ದ.ಕ. ಜಿಲ್ಲೆ: ಇಂದು 198 ಮಂದಿಯಲ್ಲಿ ಕೊರೊನಾ ಪಾಸಿಟಿವ್: 105 ಮಂದಿ ಡಿಸ್ಚಾರ್ಜ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು 198 ಮಂದಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5506ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ, 27 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದ್ದು, 80 ಐಎಲ್ ಐ ಪ್ರಕರಣಗಳಾಗಿವೆ. 14 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದ್ದು, 73 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. 4 ಮಂದಿ ಹೊರ ದೇಶದಿಂದ ಪ್ರಯಾಣ ಮುಗಿಸಿ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗೂ ಇಂದು 105 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2800 ಮಂದಿ ವಿವಿಧ […]
ಉಡುಪಿಯಲ್ಲಿ ಇಂದು ಕೊರೊನಾಗೆ ನಾಲ್ಕು ಮಂದಿ ಬಲಿ: ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇದರ ಜತೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡ ನಿಧಾನವಾಗಿ ಏರಿಕೆಯಾಗುತ್ತಿದೆ. ಇಂದು ಜಿಲ್ಲೆಯಲ್ಲಿ ನಾಲ್ಕು ಮಂದಿ ಕೊರೊನಾದಿಂದ ಅಸುನೀಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಇಂದು 61 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 2372 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. […]
ಉಡುಪಿಯಲ್ಲಿ ಇಂದು 248 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು 248 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4143ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬ್ಯಾಂಕ್ ಎಕ್ಸಾಂ ಬರೆಯುವ ಆಸೆ ಇರುವವರು ಇಲ್ಲಿ ಗಮನಿಸಿ: ಬ್ಯಾಂಕ್ ನೇಮಕಾತಿ ಪರೀಕ್ಷೆಗೆ ಆನ್ಲೈನ್ ತರಬೇತಿ
ಉಡುಪಿ :ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ 90 ಸಾವಿರ ಅಧಿಕಾರಿ ಮತ್ತು ಗುಮಾಸ್ತ ಹುದ್ದೆಗಳಿಗೆ ನೇಮಕ ಮಾಡಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನದ ತರಬೇತಿಯನ್ನು ಆನ್ಲೈನ್ನಲ್ಲಿ ಆಯೋಜಿಸಲಾಗಿದೆ. ಆಸಕ್ತರು ಆಗಸ್ಟ್ 7ರೊಳಗೆ ಬೆಳ್ಳಿಗೆ 10 ಗಂಟೆಯಿಂದ ಸಂಜೆ 4 ವರೆಗೆ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದೀರ್ಘ ದಾರಿ ಕೊನೆಯಿಲ್ಲದ ಪಯಣ: ಸಂಗೀತಾ ಬರೆದ ಭಾವಪೂರ್ಣ ಸಾಲುಗಳು
ಪಯಣ ♦ ಸಂಗೀತಾ ಸು ಗೋಪಾಲ್ ಸುದೀರ್ಘ ದಾರಿ. ಕೊನೆಯಿಲ್ಲದ ಗುರಿಯಿಲ್ಲದ ಪಯಣ ದಾರಿ ಸವೆದಂತೆ ಮನವು ಏಕಾಂಗಿತನದ ಬೇಗುದಿಗೆ ಚೀರುತ್ತಲೇ ಇದೆ ಅಂಗಿಂದ್ದಾಗೆ ಹಾದಿಯ ಕಲ್ಲು-ಮುಳ್ಳುಗಳಿಗೆ ಜರ್ಜರಿತಗೊಂಡಿವೆ ಪಾದಗಳು ನೋವಿನ ಹಾಹಾಕಾರ ಎತ್ತಿದರೂ ಕಣ್ಣೊರೆಸುವ ಮಮತೆಯೇ ಕಾಣದು. ಬಂಜರು ಇಳೆಗೆ ಪ್ರೀತಿಯ ಸೆಲೆ ಕಾಣಲು ಅರಸುತ್ತಲೇ ಇರುವವು ನಯನಗಳು ಕಾಣದು ಎಲ್ಲಿಯೂ ಮನ ತಣಿಯುವ ಆಸರೆಯು. ಅವರಿವರ ಬಿಸಿ ಚಾಟಿಯ ಏಟಿಗೆ ನೆತ್ತರು ಸುರಿದರು ಮೌನವೇ ಉತ್ತರವಾಗಿದೆ ಕಣ್ಣೀರೇ ಒಡಲ ದಾಹ ನೀಗುವ ಅಮೃತವೂ ಆಗಿದೆ. […]