ನಾಗರ ಪಂಚಮಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ: ಡಿಸಿ ಜಿ. ಜಗದೀಶ್
ಉಡುಪಿ: ಜುಲೈ 25ರಂದು ನಡೆಯುವ ನಾಗರ ಪಂಚಮಿಯಂದು ನಾಗರ ಪೂಜೆ ಮಾಡಬಾರದೆಂದು ಡಿಸಿ ಹೇಳಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್19 ಭೀತಿ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಣೆ ಮಾಡಲು ಅವಕಾಶವಿಲ್ಲ. ಅದರಂತೆ ನಾಗರ ಪಂಚಮಿಯನ್ನು ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡುವಂತಿಲ್ಲ. ಹಾಗಾಗಿ ಅವರವರ ಮನೆಯಲ್ಲಿ ನಾಗಪೂಜೆ, ನಾಗರಪಂಚಮಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.
ನೆನಪಿನ ಕ್ವಾರಂಟೈನ್ ನಲ್ಲಿ ಬಂಧಿಯಾಗಿದ್ದಾಳೆ ಆ ಕಪ್ಪು ಬುರ್ಖಾ ಸುಂದರಿ
ಆವತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಫಲಿತಾಂಶವೂ ಬಂದಾಗಿತ್ತು. ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದೆ. ಮುಂದೆ ಪದವಿಗೆ ಸೇರ್ಪಡೆಯಾಗಲು ಕಾರ್ಕಳದ ಕಾಲೇಜ್ ಗೆ ಬಂದೆ. ಅಡ್ಮಿಸನ್ ಫಾರ್ಮ್ ತೆಗೆದುಕೊಳ್ಳುವಾಗ ನನ್ನನ್ನು ಸೆಳೆದಿದ್ದು ಆ ಕಣ್ಣುಗಳು. ಆ ಕಣ್ಣುಗಳನ್ನು ನೋಡಿ ಒಂದು ಕ್ಷಣ ಕಳೆದುಹೋದೆ. ಯಾರಪ್ಪ ಈ ಸುಂದರಿ ಎಂದು ನನ್ನಲ್ಲೆ ನಾನು ಕೇಳಿಕೊಂಡೆ. ಅವಳು ಬುರ್ಖಾ ತೊಟ್ಟಿದರಿಂದ ಅವಳ ಮುಖ ನೋಡಲು ಸಾಧ್ಯವಾಗಲಿಲ್ಲ. ಆದರೆ ಅವಳ ಕಣ್ಣುಗಳು ನನ್ನ ಮನಸ್ಸಿನಲ್ಲಿ ಹಚ್ಚೆ ಹಾಕಿದವು. ಮೊದಲ […]
ಉಡುಪಿಯಲ್ಲಿ ಇಂದು 160 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು 160 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2846ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್ ನಿಯಂತ್ರಣಕ್ಕೆ ನಿಯಮಗಳನ್ನು ಪಾಲಿಸಿ : ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 (ಕೊರೋನ ವೈರಾಣು ಕಾಯಿಲೆ 2019 ) ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ ಮೆಂಟ್ ವಲಯಗಳಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ಹೇರುವುದು ಮತ್ತು ಕಂಟೈನ್ ಮೆಂಟ್ ಹೊರವಲಯಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತಿ ಅವಶ್ಯಕವೆಂದು ಕಂಡುಬಂದಿದ್ದು ಅದರಂತೆ ಉಡುಪಿ ಜಿಲ್ಲೆಯಾದ್ಯಂತ ದಿನಾಂಕ 22.07.2020 ರಿಂದ ಅನ್ವಯವಾಗುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶಗಳನ್ನು ಹೊರಡಿಸಿದ್ದಾರೆ. ಕಂಟೈನ್ ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಇರುತ್ತದೆ. ವೈದ್ಯಕೀಯತುರ್ತು ಸೇವೆಗಳು ಮತ್ತು […]
ಧರ್ಮಸ್ಥಳ-ಕಾರ್ಕಳದಲ್ಲಿ ಮತ್ತೆ ರಿಂಗಣಿಸಿತು ನಿಷೇಧಿತ ಸ್ಯಾಟಲೈಟ್ ಫೋನ್ !: ರಿಂಗಣದ ಜಾಡು ಹಿಡಿದು ಹೊರಟಿದೆ ತನಿಖಾ ತಂಡ!
ಮಂಗಳೂರು: ಧರ್ಮಸ್ಥಳ-ಕಾರ್ಕಳದಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅರಣ್ಯ ಪ್ರದೇಶ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕಕಕ್ಕೆ ಬಂದಿದೆ ಎನ್ನಲಾಗಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆ ‘ರಾ’ ಗಮನಕ್ಕೆ ಬಂದಿದ್ದು. ಇದೀಗ ತನಿಖೆ ಆರಂಭಗೊಂಡಿದ್ದು ಆಂತರಿಕ ಭದ್ರತಾ ದಳ ಹಾಗೂ ಗುಪ್ತಚರ ದಳ ತನಿಖೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ. ಅಂದ ಹಾಗೆ ಕಳೆದ ವರ್ಷವೂ ಬೆಳ್ತಂಗಡಿಯ ಗೋವಿಂದೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಸ್ಯಾಟಲೈಟ್ […]