ಲಕ್ಷ್ಮೀನಗರದ ಯೋಗೀಶ್ ಪೂಜಾರಿ ಕೊಲೆ ಪ್ರಕರಣ: ರೌಡಿ ಶೀಟರ್ ಸುಜಿತ್ ಪಿಂಟೋ ಸಹಿತ ನಾಲ್ವರು ಆರೋಪಿಗಳ ಬಂಧನ
ಮಲ್ಪೆ: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದ ಯೋಗೀಶ್ ಪೂಜಾರಿ(26) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್ ಸುಜಿತ್ ಪಿಂಟೋ(37), ಆತನ ಅಣ್ಣ ರೋಹಿತ್ ಪಿಂಟೋ(43), ಪ್ರದೀಪ್ ಯಾನೆ ಅಣ್ಣು(40), ವಿನಯ(36) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಾದ ಗಿರೀಶ್ ಹಾಗೂ ಅನುಪ್ ಎಂಬುವವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಜು.6ರಂದು ರಾತ್ರಿ ದುಷ್ಕರ್ಮಿಗಳು ಯೋಗೀಶ್ ಪೂಜಾರಿಯ ಹೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಚೂರಿಯಿಂದ ಬಲವಾಗಿ ತಿವಿದು ಕೊಲೆ ಮಾಡಿ […]
ಖಿನ್ನತೆಗೆ ಒಳಗಾಗಿದ್ದ ಉದಯೋನ್ಮುಖ ನಟ ಸುಶೀಲ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಂಡ್ಯ: ಉದಯೋನ್ಮುಖ ನಟ ಸುಶೀಲ್ ಕುಮಾರ್ ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಶೀಲ್ ಕುಮಾರ್ ಅವರು ‘ಕಮರೊಟ್ಟು ಚೆಕ್ ಪೋಸ್ಟ್’, ‘ಸಲಗ’ ಚಿತ್ರಗಳು ಸೇರಿದಂತೆ ಹಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸುಶೀಲ್, ಮಂಡ್ಯದಲ್ಲಿ ಜಿಮ್ ತರಬೇತುದಾರ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಕೆಲಸ ವಿಲ್ಲದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚೀನಾ ಆಪ್ ಗಳ ನಿಷೇಧದ ಬಳಿಕ ದೇಶಿಯ ಆಪ್ ಗಳಿಗೆ ಬಹುಬೇಡಿಕೆ: 25 ಮಿಲಿಯನ್ ಡೌನ್ ಲೋಡ್ಸ್ ಪಡೆದ ದೇಸಿ ಮಿತ್ರೋನ್ ಆಪ್
ನವದೆಹಲಿ: ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾದ ಆಪ್ ಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇದೀಗ ದೇಸಿ ಆಪ್ ಗಳಿಗೆ ಬಹುಬೇಡಿಕೆ ಬಂದಿದೆ. ಅದರಂತೆ ಮಿತ್ರೋನ್ ದೇಶಿಯ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ನಿಂದ 25 ಮಿಲಿಯನ್ಗಿಂತಲೂ ಹೆಚ್ಚು ಡೌನ್ಲೋಡ್ಗಳನ್ನು ಸಾಧಿಸಿದೆ ಎಂದು ವಿಡಿಯೋ ಅಪ್ಲಿಕೇಶನ್ ಮಿತ್ರೋನ್ ಮಂಗಳವಾರ ತಿಳಿಸಿದೆ. ಚೀನಾ ಆಪ್ ಗಳಿಗೆ ಪರ್ಯಾಯವಾಗಿ ಚಿಂಗಾರಿ, ರೊಪೊಸೊ ಮತ್ತು ಮಿಟ್ರಾನ್ ಮೊದಲಾದ ದೇಶಿ ಅಪ್ಲಿಕೇಶನ್ ಬಹುಬೇಡಿಕೆಯ ಆಪ್ ಗಳಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಭಾರತವು ಕಳೆದ ತಿಂಗಳ […]
ಎಸ್.ಎಸ್.ಎಲ್.ಸಿ ಪರೀಕ್ಷೆ ಮೌಲ್ಯಮಾಪನ, ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ ಜುಲೈ 7: ಜುಲೈ 2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯ ಮಾಪನ ಕಾರ್ಯವು, ಜುಲೈ 9 ರಿಂದ ಪ್ರಾರಂಭವಾಗಿ ಸುಮಾರು 10 ದಿನಗಳವರೆಗೆ ನಡೆಯಲಿದೆ. ಮೌಲ್ಯ ಮಾಪನ ಮುಗಿದು ಪ್ರಶ್ನೋತ್ತರ ಪತ್ರಿಕೆಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಲ್ಲೇಶ್ವರಂ ಬೆಂಗಳೂರು ಇಲ್ಲಿಗೆ ಸಾಗಿಸುವವರೆಗೆ, ಜಿಲ್ಲೆಯ ಸಂಬಂಧಿಸಿದ ಮೌಲ್ಯ ಮಾಪನ ಕೇಂದ್ರಗಳಾದ, ಯು.ಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿ, ಉಡುಪಿ, ಆದಿ ಉಡುಪಿ ಪ್ರೌಢಶಾಲೆ- ಆದಿ ಉಡುಪಿ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು- ಉಡುಪಿ, ಸರ್ಕಾರಿ ಪ್ರೌಢಶಾಲೆ […]
ಸದ್ಯಕ್ಕೆ ಜಿಮ್, ಈಜುಕೊಳ ತೆರೆಯುವ ವಿಚಾರ ಇಲ್ಲ: ಸಚಿವ ಸಿ.ಟಿ. ರವಿ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹರಡುವಿಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಿಮ್ ಮತ್ತು ಈಜುಕೊಳ ಸದ್ಯಕ್ಕೆ ತೆರೆಯುವ ವಿಚಾರ ಇಲ್ಲ ಎಂದು ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿಯ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಜಿಮ್ ಹಾಗೂ ಈಜುಕೊಳ ತೆರೆಯುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.