ನಾಳೆಯಿಂದ ಪ್ರಥಮ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಆರಂಭ
ಬೆಂಗಳೂರು: ನಾಳೆಯಿಂದ (ಆಗಸ್ಟ್ 13) ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳು ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು 2020-21ರ ಸಾಲಿಗೆ ಯಾವುದೇ ಶುಲ್ಕ ಹೆಚ್ಚಿಸುವಂತಿಲ್ಲ. ಕಳೆದ ಸಾಲಿಗಿಂತ ಕಡಿಮೆ ಶುಲ್ಕ ಪಡೆಯಲು ಆಡಳಿತ ಮಂಡಳಿಗಳಿಗೆ ಸ್ವಾತಂತ್ರ್ಯವಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಅಗತ್ಯ ಸೌಲಭ್ಯಗಳಿರುವ ಕಾಲೇಜುಗಳು ಆನ್‌ಲೈನ್ ಮೂಲಕವೇ ದಾಖಲಾತಿ ಪ್ರಕ್ರಿಯೆ ನಿರ್ವಹಿಸಬೇಕು. ಅಂಥ ವ್ಯವಸ್ಥೆ ಇಲ್ಲದ ಕಾಲೇಜುಗಳು ಅರ್ಜಿ […]
ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ: ಬಸವರಾಜ್ ಬೊಮ್ಮಾಯಿ
ಉಡುಪಿ: ಜಿಲ್ಲಾ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ಮೇಲ್ದರ್ಜೆಗೇರಿಸಿ 300 ಬೆಡ್‌ಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಗರದ ಕಂಟ್ರಿ ಹೋಟೆಲ್‌ನ ಸಭಾಂಗಣದಲ್ಲಿ ಜಿಲ್ಲಾಡಳಿತಕ್ಕೆ ವೆಂಟಿಲೇಟರ್ ಹಸ್ತಾಂತರಿಸುವ ಕಾರ‍್ಯಕ್ರಮದಲ್ಲಿ ವೆಂಟಿಲೇಟರ್‌ಗಳನ್ನು ಹಸ್ತಾಂತರಿಸಿ ಮಾತನಾಡಿದರು. ಉಡುಪಿಯ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳು ಅನುಮೋದನೆಯನ್ನು ನೀಡಿದ್ದಾರೆ. ಈ ಕಾರ‍್ಯಕ್ಕೆ ಅನುದಾನವು ಹಣಕಾಸು ಇಲಾಖೆಯಿಂದ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಮೇಲ್ದರ್ಜೆಗೇರಿಸಿ ಶೀಘ್ರದಲ್ಲಿ ಕಾರ‍್ಯ ಪ್ರಾರಂಭವಾಗಲಿದೆ ಎಂದರು. ಕೊರೋನಾ ಸೋಂಕು ಹೊಂದಿ ಉಸಿರಾಟದ […]
ನಿಟ್ಟೆ: ಎಐಸಿಟಿಇ ಪ್ರಾಯೋಜಿತ ಎಸ್‌ಟಿಟಿಪಿ ಸರಣಿ ಉದ್ಘಾಟನೆ
ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ (ಇ & ಸಿಇ) ವಿಭಾಗದ ವತಿಯಿಂದ ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಆನ್‌ಲೈನ್ ಅಲ್ಪಾವದಿ ತರಬೇತಿ ಕಾರ್ಯಕ್ರಮ (ಎಸ್‌ಟಿಟಿಪಿ) ಸರಣಿಯನ್ನು ಆ.7 ರಂದು ಸಂಸ್ಥೆಯಲ್ಲಿ ಉದ್ಘಾಟಿಸಲಾಯಿತು. ಅಡ್ವಾನ್ಸ್ಡ್ ಟಾಪಿಕ್ಸ್ ಇನ್ ಮೆಷಿನ್ ಲರ್ನಿಂಗ್ & ಅಪ್ಲಿಕೇಶನ್ ಇನ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಎಂಬ ವಿಷಯದ ಬಗ್ಗೆ ಈ ತರಬೇತಿ ನಡೆಯಲಿದೆ. ಮೊದಲ ಎಸ್‌ಟಿಟಿಪಿ ‘ಮ್ಯಾಥಮ್ಯಾಟಿಕಲ್ ಫೌಂಡೇಷನ್ಸ್ ಆಫ್ ಮೆಷಿನ್ ಲರ್ನಿಂಗ್ (ಲೀನಿಯರ್ ಆಲ್ಜೀಬ್ರಾ ಮತ್ತು […]
ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ
ಉಡುಪಿ : ಭಾರತೀಯ ಜನತಾ ಪಾರ್ಟಿ, ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರ ಅನುಮತಿಯೊಂದಿಗೆ ಬಿಜೆಪಿ ಉಡುಪಿ ಜಿಲ್ಲಾ ಸಮಿತಿಯನ್ನು ಪೂರ್ಣಗೊಳಿಸಿ ನೂತನ ಕಾರ್ಯಕಾರಿಣಿ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಎಸ್. ಕಲ್ಮಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಕಾರಿಣಿ ಸದಸ್ಯರು :ಹರೀಶ ಮೇಸ್ತ, ರಾಜಶೇಖರ ದೇವಾಡಿಗ, ವೀರಭದ್ರ ಶೆಟ್ಟಿ,ಸದಾಶಿವ ಪಡುವರಿ, ಪ್ರವೀಣ್ ಕುಮಾರ್ ಶೆಟ್ಟಿ ನಾಡ, ರವಿರಾಜ್ ಶೆಟ್ಟಿ ಚಿತ್ತೂರು,ಲೀಲಾ ಆರ್. ಪೂಜಾರಿ,ಶಾರದಾ ಕೇಶವ,ರವೀಂದ್ರ ದೊಡ್ಮನೆ, ವಿಠಲ […]
ವಿದ್ಯಾಪೋಷಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಇದರ ವಿದ್ಯಾಪೋಷಕ ವಿದ್ಯಾರ್ಥಿ ವೇತನಕ್ಕಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರು ಅಥವಾ ಉಡುಪಿಯ ಯಕ್ಷಗಾನ ಕಲಾರಂಗದ ಕಚೇರಿಯಿಂದ ಅರ್ಜಿಯನ್ನು ಪಡೆದು ಭರ್ತಿಗೊಳಿಸಿ ಆಗಸ್ಟ್ 20ರೊಳಗೆ ವಿದ್ಯಾಪೋಷಕ್, ಯಕ್ಷಗಾನ ಕಲಾರಂಗ, ಉಡುಪಿ-576101 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಕೆ.ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.