ಎಲ್ಲರಿಗೂ ಬ್ಯಾಟಿಂಗೇ ಬೇಕು ಗುರು, ಬೌಲಿಂಗ್ ಯಾರಿಗೆ ಬೇಕು? :ಈ ಬರಹ ಓದಿದ್ರೆ ನೀವಾಡಿದ ಗಲ್ಲಿ ಕ್ರಿಕೆಟ್ ಗ್ಯಾರಂಟಿ ನೆನಪಾಗತ್ತೆ
♥ ನಿಧಿ ಎನ್. ಪೈ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ ಬಂದಾಗ ನನಗೆ ನಮ್ಮ ಗಲ್ಲಿ ಕ್ರಿಕೆಟ್ ಜ್ಞಾಪಕಕ್ಕೆ ಬಂತು. ನಾವು ಆಡುತ್ತಿದ್ದದ್ದು ಸುಮಾರು 2009ರ ಸಮಯದಲ್ಲಿ. ಆಗಷ್ಟೇ ಐಪಿಎಲ್ ಆವೃತ್ತಿ ಪ್ರಾರಂಭವಾಗಿತ್ತು. ಅವಾಗ ನನಗೆ ಒಂಬತ್ತು ವರ್ಷ. ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ ನನ್ನ ಅಣ್ಣಂದಿರಿಗೆ ಕ್ರಿಕೆಟ್ ಬಿಟ್ಟು ಬೇರೆನೂ ಗೊತ್ತಿರಲಿಲ್ಲ. ಅವಾಗ PUB G ಎಲ್ಲ ಇರ್ಲಿಲ್ಲ ನೋಡಿ, ಹಾಗಾಗಿ ಹೊರಗೆ ಆಡುವುದೇ ಹೆಚ್ಚಾಗಿತ್ತು. ಎಲ್ಲಾ ಹುಡುಗಿಯರ ಹಾಗೆ ನಾನು ಕೂಡ ಅಡುಗೆ ಆಟ, […]
ಉಡುಪಿ ಜಿಲ್ಲಾಸ್ಪತ್ರೆಯ ಡಾಕ್ಟರ್, ಸಿಬಂದಿಗೂ ಬಂತು ಕೊರೋನಾ ಸೋಂಕು:10 ಮಂದಿಗೆ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಮುಂದುವರಿದಿದ್ದು, ಇದೀಗ ಅಜ್ಜರಕಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ಸೋಂಕು ಕಾಲಿಟ್ಟಿದೆ. ಇಲ್ಲಿನ ವೈದ್ಯರು, ಸಿಬ್ಬಂದಿ ಸಹಿತ ಹತ್ತು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಹೆಬ್ರಿ ಎಸ್.ಆರ್.ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಶೇ.100 ಫಲಿತಾಂಶ
ಉಡುಪಿ: ಹೆಬ್ರಿ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಹೆಬ್ರಿಯ ಎಸ್.ಆರ್. ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಈ ವಿಭಾಗದ 66 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಸೀಮಿತ ಎಂ. ಶೆಟ್ಟಿ(582) ಪ್ರಥಮ, ಆದಿತ್ಯ ಆರ್.(581) ದ್ವಿತೀಯ, ಶಿವಪ್ರಸಾದ್ ಹೆಬ್ರಿ(580) ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದ ಲಮೀನಾ ಖೆಮಾನಿ(585) ಪ್ರಥಮ, ಪೂರ್ಣಿಮಾ(572) ದ್ವಿತೀಯ, ಪೂಜಾ, ಪರೀಕ್ಷಾ, ಶ್ರೇಯ ಶೆಟ್ಟಿ ಅನುಕ್ರಮವಾಗಿ 569 ಅಂಕಗಳಿಸಿ ತೃತಿಯ ಸ್ಥಾನಗಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ […]
ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯರಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗ ಪಡೆದುಕೊಂಡಿದ್ದು, ಇದರಿಂದ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಇದೀಗ ಉಡುಪಿ ನಗರಸಭೆಯ ಇಬ್ಬರು ಮಹಿಳಾ ಸದಸ್ಯಯರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಮಂಗಳವಾರ ನಗರಸಭೆಯ ಅಧಿಕಾರಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲಾಗಿದೆ. ಇದೀಗ ಇಬ್ಬರು ಮಹಿಳಾ ಸದಸ್ಯಯರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇಬ್ಬರು ಸದಸ್ಯೆಯರ ಪೈಕಿ ಓರ್ವ ಸದಸ್ಯೆ ಅನಾರೋಗ್ಯದ ಕಾರಣದಿಂದ […]
ಶುರುವಾಯ್ತು ಕೋವಿಡ್ ಲಸಿಕೆಯ ಮಾನವ ಪ್ರಯೋಗ
ನವದೆಹಲಿ: ದೇಶದಲ್ಲಿ ಕೊರೊನಾ ದಿನೇ ದಿನೇ ಹರಡುತ್ತಿರುವ ಹಿನ್ನೆಲೆ, ದೇಶದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಲಸಿಕೆ ಮಾನವನ ಮೇಲೆ ಪ್ರಯೋಗ ಆರಂಭಿಸಿದೆ. ಸುಮಾರು 1,000 ಜನ ಸ್ವ-ಇಚ್ಚೆಯಿಂದ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಜಗತ್ತಿನಲ್ಲೇ ಭಾರತ ಅತಿಹೆಚ್ಚು ಲಸಿಕೆ ತಯಾರಿಸುತ್ತಿದ್ದು, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯು ನಡೆಸಬೇಕಾಗಿರುವುದು ದೇಶದ ಜವಾಬ್ದಾರಿಯೂ ಆಗಿದೆ ಎಂದು ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ. ಒಂದನೇ ಲಸಿಕೆ […]