ಕುಂದಾಪುರ-ಉಡುಪಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತದಿಂದ ಗ್ರೀನ್ ಸಿಗ್ನಲ್

ಕುಂದಾಪುರ: ಲಾಕ್‍ಡೌನ್‍ನಿಂದಾಗಿ ಕಳೆದ ತಿಂಗಳುಗಳಿಂದ ನಿರ್ಬಂಧ ಹೇರಿದ್ದ ಬಸ್ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಡಿದೆ. ನಗರದಲ್ಲಿ ಬುಧವಾರ ಕೆಲ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳು ರಸ್ತೆಗಿಳಿದಿದ್ದು, ಜನಸಂಚಾರಕ್ಕೆ ಅನುವುಮಾಡಿಕೊಟ್ಟಿದೆ. ಬುಧವಾರ ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಕೆಲ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಉಡುಪಿಯತ್ತ ತೆರಳಿದೆ. ಸಾರ್ವಜನಿಕರ ಓಡಾಟ ಕಡಿಮೆ ಇರುವ ಹಿನ್ನೆಲೆ ಬಸ್‍ಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಭಾರತಿ ಸಂಸ್ಥೆಯ ಆರು ಬಸ್‍ಗಳು ಬಿಟ್ಟರೆ ಬೇರಾವುದೇ ಖಾಸಗಿ ಬಸ್‍ಗಳು ರಸ್ತೆಗಿಳಿದಿಲ್ಲ. ಪ್ರಯಾಣಿಕರ ಸಂಖ್ಯೆ ಭಾರೀ ಇಳಿಮುಖವಾದ ಹಿನ್ನೆಲೆ […]

ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ ಮೇ 13:  ಕೋವಿಡ್-19 ರ ಕಾರಣ ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ , ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ರೂ. 25,000 ಪರಿಹಾರವನ್ನು ಗರಿಷ್ಟ 1.00 ಹೆಕ್ಟೇರ್ ವಿಸ್ತೀರ್ಣಕ್ಕೆ ಮುಖ್ಯಮಂತ್ರಿಯವರು ಘೋಷಿಸಿದ್ದು,  ಪ್ರಸ್ತುತ  ಘೋಷಿಸಿರುವ ಪರಿಹಾರವನ್ನು ರೈತರಿಗೆ ಪಾವತಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಪರಿಹಾರವನ್ನು  2019-20  ನೇ ಸಾಲಿನಲ್ಲಿ  ಬೆಳೆ ಸಮೀಕ್ಷೆಯ  ಮಾಹಿತಿಯ ಆಧಾರದಲ್ಲಿ ಪಾವತಿಸಲಾಗುವುದು.   ರೈತರು ತಾವು  ಬೆಳೆದಿರುವ ಬಹು ವಾರ್ಷಿಕ ಪುಷ್ಪ ಬೆಳೆಯು 2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯಲ್ಲಿ […]

ತನ್ನ ಮೇಲೆ ಕೊರೋನಾ ಪಾಸಿಟಿವ್ ಅನ್ನೋ ಸುಳ್ಳು ಅಪ್ರಚಾರಕ್ಕೆ ನೊಂದು ಕಾರ್ಕಳದ ಈ ವ್ಯಕ್ತಿ ಬರೆದ ಭಾವುಕ ಪತ್ರ ಓದಿ!

ತನ್ನ ಮೇಲೆ ಸುಖಾಸುಮ್ಮನೆ ಕೊರೋನಾ ಪಾಸಿಟಿವ್ ಎಂದು ಅಪ್ರಚಾರ ಮಾಡಿದಾಗ ಈ ವ್ಯಕ್ತಿ ನೋವಿನಿಂದ ಕಂಗಾಲಾಗುತ್ತಾರೆ. ತನಗ್ಯಾವ ಕೊರೋನಾವೂ ಇಲ್ಲ ಎಂದು ವೈದ್ಯಕೀಯ ದೃಢೀಕರಣ ವರದಿ ಬಗ್ಗೆ ಹೇಳಿದರೂ ಜನರು ಇವರನ್ನು ವಿಚಿತ್ರವಾಗಿ ನೋಡತೊಡಗಿದಾಗ ಈ ವ್ಯಕ್ತಿ ಕುಸಿದು ಹೋಗುತ್ತಾರೆ. ಅದೇ ನೋವಿನಲ್ಲಿ ಅವರೊಂದು ಪತ್ರ ಬರೆಯುತ್ತಾರೆ.ಈ ಪತ್ರದಲ್ಲಿ ಜನರ ಮನಃಸ್ಥಿತಿಯ ಬಗ್ಗೆ ವಿಷಾದ ವ್ಯಕ್ತವಾಗಿದೆ. ಈ ಪತ್ರವನ್ನು ನೀವೂ ಓದಿ. ಸುಮ್ಮಸುಮ್ಮನೆ ಕೊರೋನಾ ಹೆಸರು ಬಳಸಿ ಮುಗ್ದ ಮನಸ್ಸುಗಳ ಭವಿಷ್ಯವನ್ನು ಹಾಳುಗೆಡವದಿರೋಣ ನಮ್ಮ ಸ್ಥಿತಿ ಯಾರಿಗೂ […]

ದ.ಕ. ಜಿಲ್ಲೆ: ಮಹಾಮಾರಿ ಕೊರೊನಾಗೆ ನಾಲ್ಕನೇ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ 4 ನೇ ಬಲಿಯಾಗಿದೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಬುಧವಾರ ಕೊರೋನಾಗೆ ಬಲಿಯಾಗಿದ್ದಾರೆ‌. ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಳುತ್ತಿದ್ದ ಅವರಿಗೆ ಎಪ್ರಿಲ್ 30 ರಂದು ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಅವರಿಗೆ ಫಸ್ಟ್ ನ್ಯೂರೋ ಆಸ್ಪತ್ರೆಯ ಸ್ವೀಪರ್ ನ ಸಂಪರ್ಕದಿಂದ ಸೋಂಕು ಹರಡಿತ್ತು. ಮಹಿಳೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಪಾಸಿಟಿವ್ ನಂತರ ಇವರಿಗೆ ಮಂಗಳೂರಿನ ಕೋವಿಡ್ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆ […]

ಮಹಾರಾಷ್ಟ್ರದಿಂದ ಆಗಮಿಸುವ ಉಡುಪಿ ಜಿಲ್ಲೆಯ ನಾಗರೀಕರಿಗೆ ಜಿಲ್ಲಾಡಳಿತದಿಂದ ಬೆಳಗಾವಿಯ ಗಡಿಯಲ್ಲಿ ಸಹಾಯ ಕೇಂದ್ರ ಆರಂಭ

ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬರುವ ಸಾರ್ವಜನಿಕರಿಗೆ, ರಾಜ್ಯಕ್ಕೆ  ಪ್ರವೇಶಿಸಲು ಅಗತ್ಯ ನೆರವು ನೀಡುವ ಉದ್ದೇಶದಿಂದ, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆಯಂತೆ ಉಡುಪಿಯಿಂದ ತೆರಳಿರುವ ಅಧಿಕಾರಿಗಳ ತಂಡ, ಬೆಳಗಾವಿಯ  ಗಡಿಭಾಗವಾದ ನಿಪ್ಪಾಣಿಯಲ್ಲಿ ತೆರದಿರುವ  ಸಹಾಯಕೇಂದ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಾರಾಷ್ಟ್ರದಿಂದ ಬರುವ ಜಿಲ್ಲೆಯ ನಾಗರೀಕರ, ಉಡುಪಿ ಜಿಲ್ಲೆಯಲ್ಲಿನ ವಿಳಾಸದ ಕುರಿತು ಪರಿಶೀಲನೆ ನಡೆಸಿ ಅದನ್ನು ದೃಢೀಕರಿಸಿ, ಅವರು ರಾಜ್ಯ ಪ್ರವೇಶಿಸಲು ಸಹಾಯ ಮಾಡುತ್ತಿದ್ದು ಮಾತ್ರವಲ್ಲದೇ, ಉಡುಪಿ ಜಿಲ್ಲೆಗೆ ಆಗಮಿಸಿದ ನಂತರದ ಇಲ್ಲಿನ ಕ್ವಾರಂಟೈನ್ ಕ್ರಮಗಳು, ಜಿಲ್ಲಾಡಳಿತದಿಂದ ಒದಗಿಸುವ ಸೌಲಭ್ಯಗಳು, […]