ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಗಲಾಟೆ, ಕಾರು ಪಲ್ಟಿ
ಕುಂದಾಪುರ: ಕ್ಷುಲ್ಲಕ ಕಾರಣವೊಂದಕ್ಕೆ ಇತ್ತಂಡಗಳ ನಡುವೆ ನಡೆದ ಗಲಾಟೆಯ ಬಳಿಕ ಎರಡು ತಂಡಗಳು ಪ್ರತ್ಯೇಕ ಎರಡು ಕಾರುಗಳಲ್ಲಿ ಒಂದನ್ನೊಂದು ಕಾರು ಹಿಂಬಾಲಿಸಿಕೊಂಡು ಚೇಸ್ ಮಾಡಿದ ಪರಿಣಾಮ ಒಂದು ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಎರಡು ತಂಡಗಳ ವಿರುದ್ದ ಗಂಗೊಳ್ಳಿ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ಕಡೆಯಿಂದ ಎರಡು ಕಾರುಗಳಲ್ಲಿ ಬಂದ ಎರಡು ತಂಡಗಳ ಪೈಕಿ ತಲ್ಲೂರು- ನೇರಳಕಟ್ಟೆ ಮಾರ್ಗಮದ್ಯೆ […]
ಕ್ವಾರಂಟೈನ್ಗಾಗಿ ಹೋಟೇಲ್ನಲ್ಲಿ ಉಳಿದುಕೊಂಡಿರುವವರ ಬಗ್ಗೆ ಎಚ್ಚರಿಕೆಯಿರಲಿ: ಆರೋಗ್ಯ ಇಲಾಖೆ ಜಿಲ್ಲಾ ಸಲಹೆಗಾರ ಗುರುರಾಜ್
ಕುಂದಾಪುರ : ಕ್ವಾರಂಟೈನ್ಗಾಗಿ ಹೋಟೇಲ್ನಲ್ಲಿ ಉಳಿದುಕೊಂಡಿರುವವರ ಬಗ್ಗೆ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ಹೋಟೇಲ್ನವರು ತೆಗೆದುಕೊಳ್ಳಬೇಕು. ಒಮ್ಮೆ ಉಪಯೋಗಿಸಿ ಎಸೆದ ವಸ್ತುಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ, ವೈಜ್ಞಾನಿಕ ಕ್ರಮದಲ್ಲಿ ಅದರ ವಿಲೆವಾರಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಲಹೆಗಾರ ಗುರುರಾಜ್ ಹೇಳಿದ್ದಾರೆ. ಕ್ವಾರಂಟೈನ್ನಲ್ಲಿ ಇರಬೇಕಾದವರನ್ನು ಇರಿಸಿಕೊಂಡು ಸೇವೆ ನೀಡಲು ಒಪ್ಪಿದ ಹೋಟೆಲ್ ಮಾಲಕರು ಸಿಬಂದಿಯ ಕುರಿತು ಜಾಗರೂಕರಾಗಿರಬೇಕು. ಜತೆಗೆ ಕ್ವಾರಂಟೈನ್ನಲ್ಲಿರುವವರ ಕಾಳಜಿ, ತ್ಯಾಜ್ಯ ವಿಲೇ, ಸಂಪರ್ಕ ಇತ್ಯಾದಿಗಳ ಕುರಿತು ಸ್ಪಷ್ಟ ಮಾಹಿತಿ ಪಡೆದಿರಬೇಕು ಎಂದು ಇಲ್ಲಿನ ತಾಲ್ಲೂಕು ಪಂಚಾಯಿತಿಯ […]
ಎಕ್ಸಲೆಂಟ್ ಕಾಲೇಜ್: ಆನ್ ಲೈನ್ ತರಬೇತಿ ಆರಂಭ
ಕುಂದಾಪುರ: ಕುಂದಾಪುರ ಹಾಲಾಡಿ ರಸ್ತೆಯ ಸುಣ್ಣಾರಿ ಎಕ್ಸಲೆಂಟ್ ಹೈ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆನ್ ಲೈನ್ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ: ಪ್ರೌಢಶಾಲಾ ವಿಭಾಗದ ಎಲ್ಲಾ ವಿಷಯಗಳು ಪದವಿಪೂರ್ವ ವಿಭಾಗದ ಸೈನ್ಸ್ ಹಾಗೂ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ಆರಂಭಿಸಲಾಗಿದೆ. ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಜೆಇಇ ಮತ್ತು ನೀಟ್ ತರಬೇತಿಗಳನ್ನು ಪ್ರಾರಂಭಿಸಲಾಗುವುದು. ರಜಾ ವೇಳೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮುಂದಿನ ಅಭಿವೃದ್ಧಿಗಾಗಿ ಆನ್ […]
ಹೊರರಾಜ್ಯದಿಂದ ಉಡುಪಿಗೆ ಬಂದ 16 ಮಕ್ಕಳು ಸಹಿತ 27 ಮಂದಿಗೆ ಕೊರೊನಾ ಸೋಂಕು: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆ
ಉಡುಪಿ: ಹೊರರಾಜ್ಯದಿಂದ ಉಡುಪಿಗೆ ಬಂದಿರುವ 16 ಮಕ್ಕಳು ಸೇರಿದಂತೆ ಒಟ್ಟು 27 ಮಂದಿಯಲ್ಲಿ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ವಿಡಿಯೋ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇಂದು 199 ಮಂದಿಯ ಕೊರೊನಾ ಪರೀಕ್ಷಾ ವರದಿ ಬಂದಿದ್ದು, ಅದರಲ್ಲಿ 27 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸೋಂಕಿತರ ಪೈಕಿ ಮುಂಬೈಯಿಂದ 23, ತೆಲಂಗಾಣದಿಂದ 3 ಹಾಗೂ ಕೇರಳದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರು ಒಳಗೊಂಡಿದ್ದಾರೆ ಎಂದು […]
ಮೂಡುಬಿದಿರೆ: ಕ್ವಾರಂಟೈನ್ ನಲ್ಲಿದ್ದ 55 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಮೂಡುಬಿದಿರೆ: ಕ್ವಾರಂಟೈನ್ ನಲ್ಲಿದ್ದ ಕಡಂದಲೆ ನಿವಾಸಿ ದಯಾನಂದ ಪೂಜಾರಿ( 55) ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ದಯಾನಂದ ಪೂಜಾರಿ ಮುಂಬೈಯಲ್ಲಿ ಹೋಟೆಲ್ ಕೆಲಸದಲ್ಲಿದ್ದರು. ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಬಂದಿದ್ದರು. ಊರಿಗೆ ಬಂದವರನ್ನು ತಡರಾತ್ರಿ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇಂದು ಮುಂಜಾನೆ 3 ಗಂಟೆಯ ಹೊತ್ತಿಗೆ ಶಾಲೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಕೋವಿಡ್ ಪರೀಕ್ಷೆಗಾಗಿಕೊಂಡೊಯ್ಯಲಾಗಿದೆ. ಈ […]