ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದಿಂದ ಎನರ್ಜಿ ಡ್ರಿಂಕ್ಸ್ ವಿತರಣೆ
ಉಡುಪಿ ಜುಲೈ 16: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕವು ಕಳೆದ ಲಾಕ್ ಡೌನ್ ಸಮಯದಲ್ಲಿ 20ನೇ ಮಾರ್ಚ್ ತಿಂಗಳಿAದ ಇಂದಿನವರೆಗೆ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ 7 ತಾಲೂಕುಗಳ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ 30000 ಕ್ಕೂ ಮಿಕ್ಕಿ ಮಾಸ್ಕ್, ಡೆಟಲ್ ಸೋಪ್, ಸ್ಯಾನಿಟೈಸರ್‌ಗಳನ್ನು ವಲಸೆ ಕಾರ್ಮಿಕರಿಗೆ ನೀಡಲಾಗಿರುತ್ತದೆ. ಮಾತ್ರವಲ್ಲದೆ 2 ಕಿಯೋಸ್ಕ್ ಮೆಶಿನ್‌ಗಳನ್ನು, ಪಿಪಿ.ಇ. ಕಿಟ್ ಮತ್ತು ಗ್ಲಾವ್ಸ್ಗಳನ್ನು ಶಿರ್ವ ಮತ್ತು ಬ್ರಹ್ಮಾವರÀ ಸಮುದಾಯ ಕೇಂದ್ರಗಳಿಗೆ ಹಸ್ತಾಂತರಿಸಿದೆ. ಬುಧವಾರ 600 ಎನರ್ಜಿ ಡ್ರಿಂಕ್ಸ್ […]
ದ.ಕ. ಜಿಲ್ಲೆ: ಇಂದು 6 ಮಂದಿ ಕೊರೋನಾಗೆ ಬಲಿ: 238 ಹೊಸ ಪ್ರಕರಣ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೊರೊನಾಗೆ ಗುರುವಾರ (ಜು.16)ನಾಲ್ಕು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. 44, 62, 66 ಹಾಗೂ 68 ವರ್ಷದ ನಾಲ್ವರು ಪುರುಷರು ಬಲಿಯಾದರೆ, 47 ಹಾಗೂ 76 ವರ್ಷದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ. 238 ಹೊಸ ಪ್ರಕರಣ: ಜಿಲ್ಲೆಯಲ್ಲಿ ಇಂದು ದಾಖಲೆಯ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಇಂದು ಒಂದೇ ದಿನ ಬರೋಬ್ಬರಿ 238 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು […]
ಉಡುಪಿಯಲ್ಲಿ ಒಂದೇ ದಿನ ನೂರರ ಗಡಿದಾಟಿದ ಕೊರೊನಾ ಸೋಂಕು: ಇಂದು 109 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಇಂದು ಒಂದೇ ದಿನ 109 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಎಲ್.ಸಿ.ಆರ್. ಇಂಡಿಯನ್ ಪಿ.ಯು.ಕಾಲೇಜಿಗೆ ಶೇ. 91 ಫಲಿತಾಂಶ
ಕಕ್ಯಪದವು: ಕ್ರೀಡಾ ಹಾಗೂ ಸಾಂಸ್ಕೃತಿಕವಾಗಿ ಸಾಧನೆಗೈದು ಮುಂಚೂಣಿಯಾಗಿ ಗುರುತಿಸಿಕೊಂಡಿರುವ ಎಲ್.ಸಿ.ಆರ್. ಇಂಡಿಯನ್ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ತೋರಿದ್ದು, ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 91.00 ಫಲಿತಾಂಶ ದಾಖಲಿಸಿದೆ. 2 ವಿದ್ಯಾರ್ಥಿಗಳು ವಿಶಿಷ್ಟ ಶೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು, ಅನುಕ್ರಮವಾಗಿ ಶಹಿನಾಜ್ (535), ಧನುಷ್(513), ಹೇಮರಾಜ್ (505) ಪ್ರಥಮ, ದ್ವಿತೀಯಾ, ತೃತೀಯಾ ಸ್ಥಾನವನ್ನು ಪಡೆದಿರುತ್ತಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಉಡುಪಿ: ಕೊರೊನಾ ಸೋಂಕಿಗೆ ಮರವಂತೆಯ 58 ವರ್ಷದ ವ್ಯಕ್ತಿ ಸಾವು
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಕೊರೊನಾದಿಂದ ಮರಣ ಹೊಂದುತ್ತಿರುವವರ ಸಂಖ್ಯೆಯೂ ನಿಧನವಾಗಿ ಏರಿಕೆ ಆಗಲು ಆರಂಭಿಸಿದೆ. ಕುಂದಾಪುರದಲ್ಲಿ ನಿನ್ನೆ ರಾತ್ರಿ ಮರವಂತೆಯ 58 ವರ್ಷದ ವ್ಯಕ್ತಿಯೊಬ್ಬರು ಕೊರೊನಾದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಇವರು ತೀವ್ರತರದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರನ್ನು ಕೊರೊನಾ ಪರೀಕ್ಷೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಆದರೆ ಇವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ವ್ಯಕ್ತಿಯೊಬ್ಬರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆ […]