ಕೋವಿಡ್19 ಹಿನ್ನೆಲೆ: ಸ್ಕೌಟ್ಸ್- ಗೈಡ್ಸ್ ನಿಂದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದೆ. ಪ್ರತಿ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಪಥ ಸಂಚಲನ, ಸ್ವಚ್ಛತಾ ಕಾರ್ಯಕ್ರಮ, ಸರ್ವ ಧರ್ಮ ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿಯೇ ವಿಶಿಷ್ಟವಾದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಚಟುವಟಿಕೆಗಳನ್ನು ನೀಡಿದೆ. ಚಟುವಟಿಕೆ -1: ಮನೆಯ […]
ಸಾಮಾಜಿಕ ಜಾಲತಾಣದಲ್ಲಿ ಕಣ್ಮನ ಗೆದ್ದು, ಎಲ್ಲರ ಹೃದಯ ಕದ್ದ ಈ “ನೀಲ ಮೇಘ ಶ್ಯಾಮ” ಯಾರ್ ಗೊತ್ತಾ?
ಈ ನೀಲ ಮೇಘ ಶ್ಯಾಮನನ್ನು ನೋಡುತ್ತಿದ್ದರೆ ಆಹಾ ಅದೆಷ್ಟು ಚಂದ ಇದ್ದಾನೆ. ಕೃಷ್ಣನೆಂದರೆ ನಿಜಕ್ಕೂ ಹೀಗೇ ಇರಬಹುದೇನೋ ಅನ್ನಿಸಿಬಿಡುತ್ತದೆ. ಈ ಕೃಷ್ಣನ ನೀಲಿ ಬಣ್ಣಕ್ಕೆ ಕಣ್ಣು ಮನಸೋತುಬಿಡುತ್ತದೆ. ಅವನ ಮೊಗದಲ್ಲಿರೋ ಹೂ ನಗುವಿಗೆ ಮೈಮನಸ್ಸು ಥ್ರಿಲ್ಲ್ ಆಗಿಬಿಡುತ್ತದೆ. ಹೌದಪ್ಪ ಹೌದು, ಈ ಕೃಷ್ಣನ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ, ನೀಲ ಮೇಘಶ್ಯಾಮ ಎಲ್ಲರ ಹೃದಯ ಗೆದ್ದಾಗಿದೆ.ಕಣ್ಣು ಕದ್ದಾಗಿದೆ. ಅಂದ ಹಾಗೇ ಈ ನೀಲ ಮೇಘ ಶ್ಯಾಮ, ಬೇರ್ಯಾರೂ ಅಲ್ಲ, ಮಂಗಳೂರಿನ ವಕೀಲೆ, ಖ್ಯಾತ […]
ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿ ಜಿಲ್ಲೆ ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ
ಬೆಂಗಳೂರು: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 8,11,050 ವಿದ್ಯಾರ್ಥಿಗಳ ಪೈಕಿ 5,82,316 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 2,28,734 ಅನುತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ ಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.77.74 ಬಾಲಕಿಯರು ಹಾಗೂ ಶೇ. 66.41 ಬಾಲಕರು ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಉಡುಪಿ 7, ದಕ್ಷಿಣ […]
ಮುಖ್ಯಮಂತ್ರಿ ಯಡಿಯೂರಪ್ಪನವರು ಗುಣಮುಖರಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು 9 ದಿನಗಳಲ್ಲೇ ಸಂಪೂರ್ಣ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಅವರು ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಸಿಎಂ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಬಂದ ವರದಿಯಲ್ಲಿ ನೆಗೆಟಿವ್ ದೃಢಪಟ್ಟಿತ್ತು. ಹಾಗಾಗಿ ಆಸ್ಪತ್ರೆಯ ವೈದ್ಯರ ಬಳಿ ಸಮಾಲೋಚನೆ ನಡೆಸಿ ಇಂದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಲು ತೀರ್ಮಾನಿಸಿದ್ದರು. ಅದರಂತೆ ಇದೀಗ ಡಿಸ್ಚಾರ್ಜ್ ಆಗಿ ಮನೆ ತೆರಳಿದ್ದು, ಮನೆಯಲ್ಲಿಯೇ ಕೆಲ ದಿನ ಹೋಮ್ ಕ್ವಾರಂಟೈನ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ […]
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಈ ಬಾರಿ ಶೇ. 71.80 ರಷ್ಟು ಫಲಿತಾಂಶ: ಚಿಕ್ಕಬಳ್ಳಾಪುರ ಫಸ್ಟ್, ಯಾದಗಿರಿ ಲಾಸ್ಟ್
ಬೆಂಗಳೂರು: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಸಕ್ತ ವರ್ಷ ಶೇ. 71.80 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 8,11,050 ವಿದ್ಯಾರ್ಥಿಗಳ ಪೈಕಿ 5,82,316 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಈ ಬಾರಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ ಎರಡು ಹಾಗೂ ಮಧುಗಿರಿ ಮೂರನೇ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನ […]