ಅಯೋಧ್ಯೆ ರಾಮಮಂದಿರ ಶಿಲಾನ್ಯಾಸದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗೋಣ : ಯಶ್ ಪಾಲ್ ಸುವರ್ಣ
ಉಡುಪಿ: ಭಾರತೀಯರ ಬಹು ಶತಮಾನಗಳ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಸಾಕಾರವಾಗುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಗಳಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಲಕ್ಷಾಂತರ ಕರಸೇವಕರ ತ್ಯಾಗ ಬಲಿದಾನದೊಂದಿಗೆ, ಶ್ರೀ ಆಟಲ್ ಬಿಹಾರಿ ವಾಜಪೇಯಿ,ಲಾಲ್ ಕೃಷ್ಣ ಅಡ್ವಾಣಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿದ್ದ ಅಶೋಕ್ […]
ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ : ಮುಖ್ಯಮಂತ್ರಿಗೆ ಸಚಿವ ಕೋಟ ಪತ್ರ
ಉಡುಪಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ವೇಳೆಗೆ ಸುಸಜ್ಜಿತ ಕರ್ನಾಟಕ ಯಾತ್ರಿ ಭವನ ನಿರ್ಮಾಣವಾಗಬೇಕೆಂಬ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳ ಮನವಿಯನ್ನು ಪುರಸ್ಕರಿಸಿ, ರಾಮಮಂದಿರ ನಿವೇಶನದ ಆಸುಪಾಸಿನಲ್ಲಿ ಕನಿಷ್ಠ 3ರಿಂದ 5 ಎಕರೆ ನಿವೇಶನವನ್ನು ಒದಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳಲ್ಲಿ ನಿವೇದಿಸಿಕೊಳ್ಳುವಂತೆ ಕೋರಿ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಹೊಸಹೊಸ ಅನುಭವಗಳೇ ಇಲ್ಲಿ ಪಾಠವಾಗ್ತವೆ,ನಿಮ್ಮ ಬದುಕಿಗೆ ದಾರಿಯಾಗ್ತವೆ: ನಂಗೆ ಸಿಕ್ಕ ಪಾಠ ನಿಮಗೂ ಸಿಗಲಿ
♦♦ಶರಧಿ ಶೆಟ್ಟಿ ಅಯ್ಯೋ ದೇವ್ರೆ ಬೇಕಿತ್ತಾ ನಂಗೆ ಇದೆಲ್ಲಾ? ಅಂತ ಪರಿಸ್ಥಿತಿ, ಮನಸ್ಥಿತಿ ಕೆಟ್ಟಾಗ ಎಲ್ಲರೂ ತಮ್ಮಲ್ಲೇ ಅಂದುಕೂಂಡು ನೊಂದುಕೊಳ್ಳುವುದು ಸಹಜ..”ಶರಧಿ ಏಳು, ಓದು, ನೆನಪಿರಲಿ ಎಸ್ ಎಸ್.ಎಲ್. ಸಿ. ನೀನೀಗ” ಅಂತ ಪಕ್ಕದ ಮನೆಯ ರಾಜಿ ಆಂಟಿ ಕೂಡ ಹೇಳಲು ಶುರು ಮಾಡಿದ್ರೆ ಹೇಗ್ ಇರಬಹುದು ನನ್ನ ಪರಿಸ್ಥಿತಿ? ಆವಾಗ್ಲೇ ಧೃಢ ನಿಧಾ೯ರ ಮಾಡಿದೆ, ಹಾಸ್ಟೆಲ್ ಸೇರಬೇಕೆಂದು, ಈ ಮನೆಯವರ ರಗಳೆಯೇ ಬೇಡ ಅಂತ, ಎಂದೂ ಪುಸ್ತಕ ಮುಟ್ಟದ ನಾನು, ಅದ್ಭುತ ಎನ್ನುವ೦ತೆ ಓದಿ ಅಂಕ […]
ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಸಕಲ ಸಿದ್ಧತೆ: ಕಣ್ಮನ ಸೆಳೆಯತ್ತಿದೆ ಅಯೋದ್ಯೆ
ನವದೆಹಲಿ: ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದ್ದು, ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ರಾಮಮಂದಿರ ಸಂಪರ್ಕಿಸುವ ಅಯೋಧ್ಯೆಯ ಎಲ್ಲ ಪ್ರಮುಖ ರಸ್ತೆಗಳ ಬದಿಯ ಕಟ್ಟಡ, ಸೇತುವೆಯ ಕಂಬಗಳು ವಿವಿಧ ಬಣ್ಣಗಳಿಂದ ಸಿಂಗಾರಗೊಂಡಿದೆ. ವಾರಾಣಸಿಯಿಂದ ಕರೆಸಿಕೊಳ್ಳಲಾಗಿರುವ 21 ಪುರೋಹಿತರಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯುತ್ತಿದೆ. ಅಯೋಧ್ಯೆಯ ಎಲ್ಲ ಪ್ರಮುಖ ದೇವಾಲಯಗಳಿಗೆ ದೀಪಾಲಂಕಾರ ಮಾಡಲಾಗಿದೆ. ವಿಶೇಷ ಉಡುಪಿನ ಸಿಂಗಾರ: ರಾಮಲಲ್ಲಾನಿಗೆ ನವರತ್ನಗಳಿಂದ ವಿಶೇಷವಾಗಿ ನಾಲ್ಕು ಉಡುಪಗಳನ್ನು ತಯಾರಿಸಲಾಗಿದ್ದು, ಅವುಗಳನ್ನು ತಾತ್ಕಾಲಿಕ ರಾಮಮಂದಿರದ ಅರ್ಚಕರಿಗೆ ಹಸ್ತಾಂತರಿಸಲಾಗಿದೆ. ಸೋಮವಾರ ಬಿಳಿ, ಮಂಗಳವಾರ ಕೆಂಪು, […]
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕೊರೊನಾ ಪಾಸಿಟಿವ್: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದರಾಮಯ್ಯನವರಿಗೆ ಮೊದಲು ಜ್ವರ ಕಾಣಿಸಿಕೊಂಡಿದ್ದು, ಜ್ವರ ತೀವ್ರಗೊಂಡಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಗೆ ಒಳಪಡಿಸಲಾಗಿದ್ದು, ಆಗ ಕೊರೊನಾ ಇರುವುದು ದೃಢಪಟ್ಟಿದೆ. ಸಿದ್ದರಾಮಯ್ಯನವರು ತನಗೆ ಕೊರೊನಾ ಬಂದಿರುವ ಬಗ್ಗೆ ಸ್ವತಃ ಟ್ವೀಟ್ ಮಾಡಿ ತಿಳಿಸಿದ್ದಾರೆ. ತನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಕೊಳ್ಳುವಂತೆ ವಿನಂತಿ ಮಾಡಿದ್ದಾರೆ.