ಮಹಿಳಾ ಅಭಿವೃಧ್ದಿ ನಿಗಮದಿಂದ ಮಹಿಳೆಯರಿಗೆ ಸಾಲ ಯೋಜನೆ
ಉಡುಪಿ ಜೂನ್ 2: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಉದ್ಯೋಗಿನಿ ಯೋಜನೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಮಂಜೂರಾದಲ್ಲಿ ನಿಗಮದಿಂದ ಸಹಾಯಧನ, ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ ಸಮೃದ್ಧಿ ಯೋಜನೆಯಡಿ ಪ್ರೋತ್ಸಾಹಧನ, ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಚೇತನಾ ಯೋಜನೆಯಡಿ ಬಡ್ಡಿ ರಹಿತ ಸಾಲ ಮತ್ತು ಸಹಾಯಧನ ಹಾಗೂ ಇಲಾಖೆಯ ಸ್ತ್ರೀ-ಶಕ್ತಿ ಗುಂಪುಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬಡ್ಡಿ ರಹಿತ […]
ಜೂ. 4ರಿಂದ ಉಡುಪಿ ನಗರದ ರಸ್ತೆ ಬದಿಯಲ್ಲಿ ತರಕಾರಿ ಹಣ್ಣುಹಂಪಲು ಮಾರಾಟ ನಿಷೇಧ
ಉಡುಪಿ ಜೂನ್ 2: ಉಡುಪಿ ನಗರದ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು ಮತ್ತು ರಸ್ತೆ ಬದಿ ವಾಹನಗಳಲ್ಲಿ ಹಣ್ಣು, ತರಕಾರಿ ಹಾಗೂ ರಖಂ (ಹೋಲ್ಸೇಲ್) ವ್ಯಾಪಾರಿಗಳು ಜೂನ್ 4 ರಿಂದ , ತಮ್ಮ ಎಲ್ಲಾ ವ್ಯಾಪಾರ, ವಹಿವಾಟುಗಳನ್ನು , ನಗರದ ಆದಿ ಉಡುಪಿ ಬಳಿ ಇರುವ ಎ.ಪಿಎಂ.ಸಿ ಮಾರುಕಟ್ಟೆಗೆ ಸ್ಥಳಾಂತರಿಸುವುದು. ಯಾವುದೇ ತರಕಾರಿ, ಹಣ್ಣು ಹಂಪಲು ವ್ಯಾಪಾರಸ್ಥರು ಎ.ಪಿ.ಎಂ.ಸಿ ಮಾರುಕಟ್ಟೆಯ ಆವರಣವನ್ನು ಹೊರತುಪಡಿಸಿ, ನಗರದ ಯಾವುದೇ ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಈ ಆದೇಶವನ್ನು […]
ಅಸ್ಸಾಂ: ಮಳೆ, ಭೂಕುಸಿತಕ್ಕೆ 20 ಜನ ಬಲಿ
ಅಸ್ಸಾಂನಲ್ಲಿ ಭಾರಿ ಮಳೆ, ಭೂಕುಸಿತ ಸಂಭವಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕಛಾರ್, ಕರೀಮ್ಗಂಜ್ ಮತ್ತು ಹೈಲಾಕಂಡಿಗಳಲ್ಲಿ ಮಂಗಳವಾರ ನಸುಕಿನಲ್ಲಿ ಮಳೆಯಾಗಿ ಭೂಕುಸಿತ ಸಂಭವಿಸಿದೆ. ಕಛಾರ್ ನ ಕೋಲಾಪುರ್ ಗ್ರಾಮದಲ್ಲಿ ಬೆಳಿಗ್ಗೆ ಐದು ಗಂಟೆಯ ವೇಳೆಗೆ ಒಂದೇ ಕುಟುಂಬದ ಏಳು ಮಂದಿ ಭೂಕುಸಿತದಲ್ಲಿ ಮೃತಪಟ್ಟಿದ್ದಾರೆ. ಕರೀಮ್ಗಂಜ್ ಜಿಲ್ಲೆಯ ಮೋಹನ್ಪುರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಏಳು ಮಂದಿ ಹಾಗೂ ಹೈಲಾಕಂಡಿಯಲ್ಲಿ ಆರು ಮಂದಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಮನೆಯ ಮೇಲೆ ಭೂಕುಸಿತಗೊಂಡಗ ಇವರೆಲ್ಲ ನಿದ್ರಿಸುತ್ತಿದ್ದರು […]
ಉಡುಪಿ: ಒಂದೇ ದಿನ ದ್ವಿಶತಕ ಬಾರಿಸಿತು ಕೋರೋನಾ: 410 ಒಟ್ಟು ಸೋಂಕಿತರು
ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಇನ್ನೂರರ ಗಡಿದಾಟಿದೆ, ಇಂದು ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 210 ಜನರಿಗೆ ಸೋಂಕು ದೃಢವಾಗಿದ್ದು ರಾಜ್ಯದಲ್ಲೇ ಇದೀಗ ಉಡುಪಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ್, ಉಡುಪಿಯಲ್ಲಿ ಇಂದು 210 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಧೃಡವಾಗಿದೆ ಎಂದಿದ್ದಾರೆ. ಸೋಂಕು ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದೆ ಮಹಾರಾಷ್ಟ್ರ ದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ […]
ಮಕ್ಕಳೇ ಶಾಲೆ ಆರಂಭವಾಗುತ್ತಿದೆ..ಹೋಗಲು ರೆಡಿಯಾಗಿ..!
ಉಡುಪಿ: ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಜುಲೈ 1ರಿಂದ ಆರಂಭಿಸುವ ಕುರಿತಂತೆ ರಾಜ್ಯ ಸರ್ಕಾರ ಜೂನ್ 12ರಂದು ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಎಲ್ಲ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಜುಲೈ 1 ರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಗಳನ್ನು ಪುನರಾರಂಭಿಸುವ ಕುರಿತಂತೆ […]