ಸಾರಿಗೆ ಸಂಸ್ಥೆಗಳ ನೌಕರರ ವೇತನ ಭರಿಸಲು 961 ಕೋಟಿ ರೂ. ನೀಡಲು ಸರ್ಕಾರ ನಿರ್ಧಾರ

ಬೆಂಗಳೂರು: ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯ ವೇತನ ಭರಿಸಲು 961 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರಿಂದ ನಾಲ್ಕೂ ಸಾರಿಗೆ ಸಂಸ್ಥೆಯ ನೌಕರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜೂನ್ ಮತ್ತು ಜುಲೈ ತಿಂಗಳ ಸಂಬಳಕ್ಕಾಗಿ 426 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ನಿರ್ಧಾರದಿಂದ, ಒಟ್ಟು ನಾಲ್ಕು ತಿಂಗಳ ವೇತನ ಭರಿಸಲು ಅನುಕೂಲವಾಗಲಿದೆ.
ನೂತನ ಎಂಎಲ್ ಸಿ ಯಲ್ಲಾಪುರದ ಹಿತ್ಲಳ್ಳಿಯ ಶಾಂತಾರಾಮ ಸಿದ್ಧಿಯವರ ಮನೆಗೆ ಸಚಿವ ಕೋಟ ಭೇಟಿ, ಅಭಿನಂದನೆ ಸಲ್ಲಿಕೆ

ಯಲ್ಲಾಪುರ: ಕರ್ನಾಟಕ ವಿಧಾನ ಪರಿಷತ್ತಿನ ನೂತನ ನಾಮನಿರ್ದೇಶಿತ ಸದಸ್ಯ ಬುಡಕಟ್ಟು ಸಿದ್ದಿ ಜನಾಂಗದ ಶಾಂತರಾಮ ಸಿದ್ದಿಯವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ಮನೆಗೆ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ಇಂದು ಬೆಳಿಗ್ಗೆ 9 ಗಂಟೆಗೆ ಶಾಂತರಾಮ ಸಿದ್ದಿಯವರ ಮನೆಗೆ ಭೇಟಿ ನೀಡಿದ ಕೋಟ, ಕಾಡು-ಮೇಡು, ಗುಡ್ಡ-ಬೆಟ್ಟಗಳಲ್ಲಿ ಬದುಕಿ ಬಾಳುತ್ತಿರುವ, ಕಾಡಿನ ಮಕ್ಕಳೆಂದೆ ಪರಿಗಣಿಸಲ್ಪಡುತ್ತಿರುವ ವನವಾಸಿಗಳನ್ನು ಒಟ್ಟುಗೂಡಿಸಿ ಆ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರ […]
ಶ್ರೀ ಕೃಷ್ಣ ಮಠದಲ್ಲಿ ನಾಗರ ಪಂಚಮಿ ಸಂಭ್ರಮ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ, ಸೋದೆ ಶ್ರೀ ವಾದಿರಾಜ ಶ್ರೀಪಾದರಿಂದ ಪ್ರತಿಷ್ಠಿತ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ನಾಗರಪಂಚಮಿ ಪ್ರಯುಕ್ತ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ ಕೊರೊನಾ ಪಾಸಿಟಿವ್

ಮಧ್ಯಪ್ರದೇಶ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚೌಹಾಣ್ ಅವರು ಇಂದು ಸ್ವತಃ ಟ್ವೀಟರ್ ಮೂಲಕ ತನಗೆ ಸೋಂಕು ತಗುಲಿದೆ ಎಂದು ದೃಢಪಡಿಸಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ನಾನು ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕಿತರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಅವರು ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ. ಚೌಹಾಣ್ ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.