ಕುಂದಾಪುರ ಯುವ ಬಂಟರ ಸಂಘದಿಂದ ಚಿಕಿತ್ಸೆಗೆ ನೆರವು
ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಎರಡು ಕಿಡ್ನಿಗಳು ವೈಫಲ್ಯಗೊಂಡ ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿ ಸುರಕ್ಷ್ ಶೆಟ್ಟಿಯ ಚಿಕಿತ್ಸೆಗೆ ಅವರ ತಾಯಿ ವೇದಾವತಿ ಶೆಟ್ಟಿ ಅವರಿಗೆ, ಸಂಘದ ಗೌರವ ಮಹಾಪೋಷಕರಾದ ಕಂದಾವರ ಸತೀಶ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು ಸಹಾಯ ಧನದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ನಿತಿನ್ ಶೆಟ್ಟಿ ಹುಂಚನಿ, ಸದಸ್ಯರಾದ ಚೇತನ್ ಶೆಟ್ಟಿ ಕೋವಾಡಿ, ಅರ್ಜುನ್ ಶೆಟ್ಟಿ ಆವರ್ಸೆ ಉಪಸ್ಥಿತರಿದ್ದರು.
ಗೂಗಲ್ ಉದ್ಯೋಗಿಗಳಿಗೆ 2021ರ ಜೂನ್ ತಿಂಗಳವರೆಗೂ ವರ್ಕ್ ಫ್ರಂ ಹೋಮ್
ನವದೆಹಲಿ: ಜಗತ್ತಿನಲ್ಲಿ ದಿನೇ ದಿನೇ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಳವಾಗುತ್ತಿದ್ದು, ಹಲವಾರು ಐಟಿ ಉದ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸಲು ಸೂಚಿಸಿದೆ. ಅದರಂತೆ ಗೂಗಲ್ ತನ್ನ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ 2021ರ ಜೂನ್ 30ರ ವರೆಗೂ ವರ್ಕ್ ಫ್ರಂ ಹೋಮ್ ಅವಧಿಯನ್ನು ವಿಸ್ತರಿಸಿದೆ. ಉದ್ಯೋಗಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಉದ್ಯೋಗಿಗಳಿಗೆ ಮುಂದೆ ಯೋಜಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಕಚೇರಿಯಲ್ಲಿ ಅಗತ್ಯವಿರುವ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಿದ್ದು, ನಮ್ಮ […]
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ವರ್ಗಾವಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ.
ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯ ಮಾನವ ಪ್ರಯೋಗ ಆರಂಭ
ಭುವನೇಶ್ವರ: ಭಾರತದಲ್ಲಿ ಸಂಶೋಧಿಸಲ್ಪಟ್ಟ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಇದೀಗ ಮಾನವ ಪ್ರಯೋಗ ಆರಂಭವಾಗಿದೆ. ಭುವನೇಶ್ವರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಈ ಲಸಿಕೆಯ ಮಾನವ ಪ್ರಯೋಗ ನಡೆಯುತ್ತಿದೆ. ಇದು ICMR ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾಗಿದೆ. ಭುವನೇಶ್ವರ ಹೊರತುಪಡಿಸಿ ಕ್ಲಿನಿಕಲ್ ಪ್ರಯೋಗಕ್ಕೆ ಆಯ್ಕೆಯಾದ ಇತರ ಸಂಸ್ಥೆಗಳಾಗಿ ವಿಶಾಖಪಟ್ಟಣಂ, ರೋಹ್ಟಕ್, ನವದೆಹಲಿ, ಪಾಟ್ನಾ, ಬೆಳಗಾವಿ, ನಾಗ್ಪುರ, ಗೋರಖ್‌ಪುರ, ಕಟ್ಟಂಕುಲಥೂರ್, ಹೈದರಾಬಾದ್, ಆರ್ಯ ನಗರ, ಕಾನ್ಪುರ್ ಮತ್ತು ಗೋವಾ ಆಯ್ಕೆಯಾಗಿದೆ. ಕೊವಾಕ್ಸಿನ್ ಮಾನವ ಪ್ರಯೋಗದ 1 […]