ಬಂಟ್ವಾಳದಲ್ಲಿ ಸಿಕ್ತು ಬಿಳಿ ಬಣ್ಣದ ಅಪರೂಪದ ಹೆಬ್ಬಾವು: ಸುರಕ್ಷಿತವಾಗಿ ಹಿಡಿದು ಪಿಲಿಕುಳಕ್ಕೆ ಬಿಟ್ರು ಸ್ನೇಕ್ ಕಿರಣ್
ಮಂಗಳೂರು: ಬಿಳಿ ಬಣ್ಣದ ಅಪರೂಪದ” ಆಲ್ಟಿನೊ” ಹೆಬ್ಬಾವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾವಳಕಟ್ಟೆ ಎಂಬಲ್ಲಿ ಕಾಣಿಸಿಕೊಂಡಿದ್ದು, ಸುರಕ್ಷಿತವಾಗಿ ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ. ಬಂಟ್ವಾಳದ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಸಿಕೊಂಡಿದ್ದು, ನಂತರ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಹಾವಿನ ಬಗ್ಗೆ ತಿಳಿಸಿದಾಗ ಅವರು ಕೂಡಲೇ ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದು, ಅವರ ಅದೇಶದಂತೆ ಪಿಲಿಕುಳಕ್ಕೆ ನಿಸರ್ಗ ದಾಮಕ್ಕೆ ನೀಡಿದ್ದಾರೆ . ಇಂತಹ ಬಿಳಿ […]
ವಿದ್ಯುತ್ ಬಿಲ್ ಕುರಿತು ಗೊಂದಲ ಸರಕಾರ ಇನ್ನೂ ಸರಿಪಡಿಸಿಲ್ಲ: ರಮಾನಾಥ ರೈ
ಮಂಗಳೂರು: ವಿದ್ಯುತ್ ಬಿಲ್ ಕುರಿತಾದ ಗೊಂದಲವನ್ನು ಸರಕಾರ ಇನ್ನೂ ಸರಿಪಡಿಸಿಲ್ಲ. ಸಿಎಂ ಮಾತನ್ನು ಮೆಸ್ಕಾಂನವರು ಕೇಳ್ತಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿದ್ಯುತ್ ಬಿಲ್ ಪ್ರತ್ಯೇಕವಾಗಿ ವಿಂಗಡಿಸಿ ಜನರಿಗೆ ನೀಡಬೇಕಿತ್ತು. ಆದ್ರೆ ಎರಡು ತಿಂಗಳ ಬಿಲ್ ಒಂದೇ ಬಿಲ್ ಗೆ ಸೇರಿಸಿ ನೀಡಿರೋದ್ರಿಂದ ವಿದ್ಯುತ್ ಬಿಲ್ ಹೆಚ್ಚುವರಿಯಾಗಿದೆ. ಹೀಗಾಗಿ ಕೊರೊನಾ ಸಮಯದಲ್ಲಿ ಜನರಿಗೆ ನೊವಿನ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ವಿದ್ಯುತ್ […]
ಉಡುಪಿ: ಮುಂಬೈನಿಂದ ಬಂದಿರುವ ಮಗು ಸಹಿತ 92 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಮುಂಬೈಯಿಂದ ಉಡುಪಿ ಜಿಲ್ಲೆಗೆ ಬಂದ 92 ಮಂದಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರ ಪೈಕಿ ಒಂದು ಮಗು ಸಹಿತ 78 ಪುರುಷರು ಹಾಗೂ 13 ಮಹಿಳೆಯರು ಇದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 82 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಕೋವಿಡ್-19 ನಿಂದ ನಷ್ಠ: ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ
ಉಡುಪಿ, ಜೂನ್ 4: ಕೋವಿಡ್-19 ರ ಕಾರಣ ದೇಶದಲ್ಲಿ ವಿದಿಸಿರುವ ಲಾಕ್ ಡೌನ್ ನಿಂದ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್ ಗೆ ರೂ. 15,000 ಪರಿಹಾರವನ್ನು ಗರಿಷ್ಟ 1.00 ಹೆಕ್ಟೇರ್ ವಿಸ್ತೀರ್ಣಕ್ಕೆ ಘೋಷಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಬಾಳೆ, ಅನಾನಸ್ಸು, ಕಲ್ಲಂಗಡಿ ಹಾಗೂ ಕರಬೂಜ ಬೆಳೆಗಳಿಗೆ ಪರಿಹಾರ ನೀಡಲು ಅವಕಾಶ ಕಲ್ಲಿಸಲಾಗಿರುತ್ತದೆ. ಅನಾನಸ್ಸು ಬೆಳೆಗೆ ಸಂಬಂದಿಸಿದಂತೆ 2019-20 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯ ಅನುಗುಣವಾಗಿಪರಿಹಾರವನ್ನು ವಿತರಿಸಲಾಗುವುದು. ಆಯ್ಕೆಯಾಗುವ ರೈತರ […]
ಇನ್ನೆರಡು ತಿಂಗಳು ಶಾಲೆ ಬೇಡವೇ ಬೇಡ: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಟ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಟ್ವೀಟ್ ಮಾಡಿ ‘ಎರಡು ತಿಂಗಳ ನಂತರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಶಾಲೆಗಳ ಪುನರಾರಂಭದ ಬಗ್ಗೆ ಯೋಚನೆ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ. ಪೋಷಕರು ಆತಂಕಕ್ಕೆ ಒಳಗಾಗಿದ್ದು ಶಾಲೆ ಪ್ರಾರಂಭದ ಪ್ರಸ್ತಾವವನ್ನು ವಿರೋಧಿಸುತ್ತಿರುವುದನ್ನು ಮುಖ್ಯಮಂತ್ರಿಗಳು ಗಮನಿಸಬೇಕು. ಬ್ರಿಟನ್, ಫ್ರಾನ್ಸ್, ಇಟಲಿ ಇತರ ದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಿದ […]