ಉಡುಪಿ ಡಿಸಿ ವಿರುದ್ಧ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಿಎಂಗೆ ದೂರು
ಉಡುಪಿ: ದುಬೈನಿಂದ ಉಡುಪಿಗೆ ಬಂದ ಗರ್ಭಿಣಿಯೊಬ್ಬರ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಅವರನ್ನು ಮನೆಗೆ ಕಳುಹಿಸದೆ ಉಡುಪಿ ಡಿಸಿ ಜಿ. ಜಗದೀಶ್ ಬೇಜವಾವ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಗರ್ಭಿಣಿ ಉಡುಪಿಯ ಲಾಡ್ಜ್ ವೊಂದರಲ್ಲಿ 15 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಆದರೆ ಅವರ ಕ್ವಾರಂಟೈನ್ ಅವಧಿ ಮುಗಿದರೂ ಅವರನ್ನು ಇನ್ನೂ ಅಲ್ಲಿಯೇ ಇರಿಸಲಾಗಿದೆ. ಜಿಲ್ಲಾಡಳಿತ ಸರ್ಕಾರಿ ನಿಯಮ ಸರಿಯಾಗಿ ಪಾಲಿಸಿಲ್ಲ. ಒಂದೆಡೆ ಮನೆಗೆ ಕಳುಹಿಸಿಲ್ಲ. ಅಲ್ಲದೆ ಗರ್ಭಿಣಿಗೆ ಮನೆಯ ಅಹಾರ […]
ಕುಂದಾಪುರ: ಬಾವಿಗೆ ಬಿದ್ದು ವ್ಯಕ್ತಿ ಸಾವು
ಕುಂದಾಪುರ: ಮನೆ ಸಮೀಪದ ಬಾವಿಗೆ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ನಡೆದಿದೆ. ಗುಡ್ಡಮ್ಮಾಡಿ ನಿವಾಸಿ ವಾಲ್ಟರ್ ಡಿ ಅಲ್ಮೇಡಾ(52) ಮೃತ ದುರ್ದೈವಿ. ಸಹೋದರನ ಕಾಪಾಡಲು ಬಾವಿಗೆ ಇಳಿದ ಅಲ್ಬನ್ ಅಲ್ಮೆಡಾ ಅಸ್ವಸ್ಥಗೊಂಡು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ವಿವರ: ಕಳೆದ ಕೆಲ ತಿಂಗಳ ಹಿಂದೆ ತೋಡಿರುವ 20 ಅಡಿ ಆಳದ 5 ಅಡಿ ಅಗಲವಿರುವ ಬಾವಿಗೆ ಇಂದು ಬೆಳಿಗ್ಗೆ ವಾಲ್ಟರ್ ಅಲ್ಮೇಡಾ ಆಯತಪ್ಪಿ […]
ದ.ಕ ಜಿಲ್ಲೆಯಲ್ಲಿ ಮೂರು ವರ್ಷದ ಮಗು ಸೇರಿದಂತೆ ಇಂದು 11 ಮಂದಿಗೆ ಕೊರೊನಾ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ 11 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ. 11 ಮಂದಿಯಲ್ಲಿ 7 ಮಂದಿ ಮಹಿಳೆಯರಿಗೆ 4 ಮಂದಿ ಪುರುಷರಿಗೆ ಕೊರೊನಾ ದೃಢಪಟ್ಟಿದೆ. 35 ವರ್ಷದ ಗಂಡು, 36 ವರ್ಷದ ಹೆಣ್ಣು, 46 ವರ್ಷದ ಗಂಡು, 11 ವರ್ಷದ ಬಾಲಕಿ, 59 ವರ್ಷದ ಮಹಿಳೆ, 3 ವರ್ಷದ ಹೆಣ್ಣು ಮಗು, 37 ವರ್ಷದ ಹೆಣ್ಣು, […]
ಉಡುಪಿ: ಮುಂಬೈನಿಂದ ಬಂದ ಒಂಭತ್ತು ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 9 ವರ್ಷದ ಬಾಲಕ ಸೇರಿದಂತೆ ಜಿಲ್ಲೆಯಲ್ಲಿ ಇಂದು ಹೊಸದಾಗಿ ಒಂಭತ್ತು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರಾಜ್ಯ ಕುಟುಂಬ ಮತ್ತು ಆರೋಗ್ಯ ಇಲಾಖೆಯ ಮಧ್ಯಾಹ್ನ ಬುಲೆಟಿನ್ ನಲ್ಲಿ ತಿಳಿದುಬಂದಿದೆ. ಕೊರೊನಾ ಸೋಂಕು ಕಾಣಿಸಿಕೊಂಡವರೆಲ್ಲ ಮುಂಬೈನಿಂದ ಬಂದಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು.ಇಂದಿನ 9 ಸೋಂಕಿತ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.
ಜೂನ್1: ದೇವಸ್ಥಾನ, ಮಸೀದಿ, ಚರ್ಚ್ಗಳನ್ನು ತೆರೆಯಲು ಅವಕಾಶ: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಜೂ.1ರಿಂದ ದೇವಸ್ಥಾನ, ಮಸೀದಿ, ಚರ್ಚ್ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅವರು ಮಾಜಿ ಪ್ರಧಾನಿ ಜವಹರಲಾಲ್ ನೆಹರು ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದರೆ, ಚರ್ಚ್ ಮತ್ತು ಮಸೀದಿಗಳಿಗೂ ಅದೇ ನೀತಿ ಅನ್ವಯ ಆಗುತ್ತದೆ ಎಂದು ತಿಳಿಸಿದರು.