ಆಸ್ಟ್ರೊ ಮೋಹನ್ ಅವರಿಗೆ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಫೋಟೋಗ್ರಾಫರ್ಸ್ ಅಲಿಯನ್ಸ್ ಸಂಸ್ಥೆಯಿಂದ ಗೌರವ ಫೆಲೋಶಿಪ್
ಉಡುಪಿ: ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಫೋಟೋಗ್ರಾಫರ್ಸ್ ಅಲಿಯನ್ಸ್ ಸಂಸ್ಥೆ 2020 ಸಾಲಿನ ಗೌರವ ಫೆಲೋಶಿಪ್ಪಟ್ಟಿಯನ್ನು ಪ್ರಕಟಿಸಿದ್ದು ಅದರಲ್ಲಿ ಉಡುಪಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ ಗೌರವಫೆಲೋಶಿಪ್ ನೀಡಿ ಗೌರವಿಸಿದೆ. ಎರೆಡು ವರ್ಷಗಳ ಹಿಂದೆ ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿ ಇಂದ ಮಾಸ್ಟರ್ ಪದವಿ ಪಡೆದಿದ್ದ ಆಸ್ಟ್ರೊ ಮೋಹನ್ ಅವರಿಗೆ ಈ ಗೌರವ ಸಲ್ಲಿದೆ. ಆಸ್ಟ್ರೊ ಮೋಹನ್ ಅವರು ತಮ್ಮ ಛಾಯಾಚಿತ್ರ ಪತ್ರಿಕೋದ್ಯಮದ ರಜತ ಸಂಭ್ರಮವನ್ನು ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿಚಿತ್ರ […]
ಸುಣ್ಣಾರಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜ್: ಸಾಯಿ ಪುಷ್ಪಾಂಜಲಿಗೆ ರಾಜ್ಯದಲ್ಲಿ 9ನೇ ರ್ಯಾಂಕ್
ಕುಂದಾಪುರ: ತಾಲೂಕಿನ ಕೋಟೆಶ್ವರ ಸಮೀಪದ ಸುಣ್ಣಾರಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದ ಸಾಯಿ ಪುಷ್ಪಾಂಜಲಿ ಶೆಟ್ಟಿ ಅವರು 588 ಅಂಕಗಳಿಸಿ ರಾಜ್ಯದಲ್ಲಿ 9ನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ದ.ಕ.ಜಿಲ್ಲೆ: ಕೊರೊನಾ ಸೋಂಕಿತ ಒಟ್ಟು 1,491 ಮಂದಿ ಡಿಸ್ಚಾರ್ಚ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಒಟ್ಟು 1,491 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಇಂದು ಕೂಡ 104 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 2,028 ಆಕ್ವೀವ್ ಕೇಸ್ ಗಳಿವೆ.ಜಿಲ್ಲೆಯಲ್ಲಿ ಕೊರೋನಾಗೆ ಇಂದು ಇಬ್ಬರು ಬಲಿಯಾಗಿದ್ದು, ಬರೋಬ್ಬರಿ 285 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 77 ವರ್ಷದ ಮಹಿಳೆ ಹಾಗೂ 53 ವರ್ಷದ ಗಂಡಸು ಕೊರೋನಾಗೆ ಬಲಿಯಾಗಿದ್ದಾರೆ.
ಉಡುಪಿಯಲ್ಲಿ ಇಂದು 134 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಇಂದು ಒಂದೇ ದಿನ 134 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2222ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ವಿಡಿಯೋ ಸಮಾಲೋಚನೆ ಸೇವಾ ಸೌಲಭ್ಯ
ಮಣಿಪಾಲ: ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ಜುಲೈ 20ರ ಸೋಮವಾರದಿಂದ ಜಾರಿಗೆ ಬರುವಂತೆ ರೋಗಿಗಳ ಅನುಕೂಲಕ್ಕಾಗಿ ವಿಡಿಯೋ ಸಮಾಲೋಚನೆ ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ಕೊರೊನಾ ವೈರಸ್ (ಕೋವಿಡ್ – 19) ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ ನಮ್ಮ ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಈ ಸಂಗತಿಯನ್ನು ಅರಿತುಕೊಂಡು, ನಮ್ಮ ರೋಗಿಗಳಿಗೆ ಸಮಾಲೋಚನೆ ಮತ್ತು ಮರು ಸಮಾಲೋಚನೆ ಸೇವೆಯನ್ನು ನೀಡಲು ವಿಡಿಯೋ […]