ದ.ಕ. ಜಿಲ್ಲೆ: ಇಂದು 89 ಮಂದಿಗೆ ಕೊರೋನಾ ಪಾಸಿಟಿವ್: ಎರಡಂಕಿಗೆ ಇಳಿದ ಪಾಸಿಟಿವ್ ಸಂಖ್ಯೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು 89 ಮಂದಿಗೆ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಕಳೆದ ಒಂದು ವಾರದ ಬಳಿಕ ಇಂದು ಜಿಲ್ಲೆಯಲ್ಲಿ ಕೊಂಚ ಇಳಿಮುಖ ಕಂಡಿದೆ. ಇಂದು ಪಾಸಿಟಿವ್ ಕಂಡುಬಂದ ಪೈಕಿ ILI – 45 ಮಂದಿಗೆ, SARI ಪ್ರಕರಣದಿಂದ 16, ಸಂಪರ್ಕವೇ ಪತ್ತೆಯಾಗದ 15 ಮಂದಿಗೆ ಕೊರೋನಾ ಪಾಸಿಟಿವ್ ಹಾಗೂ ಪ್ರಾಥಮಿಕ ಸಂಪರ್ಕದಿಂದ 11 ಮಂದಿ, ವಿದೇಶದಿಂದ ಬಂದ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬಾರ್ಕೂರು: ಇಬ್ಬರು ಮಕ್ಕಳು ಸಹಿತ ಒಂದೇ ಮನೆಯ ಐವರಿಗೆ ಕೊರೊನಾ ಸೋಂಕು ದೃಢ
ಬ್ರಹ್ಮಾವರ: ಬಾರ್ಕೂರಿನ ಒಂದೇ ಮನೆಯ ಇಬ್ಬರು ಮಕ್ಕಳು ಸಹಿತ ಐದು ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕೋಡಿಬೆಂಗ್ರೆಯ ಕ್ಯಾನ್ಸರ್ ಪೀಡಿತ ವೃದ್ಧೆಯೊಬ್ಬರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ವೇಳೆ ವೃದ್ಧೆಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ವೃದ್ಧೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ನೇರವಾಗಿ ಬಾರಕೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಗೆ ಬಂದ ಬಳಿಕ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿದೆ. ಇದೀಗ ಮನೆಯಲ್ಲಿರುವ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು […]
ತೇಲುವ ದೋಣಿಗೆ ಅಂಬಿಗನ್ಯಾರು: ಅಶೋಕ್ ಆಚಾರ್ ಕ್ಲಿಕ್ಕಿಸಿದ ಚಿತ್ರ
♦ ಮುಗಿಲ ಕಾಮನಬಿಲ್ಲಿಗೆ ನದಿಗೆ ಬೀಳೋ ಯೋಚನೆಯಾ ಎಂದೆನ್ನಿಸುತ್ತದೆ ಈ ಚಿತ್ರ ನೋಡಿದರೆ. ಈ ಸುಂದರ ಚಿತ್ರ ಕ್ಲಿಕ್ಕಿಸಿದವರು ಕೋಟದ ಹವ್ಯಾಸಿ ಛಾಯಾಗ್ರಾಹಕರಾದ ಅಶೋಕ್ ಆಚಾರ್. ಗ್ರಾಫಿಕ್ಸ್ ಶಾಪ್ ನಲ್ಲಿ ವೃತ್ತಿಮಾಡುತ್ತಿರುವ ಇವರ ಈ ಚಿತ್ರ ಪರಿಸರದ ಸೊಗಸನ್ನು ಸಾರಿ ಹೇಳುವಂತಿದೆ. ಅಶೋಕ್ ಆಚಾರ್ ಅವರ ಸಂಪರ್ಕ: 9844211837 ( ZOOM ಇನ್ ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ […]
ಉಡುಪಿಯಲ್ಲಿ ಇಂದು 99 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು 99 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2321ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಾಸ್ತಾನದಲ್ಲಿ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕೋಟ: ಸಾಹಿತ್ಯ ಸಮ್ಮೇಳನದ ಸಂದರ್ಭ ಕುಂದಾಪ್ರ ಕನ್ನಡ ರೀತಿಯ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿದಾಗ ಭಾಷೆ ಉಳಿಯುವುದಕ್ಕೆ ಸಾಧ್ಯ ಎಂದು ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಸಾಸ್ತಾನದ ದಿ.ರಾಮಚಂದ್ರ ತುಂಗರ ಮನೆಯಲ್ಲಿ ಜು. ೨೦ರಂದು ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಜರಗಿದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಕ್ಯಾನಿಗಿಂಡಿ ಹಿಟ್ಟನ್ನು ಅಕ್ಕಿಮುಡಿಯ ಮೇಲೆ ಇಟ್ಟು ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದಲ್ಲಿ ಸಾಂಪ್ರಾದಾಯಿಕವಾಗಿ ಆಸಾಡಿ ಹಬ್ಬವನ್ನು ಆಚರಿಸುವ ಮೂಲಕ ಈ […]