ಉಡುಪಿಯಲ್ಲಿ ಇಂದು 72 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು ಕೂಡ 72 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1733ಕ್ಕೆ ಏರಿಕೆಯಾಗಿದೆ. ಉಡುಪಿ ತಾಲ್ಲೂಕಿನ 16, ಕುಂದಾಪುರದ 41 ಮತ್ತು ಕಾರ್ಕಳದ 15 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 72 ಮಂದಿ ಸೋಂಕಿತರ ಪೈಕಿ 51 ಪುರುಷರು, 19 ಮಹಿಳೆಯರು ಮತ್ತು ಎರಡು ಮಕ್ಕಳು ಇದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು 80 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1360 […]
ಭಂಡಾರ್ ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇ.94.37 ಫಲಿತಾಂಶ

ಕುಂದಾಪುರ: ಇಲ್ಲಿನ ಭಂಡಾರ್ ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ೯೪ 94.37 ಫಲಿತಾಂಶವನ್ನು ಪಡೆದಿದೆ. 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 82 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕೀರ್ತಿ ಕೆ. (574), ದ್ವಿತೀಯಸ್ಥಾನ ಕೇಶವ ಪೂಜಾರಿ .ಆರ್ (568) ತೃತೀಯ ಸ್ಥಾನ – ಸಾಗರಿಕಾಎನ್, (559), ಮತ್ತು ಸೃಜನ್ಆರ್. ಕುಲಾಲ್ (559) ಅಂಕಗಳನ್ನು ಪಡೆದು ತೇರ್ಗಡೆಯಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೇಯಾ ಭಟ್(588), ದ್ವಿತೀಯ ಸ್ಥಾನ-ಕೆ.ಕಿರಣ್ಕಾಮತ್ ತೃತೀಯ ಸ್ಥಾನ – ಪಲ್ಲವಿ, (572), ಅಂಕಗಳನ್ನು […]
ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ

ಉಡುಪಿ: ಇಲ್ಲಿನ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಡುಪಿಯ ಅಭಿಜ್ಞಾ ರಾವ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 (ಶೇ. 99.33) ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಅವರು ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಸಂಸ್ಕೃತ, ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ 100 ಮತ್ತು ಇಂಗ್ಲಿಷ್ ನಲ್ಲಿ 96 ಅಂಕ ಗಳಿಸಿದ್ದಾರೆ. ಅಭಿಜ್ಞಾ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲೂ ಶೇ.99.8 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.
ಅಲೆವೂರು ಶ್ರೀ ಬ್ರಹ್ಮಲಿಂಗೇಶ್ವರ ಸ್ಟೋರ್ಸ್ನ ಮಾಲೀಕ ಅನಂತರಾಮ ಜಿ. ಪ್ರಭು ನಿಧನ

ಉಡುಪಿ: ಅಲೆವೂರು ಗುಡ್ಡೆಯಂಗಡಿಯ ಶ್ರೀ ಬ್ರಹ್ಮಲಿಂಗೇಶ್ವರ ಸ್ಟೋರ್ಸ್ನ ಮಾಲೀಕ ಅನಂತರಾಮ ಜಿ. ಪ್ರಭು (82) ಅವರು ಜು. 14ರ ಮಂಗಳವಾರ ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ (ಸದಾಶಿವ ಪ್ರಭು), ಇಬ್ಬರು ಪುತ್ರಿಯರು ಅಗಲಿದ್ದಾರೆ.
ಉಡುಪಿ ನಗರ ಸಭೆ ಕಛೇರಿ ಸಿಲ್ ಡೌನ್

ಉಡುಪಿ: ಉಡುಪಿ ನಗರ ಸಭೆಯ ಕಛೇರಿಗೆ ಕೊರೊನಾ ವಕ್ಕರಿಸಿದ್ದು, ನಗರಸಭೆ ಕಛೇರಿಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಸದ್ಯ ಕಛೇರಿಯನ್ನು ಸಾನಿಟೈಸ್ ಮಾಡಲಾಗುತ್ತಿದ್ದು, ತಾತ್ಕಾಲಿಕವಾಗಿ ಕಛೇರಿಯನ್ನು ಮುಚ್ಚಲಾಗಿದೆ.