ಅರ್ಚಕರ ಸಂಕಷ್ಟ ಪರಿಹರಿಸಲು ಮುಂದಾದ ಮುಜರಾಯಿ ಇಲಾಖೆ: 34 ಸಾವಿರ ಅರ್ಚಕರಿಗೆ ದಿನಸಿ ಕಿಟ್: ಸಚಿವ ಕೋಟ
ಉಡುಪಿ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳ ಅರ್ಚಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದೀಗ ಮುಜರಾಯಿ ಇಲಾಖೆ ಅರ್ಚಕರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಅವರ ಸಂಕಷ್ಟಕ್ಕೆ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ 34 ಸಾವಿರ ಅರ್ಚಕರಿಗೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಲು ನಿರ್ಧರಿಸಲಾಗಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮೂಲಕ ಕಿಟ್ ವಿತರಣೆ ಕಾರ್ಯ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಒಂದು […]
ಉಡುಪಿ ಜಿಲ್ಲೆ: ತಂಬಾಕು ಉತ್ಪನ್ನಗಳ ಮಾರಾಟ ಬಳಕೆಗೆ ಬ್ರೇಕ್, ಉಲ್ಲಂಘಿಸಿದಲ್ಲಿ ಕಾದಿದೆ ಕಠಿಣ ಶಿಕ್ಷೆ
ಉಡುಪಿ: ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಎನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ ತಂಬಾಕು ವಸ್ತುಗಳನ್ನು ನಿಷೇಧಿಸಲಾಗಿದೆ. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್‌ಗಳು ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರೆ ಭಾಗಗಳಿಗೆ […]
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಮೂರು ಮಂದಿಗೆ ಕೊರೋನಾ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂರು ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಡಪಟ್ಟಿದೆ. ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನಿಗೆ ಸೋಂಕು ಕಂಡುಬಂದಿದೆ. ಮೇ.1ರಂದು ಕೊರೋನ ಪತ್ತೆಯಾಗಿದ್ದ 69 ವರ್ಷದ P-578 ವೃದ್ದನಿಂದ ಸೋಂಕು ತಗುಲಿದೆ. ಬಂಟ್ವಾಳದಲ್ಲಿ ಮೃತಪಟ್ಟ P-390 ಮಹಿಳೆಯಿಂದ ವೃದ್ದನಿಗೆ ಸೋಂಕು ತಗುಲಿತ್ತು. ಆ ವೃದ್ಧ ಬಂಟ್ವಾಳ ಕಸಬಾದ ಮೃತ ಮಹಿಳೆಯ ಸಂಬಂಧಿಕರು ಮತ್ತು ನೆರೆಮನೆಯವ ವ್ಯಕ್ತಿಯಾಗಿದ್ದರು. ವೃದ್ದನಿಗೆ ಪಾಸಿಟಿವ್ ಹಿನ್ನೆಲೆಯಲ್ಲಿ ಆ […]