ಏನ್ ಗೊತ್ತಾ, ತಿಳಿದಷ್ಟು ಸುಲಭ ಅಲ್ಲ ಸಾಗೋ ಈ ದಾರಿ, ಅಗಲೋ ಮುನ್ನ ಖುಷಿಯಿಂದ ಅನುಭವಿಸಿ ಒಂದ್ಸಾರಿ !

♥ ಐಶ್ವರ್ಯ .ಆರ್. ನಾಯ್ಕ್ ಸಂತೋಷದಿಂದ   ಮೂರು  ಹೊತ್ತು ಊಟ, ಕಣ್ಣು ತುಂಬ ನಿದ್ದೆ, ಆಟ ಪಾಠ ಅಂತ ಪಾಲಕರ ಕಣ್ ರೆಪ್ಪೆಯೊಳಗೆ ಜೋಪಾನವಾಗಿ ಇರೋ ನಮಗೆ, ನಿಜವಾದ ಜೀವನದ ಕಸರತ್ತು ಒಂದು ರೀತಿಲಿ ಅರಿವಾಗೋದು ಅವರಿಂದ ದೂರ ಆದಾಗ ಮಾತ್ರ. ಕೆಲವರಿಗೆ ಈ ಅನುಭವ ಹೊಸತೇನಲ್ಲ. ಆದರೂ ನನ್ನ ಕೆಲವು ಸೆಣಸಾಟಗಳನ್ನು ನಿಮ್ಮ ಮುಂದೆ ಇಡುತ್ತೇನೆ ಕೇಳಿ ಈಗಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗೋದು ಅನಿವಾರ್ಯ ಆಗೋಗಿದೆ. ಇನ್ನು ನಾನ್ ಇಷ್ಟ ಪಟ್ಟಿರುವುದನ್ನು ಓದಬೇಕು […]

ಕಾಪು ಠಾಣೆಯ ಎಎಸ್ಐಗೆ ಕೊರೊನಾ ಪಾಸಿಟಿವ್: ಠಾಣೆ ತಾತ್ಕಾಲಿಕವಾಗಿ ಸಮೀಪದ ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ

ಕಾಪು: ಕಾಪು ಪೊಲೀಸ್ ಠಾಣೆಯ ಎಎಸ್ಐಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.‌ ಠಾಣೆಯನ್ನು ಮುಂದಿನ ಗಂಟೆಗಳ ಕಾಲ ತಾತ್ಕಾಲಿಕವಾಗಿ ಸಮೀಪದ ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇವರು ಪ್ರತಿದಿನ ಕೋಟದಿಂದ ಠಾಣೆಗೆ ಬಸ್ ನಲ್ಲಿ ಸಂಚರಿಸುತ್ತಿದ್ದರು. ಇವರಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಉಡುಪಿಯಲ್ಲಿ ಇಂದು 90 ಮಂದಿಗೆ ಕೊರೊನಾ ಸೋಂಕು ದೃಢ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಮುಂದುವರಿದಿದ್ದು, ಇಂದು ಮತ್ತೆ ಜಿಲ್ಲೆಯಲ್ಲಿ 90 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1567ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಚೈನಾ ಮೊಬೈಲ್ ಕಂಪೆನಿ ಸಹವಾಸ ಬೇಡ ಎನ್ನುವವರಿಗೆ ಇಲ್ಲಿದೆ ಹತ್ತು ಆಯ್ಕೆಗಳು: ಹೊಸ ಮೊಬೈಲ್ ಕೊಳ್ಳುವವರು ಗಮನಿಸಿ

ಹೊಸ ಮೊಬೈಲ್ ತಗೊಳ್ಬೇಕು ಆದ್ರೆ ಯಾವ ಕಂಪೆನಿದ್ದು ತಗೊಳ್ಳಲಿ? ಕಡಿಮೆ ಬೆಲೆಯಲ್ಲಿ ಒಳ್ಳೆ ಮೊಬೈಲ್ ಬೇಕು. ಆದ್ರೆ ಚೈನಾ ಕಂಪೆನಿಗಳ ಸಹವಾಸ ಬೇಡ ಮಾರಾರ್ರೆ ಎನ್ನುತ್ತೀರಾ? ಹಾಗಾಧ್ರೆ ಇಲ್ಲಿ ಕೇಳಿ. ಮಾರುಕಟ್ಟೆಯಲ್ಲಿ ಈಗ ಪ್ರಾಬಲ್ಯ ಮೆರೆಯುತ್ತಿರುವ ಕಂಪೆನಿಗಳ ಪೈಕಿ ಬಹುತೇಕ ಮೊಬೈಲ್ ಗಳು ಚೈನಾ ಕಂಪೆನಿಗಳದ್ದೇ ಆಗಿದೆ. ಮೊಬೈಲ್ ಗೆ ಬಳಸುವ ಬ್ಯಾಟರಿ, ಬಟನ್ ,ಚಾರ್ಜರ್ ಮೊದಲಾದ ಎಲ್ಲಾ ವಸ್ತುಗಳು ಚೈನಾದ್ದೇ ಆಗಿದೆ. ಹಾಗಾಗಿ ಇವುಗಳಿಗೆ ಪರ್ಯಾಯ ಭಾರತದಲ್ಲಿ ನಿರ್ಮಾಣವಾಗುವವರೆಗೂ ಕೆಲವೊಂದು ಬಿಡಿಭಾಗಗಳಿಗೆ ಚೈನಾದ ಮೇಲೆ ಅವಲಂಬಿತರಾಗುವುದು […]

ಕರ್ನಾಟಕದಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಚಿಂತನೆ: ಸಚಿವ ಪ್ರಭು ಚೌಹಾನ್

ಬೆಂಗಳೂರು: ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾನ್ ತಿಳಿಸಿದ್ದಾರೆ. ಗೋ ಸಂರಕ್ಷಣೆಗಾಗಿ ರಾಜ್ಯದಲ್ಲಿ ಗೋ ಹತ್ಯೆ ಮತ್ತು ರಕ್ಷಣಾ ಮಸೂದೆ 2012 ಜಾರಿಗೆ ತರುವುದು ಅನಿವಾರ್ಯವಾಗಿದೆ. ಈ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಗೋಮಾಂಸ ಮಾರಾಟ ಮತ್ತು ಸೇವನೆಯೊಂದಿಗೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಅನೇಕ ರಾಜ್ಯಗಳು ಗೋಹತ್ಯೆ ವಿರೋಧಿ ಮಸೂದೆಯನ್ನು ಅಂಗೀಕರಿಸಿದೆ. ನಾವು ಅದನ್ನು ಕರ್ನಾಟಕದಲ್ಲೂ ಜಾರಿಗೆ ತರಲು […]