ಬೀಡಿನಗುಡ್ಡೆ ಸ್ಮಶಾನದಲ್ಲಿ ಕೆಎಂಸಿಯಲ್ಲಿ ಮೃತಪಟ್ಟ ಕೊರೊನಾ ಸೋಂಕಿತನ ಅಂತ್ಯಕ್ರಿಯೆ
ಉಡುಪಿ: ಗುರುವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಕೊರೊನಾ ಪಾಸಿಟಿವ್ ಆದ ಕುಂದಾಪುರ ತಾಲ್ಲೂಕಿನ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತ ಇಂದು ನಗರದ ಬೀಡಿನಗುಡ್ಡೆ ಸ್ಮಶಾನದಲ್ಲಿ ನೆರವೇರಿಸಿತು. 54 ವರ್ಷದ ವ್ಯಕ್ತಿ ಈಚೆಗೆ ಮುಂಬೈನಿಂದ ಜಿಲ್ಲೆಗೆ ಬಂದಿದ್ದು, ಅವರು ಸಹಿತ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉದ್ಯಾವರ ಎಸ್ ಡಿಎಂನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ವ್ಯಕ್ತಿಗೆ ಮೇ 13 ರಂದು ಹೃದಯಾಘಾತವಾಗಿದ್ದು, ಮೇ 14ರಂದು ಮಣಿಪಾಲ ಕೆಎಂಸಿ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕ್ವಾರಂಟೈನ್ ನಲ್ಲಿ ಇದ್ದ ಕಾರಣ ವ್ಯಕ್ತಿ […]
ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬನ್ನಂಜೆ ವ್ಯಕ್ತಿಯ ಕೊರೊನಾ ವರದಿ ನೆಗೆಟಿವ್: ಡಿಎಚ್ಒ
ಉಡುಪಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮೇ 16ರಂದು ಮೃತಪಟ್ಟಿದ್ದ ಬನ್ನಂಜೆಯ 44 ವರ್ಷದ ವ್ಯಕ್ತಿಯ ವೈದ್ಯಕೀಯ ವರದಿ ಇಂದು ಬಂದಿದ್ದು, ಅದರಲ್ಲಿ ವ್ಯಕ್ತಿ ಹೃದಯಾಘಾತದಿಂದ ಸಾವನ್ನಾಪ್ಪಿದ್ದಾರೆಂದು ದೃಢಪಟ್ಟಿದೆ. ಅಲ್ಲದೆ, ಮೃತ ವ್ಯಕ್ತಿಯ ಕೊರೊನಾ ಪರೀಕ್ಷಾ ವರದಿಯಲ್ಲೂ ನೆಗೆಟಿವ್ ಬಂದಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆಯ ಜತೆಗೆ ಶೀತ,ಕೆಮ್ಮು ಹಾಗೂ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಹಾಗಾಗಿ ಮೃತ ವ್ಯಕ್ತಿಯ ಗಂಟಲಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಇಂದು […]
ಹೆಬ್ರಿ: ಅರಣ್ಯದಲ್ಲಿ ಯುವಕನ್ನೊಬ್ಬನ ಶವ ಪತ್ತೆ
ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಯುವಕನೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಶಿವ ಕುಮಾರ್ (28 ) ಮುದ್ರಾಡಿ ಗ್ರಾಮದ ಜಕ್ಕನಾಡಿ ಪಂಚಮಿ ನಿವಾಸಿ ಸಂಜೀವ ಸೇರಿಗಾರ ಅವರ ಮಗ. ಇವರು ಮೇ 13ರಂದು ಬೆಳಗ್ಗೆ 10 ಗಂಟೆಗೆ ತಾವು ಕೆಲಸ ಮಾಡುತ್ತಿದ್ದ ಹೆಬ್ರಿ ಗ್ರಾಮದ ಜರವತ್ತು ಎಂಬಲ್ಲಿಂದ ಕಾಣೆಯಾಗಿದ್ದರು. ಶನಿವಾರ ಸಂಜೆ ಹೆಬ್ರಿ ಗ್ರಾಮದ ಜರವತ್ತು ಅರಣ್ಯ ಪ್ರದೇಶದ ನಡುವೆ ಶಿವ ಕುಮಾರ್ ಅವರ ಮೃತದೇಹವು […]
ಕೊರೊನಾ ಲಕ್ಷಣದಿಂದ ಬಳಲುತ್ತಿದ್ದ ಬನ್ನಂಜೆ ನಿವಾಸಿ ಸಾವು: ವರದಿಗಾಗಿ ಕಾಯುತ್ತಿರುವ ಜಿಲ್ಲಾಡಳಿತ
ಉಡುಪಿ: ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಉಡುಪಿ ಬನ್ನಂಜೆ ವಾರ್ಡ್ ನ 44 ವರ್ಷದ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಈ ವ್ಯಕ್ತಿಯು ಕಳೆದ ಮೂರು ದಿನಗಳಿಂದ ಶೀತ, ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಾಪ್ಪಿದ್ದಾರೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಕೊರೊನಾ ಪರೀಕ್ಷೆಯ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.