿಕೊಂಡಿದ್ದೇವೆ. ಮನಸಿಗೂ ಅಂದರೆ ನಮ್ಮ ಮಾತು, ನಗು, ಚಿಂತನೆ, ಅಭಿವ್ಯಕ್ತಿಗಳಲ್ಲಿ ಮಿತಿಗಳನ್ನು ಹಾಕಿಕೊಂಡು ಬದುಕುತ್ತಿದ್ದೇವೆ. ಒಟ್ಟಲ್ಲಿ, ಸ್ವಾತಂತ್ರ್ಯವೆಂದರೆ ನಾವೇ […]